16 ವರ್ಷದಿಂದ ಈಡೇರದ ಬೇಡಿಕೆ, ಉಗ್ರ ಹೋರಾಟ ಎಚ್ಚರಿಕೆ
ನೌಕಾನೆಲೆಯಲ್ಲಿಸ್ಥಳೀಯರಿಗೆ ಉದ್ಯೋಗ ನೀಡಿ
*ಸಂಸದ ಕಾಗೇರಿಯವರಿಗೆ ಸ್ಥಳೀಯರ ಮನವಿ
ವಿಕ ಸುದ್ದಿಲೋಕ ಅಂಕೋಲಾ
ಕಳೆದ 16 ವರ್ಷಗಳಿಂದ ಸೀಬರ್ಡ್ ಯೋಜನೆಯಲ್ಲಿಸ್ಥಳೀಯರಿಗೆ ಉದ್ಯೋಗ ನೀಡುವಂತೆ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಆದರೆ ನಿರಾಶ್ರಿತರಿಗೆ ಉದ್ಯೋಗ ನೀಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಶ್ರೀ ಹಟ್ಟಿಕೇಶ್ವರ ಸ್ಥಳೀಯ ಹಾಗೂ ಬೇಲೆಕೇರಿ ಸೀಬರ್ಡ್ ನಿರಾಶ್ರಿತರ ಕೂಲಿ ಕಾರ್ಮಿಕರ ಅಸಂಘಟಿತರ ಸಂಘದ ಅಧ್ಯಕ್ಷ ಸುನೀಲ ನಾಯ್ಕ ಎಚ್ಚರಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸೋಮವಾರ ಆಗಮಿಸಿದ ಸಂದರ್ಭದಲ್ಲಿಅವರು ಮನವಿ ಸಲ್ಲಿಸಿ ಮಾತನಾಡಿದರು.
‘‘ಕಳೆದ 16 ವರ್ಷಗಳಿಂದ ಸ್ಥಳೀಯರಿಗೆ ಉದ್ಯೋಗಕ್ಕಾಗಿ ಸಲ್ಲಿಸಿದ ರಾಶಿ ರಾಶಿ ಮನವಿಗಳ ಕಡತಗಳಿವೆ. ದೇಶಕ್ಕಾಗಿ ಭೂಮಿ ನೀಡಿ ನಿರಾಶ್ರಿತರಾದವರಿಗೆ ಹಾಗೂ ಸ್ಥಳೀಯರಿಗೆ ತಾಂತ್ರಿಕವಲ್ಲದಿದ್ದರೂ ಲಭ್ಯವಿರುವ ಗುತ್ತಿಗೆ, ವಾಹನ ಚಾಲನೆ, ಸೆಕ್ಯೂರಿಟಿ, ಸಣ್ಣಪುಟ್ಟ ದಿನಗೂಲಿ ನೌಕರಿಗಳನ್ನಾದರೂ ನೀಡಬೇಕು ಎಂದು ಆಗ್ರಹಿಸುತ್ತ ಬಂದಿದ್ದರೂ ಇಲ್ಲಿಯವರೆಗೆ ಸೀಬರ್ಡ್ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಸ್ಥಳೀಯರನ್ನು ಕಡೆಗಣಿಸುತ್ತಲೇ ಬಂದಿದ್ದಾರೆ. ಇತ್ತೀಚೆಗೆ ನೂರಾರು ಹುದ್ದೆಗಳನ್ನು ಹೊರ ರಾಜ್ಯದವರಿಗೆ ನೀಡಿದ್ದಲ್ಲದೆ ಸ್ಥಳೀಯರನ್ನು ಕೆಲಸದಿಂದ ಕೈಬಿಟ್ಟಿದ್ದಾರೆ. ವಾಹನ ಗುತ್ತಿಗೆ, ಡ್ರೈವರ್ ಹುದ್ದೆಯೂ ಸಿಗುತ್ತಿಲ್ಲ’’ಎಂದು ಸುನೀಲ ನಾಯ್ಕ ವಿವರಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘‘ಸ್ಥಳೀಯರಿಗೆ ಉದ್ಯೋಗ ನೀಡಬೇಕಾದದ್ದು ಆದ್ಯ ಕರ್ತವ್ಯವಾಗಿದೆ’’ ಎಂದರು.
ಈ ಸಂದರ್ಭದಲ್ಲಿಮೋಹಿನಿ ನಾಯ್ಕ, ಅಶೋಕ ಗೌಡ ಬಡಗೇರಿ, ಮಹೇಶ ಗೌಡ ಬಡಗೇರಿ, ರತ್ನಾಕರ ಹೊನ್ನಾ ಗೌಡ, ಮಂಜುನಾಥ ನಾಯ್ಕ, ಶಾಂತೇಶ ನಾಯ್ಕ, ಶ್ರೀಧರ ನಾಯ್ಕ ಹಾಗೂ ಹಟ್ಟಿಕೇಶ್ವರ ಸ್ಥಳೀಯ ಹಾಗೂ ಸೀಬರ್ಡ್ ನಿರಾಶ್ರಿತರರ ಕೂಲಿ ಕಾರ್ಮಿಕರ ಅಸಂಘಟಿತರ ಸಂಘದವರು ಮತ್ತು ಹಟ್ಟಿಕೇರಿ, ಅವರ್ಸಾ, ಭಾವಿಕೇರಿ ಗ್ರಾಮಸ್ಥರು ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.
12ಅಂಕೋಲಾ2
ಅಂಕೋಲಾದ ಸೀಬರ್ಡ್ ನೌಕಾನೆಲೆಯಲ್ಲಿಸ್ಥಳೀಯರಿಗೆ ಉದ್ಯೋಗ ನೀಡುವಂತೆ ಸಂಸದ ಕಾಗೇರಿಯವರಿಗೆ ಸ್ಥಳೀಯರು ಮನವಿ ಸಲ್ಲಿಸಿದರು.

