ಡೇಟಿಂಗ್ ಲೋಕದಲ್ಲಿನೈಜತೆಯೇ ಜೀವಾಳ
ಲವಲವಿಕೆ ಸುದ್ದಿಲೋಕ
ಇಂಟ್ರೊ: ಯುವ ಜನತೆ ಈಗ ತಮ್ಮ ಪ್ರೀತಿಯಲ್ಲಿನಿಷ್ಠೆಯ ಹುಡಕಾಟಕ್ಕೆ ಇಳಿದಿದೆ.
ಪೀಳಿಗೆಯಿಂದ ಪೀಳಿಗೆಗೆ ಪ್ರೀತಿಯ ವ್ಯಾಖ್ಯಾನ ಬದಲಾಗುತ್ತಿದೆ. ಪ್ರೀತಿ ಹಾಗೂ ಪ್ರೀತಿಸುವ ಮಾನದಂಡ ಬೇರೆಯಾಗುತ್ತದೆ. ಸದ್ಯ ಯುವ ಪೀಳಿಗೆಯ ಪ್ರೇಮ ಸಂಬಂಧ ದೂರಿಗೆ ಒಳಗಾಗುತ್ತಿದೆ. ನಿಂತಲ್ಲಿನಿಲ್ಲದ ಪ್ರೀತಿ ಬಂದು ಹೋಗುವ ಅತಿಥಿಯಾಗಿಯೇ ಹಿರಿಯರ ವಲಯದಲ್ಲಿಗುರುತಿಸಿಕೊಂಡಿದೆ. ಆದರೆ ಒಂದು ವರ್ಗದ ಯುವ ವಲಯದಲ್ಲಿಈಗ ಪ್ರೇಮ ಸಂಬಂಧ ಧನಾತ್ಮಕ ದೃಷ್ಟಿಕೋನದೊಂದಿಗೆ ಹೊಸ ಹುಡುಕಾಟ ಶುರುವಾಗಿದೆ. ಪ್ರೀತಿಯೆಂದರೆ ಬಣ್ಣದ ಬಲೆಯಲ್ಲ, ಅದೊಂದು ಭಾವನಾತ್ಮಕ ಬೆಸುಗೆ ಎಂಬ ವಾಸ್ತವದ ಹಾದಿಯಲ್ಲಿಹೆಜ್ಜೆ ಹಾಕುವವರ ಎದುರಾಗುತ್ತದೆ ನೈಜ ಪ್ರೀತಿ. ಅಂದರೆ ಮನಸ್ಸಿಗೆ ಹತ್ತಿರವಾಗುವ ವ್ಯಕ್ತಿತ್ವವೇ ಸಂಬಂಧವನ್ನು ಬಿಗಿಗೊಳಿಸುವ ಕೀಲಿಕೈ ಎಂಬ ಅರಿವು ಮೂಡಿದೆ ಎನ್ನುತ್ತಾರೆ ತಜ್ಞರು.
ಇತ್ತೀಚಿನ ಸಮೀಕ್ಷೆ ಪ್ರಕಾರ, ಯುವಜನತೆ ಈಗ ಕೇವಲ ಸೌಂದರ್ಯವನ್ನೇ ಪ್ರಮುಖ ಸಂಗತಿಯಾಗಿಟ್ಟುಕೊಂಡು ಸಂಗಾತಿ ಹುಡುಕುತ್ತಿಲ್ಲ. ಹೀಗೆ ಬಂದು ಹಾಗೆ ಹೋಗುವ ಪ್ರೇಮ ಸಂಬಂಧದ ಬಗ್ಗೆ ಆಸಕ್ತಿ ಇಲ್ಲದವರು ಅಂದರೆ ಗಂಭೀರ ಸಂಬಂಧವೊಂದರ ಹುಡುಕಾಟದಲ್ಲಿಇರುವವರು ನಿರ್ದಿಷ್ಟ ಗುಣಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ತಾವು ಇಷ್ಟಪಟ್ಟ ವ್ಯಕ್ತಿಯಲ್ಲಿಭಾವನಾತ್ಮಕ ಪ್ರಾಮಾಣಿಕತೆ ಪರೀಕ್ಷಿಸುತ್ತಾರೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಗೌರವಕ್ಕೇ ಮನ್ನಣೆ ನೀಡುತ್ತಿದ್ದಾರೆ. ಶೇ. 79ರಷ್ಟು ಯುವಜನರು ತಮ್ಮ ಸಂಗಾತಿಯಲ್ಲಿನಿಷ್ಠೆ ಮತ್ತು ಶೇ. 78ರಷ್ಟು ಮಂದಿ ಗೌರವ ಬಯಸುತ್ತಿದ್ದಾರೆ. ಕೇವಲ ಶೇ. 56ರಷ್ಟು ಜನರಿಗೆ ಮಾತ್ರ ಬಾಹ್ಯ ರೂಪ ಮುಖ್ಯವೆನಿಸುತ್ತಿದೆ. ಇನ್ನೊಬ್ಬರನ್ನು ಮೆಚ್ಚಿಸಲು ನಟಿಸುವುದು ಅಥವಾ ನಮ್ಮದಲ್ಲದ ವ್ಯಕ್ತಿತ್ವವನ್ನು ತೋರಿಸಿಕೊಳ್ಳುವುದು ಮಾನಸಿಕವಾಗಿ ದಣಿವು ನೀಡುವ ಕೆಲಸ. ನಾನು ನಾನಾಗಿರಲು ಎಲ್ಲಿಸಾಧ್ಯವೋ, ಅಲ್ಲಿಮಾತ್ರ ನನ್ನ ಪ್ರೀತಿ ಬೆಳೆಯಲು ಸಾಧ್ಯ ಎಂಬುದು ಶೇ. 73ರಷ್ಟು ಯುವಜನರ ದೃಢ ನಿಲುವು.
ಪ್ರೀತಿ ಹುಡುಕಾಟದ ಹೊಸ ಭಾವ
ಈ ಪೀಳಿಗೆಯು ಸಂಬಂಧಗಳನ್ನು ಹೊಸ ದೃಷ್ಟಿಕೋನದಿಂದ ನೋಡುತ್ತಿದೆ. ಸದ್ಯ ಸಾಕಷ್ಟು ಹೆಸರಲ್ಲಿಡೇಟಿಂಗ್ ಟ್ರೆಂಡ್ ಗಳು ಯುವ ವಲಯದಲ್ಲಿಧನಾತ್ಮಕವಾಗಿ ಸೆಳೆಯುತ್ತವೆ. ‘ನನಗೆ ಇದು ಇಷ್ಟ, ಇದು ಇಷ್ಟವಿಲ್ಲ’ ಎಂದು ಮುಚ್ಚುಮರೆಯಿಲ್ಲದೆ ಹೇಳುವ ಧೈರ್ಯ ಅವರಲ್ಲಿದೆ. ಕಷ್ಟದಲ್ಲಿದ್ದಾಗ ಬೆನ್ನಿಗೆ ನಿಲ್ಲುವ, ಭಾವನೆಗಳಿಗೆ ಸ್ಪಂದಿಸುವ ಮನೋಭಾವವನ್ನೇ ಅವರು ಆಸ್ತಿ ಎಂದು ಭಾವಿಸುತ್ತಾರೆ. ಸುಮ್ಮನೆ ತಲೆದೂಗುವುದಕ್ಕಿಂತ, ಭಿನ್ನಾಭಿಪ್ರಾಯವಿದ್ದರೂ ಅದನ್ನು ನೇರವಾಗಿ ಹಂಚಿಕೊಳ್ಳುವ ಪ್ರಾಮಾಣಿಕತೆ ಈಗಿನ ಟ್ರೆಂಡ್ .
ಬಾಕ್ಸ್
ಸುಂದರ ಸಂಬಂಧಕ್ಕಾಗಿ
ಸಂಬಂಧವೊಂದು ಧನಾತ್ಮಕವಾಗಿ ಶುರುವಾಗಿ ದೀರ್ಘ ಕಾಲ ಉಳಿಯಬೇಕು ಅಂದರೆ
ಮೊದಲ ಭೇಟಿಯಲ್ಲೇ ನಿಮ್ಮ ನೈಜ ವ್ಯಕ್ತಿತ್ವವನ್ನು ತೆರೆದಿಡಿ. ಪರಿಪೂರ್ಣವಾಗಿ ಕಾಣುವುದಕ್ಕಿಂತ ಪ್ರಾಮಾಣಿಕವಾಗಿ ಕಾಣುವುದು ಹೆಚ್ಚು ಆಪ್ತ. ಇಷ್ಟ,ಕಷ್ಟಗಳನ್ನು ನೇರವಾಗಿ ಹೇಳುವುದರಿಂದ ಮುಂದೆ ಉಂಟಾಗುವ ಗೊಂದಲಗಳನ್ನು ತಪ್ಪಿಸಬಹುದು. ಸಂಭಾಷಣೆಯಲ್ಲಿಕೇವಲ ನಿಮ್ಮ ಬಗ್ಗೆ ಹೇಳುವುದಕ್ಕಿಂತ, ಎದುರಿಗಿರುವವರ ಭಾವನೆಗಳನ್ನು ಅರಿಯುವ ಕುತೂಹಲ ನಿಮಗಿರಲಿ.
////////////////

