(ಸದ್ಗುರು ಮತ್ತ ಶ್ರೀ ಶ್ರೀ ಅಕ್ಕಪಕ್ಕ ಹಾಕಿಕೊಳ್ಳಿ)
ಆಸೆ ಮತ್ತು ವೈರಾಗ್ಯ
---------
ಶ್ರೀ ಶ್ರೀ ರವಿಶಂಕರ್ ಗುರೂಜಿ
ಆರ್ಟ್ ಆಫ್ ಲಿವಿಂಗ್
--------
ಇಂಟ್ರೋ:
ವೈರಾಗ್ಯವೆಂದರೆ ಏನು? ವೈರಾಗ್ಯ ಸಂತೋಷ ಕೊಡಬಲ್ಲುದೇ? ಈ ಕುರಿತು ಅವಲೋಕನ ಇಲ್ಲಿದೆ.
------
‘ನಾನು ಆಸೆ ಪಡಬಾರದು. ಆಸೆಯು ದುಃಖಕ್ಕೆ ಕಾರಣ. ನನಗೆ ಆಸೆಗಳಿರಬಾರದು. ನನಗೆ ಆಸೆಗಳಿಂದ ಎಂದು ಮುಕ್ತಿ ಸಿಗುತ್ತದೆ?’ ಎನ್ನುವುದೂ ಸಹ ಇನ್ನೊಂದು ಆಸೆಯೇ! ಆಸೆಗಳು ಮೇಲೆ ಏಳುತ್ತಿದ್ದಂತೆಯೇ ಅವುಗಳನ್ನು ಗುರುತಿಸಿ ಮತ್ತು ಬಿಟ್ಟು ಬಿಡಿ. ಈ ಪ್ರಕ್ರಿಯೆಯನ್ನೇ ‘ಸನ್ಯಾಸ’ ಎಂದು ಕರೆಯುತ್ತಾರೆ. ಮೇಲೆ ಏಳುತ್ತಿರುವ ಆಸೆಗಳನ್ನು, ಅವು ಬರುತ್ತಿದ್ದಂತೆಯೇ ಅವುಗಳನ್ನು ಸಮರ್ಪಿಸಿ ಬಿಡಿ ಮತ್ತು ಕೇಂದ್ರೀಕೃತರಾಗಿರಿ. ನಿಮಗೆ ಹೀಗೆ ಮಾಡಲು ಸಾಧ್ಯವಾದಾಗ - ನೀವು ನಿಮ್ಮ ಕೇಂದ್ರದಲ್ಲಿದ್ದಾಗ ಆಗ ನಿಮ್ಮನ್ನು ಯಾವುದೂ ಅಲುಗಾಡಿಸಲು ಸಾಧ್ಯವಿಲ್ಲ. ನಿಮ್ಮನ್ನು ಆ ಕೇಂದ್ರದಿಂದ ಹೊರತರಲು ಯಾವುದಕ್ಕೂ ಸಾಧ್ಯವಾಗುವುದಿಲ್ಲ. ಇಲ್ಲದಿದ್ದರೆ, ಯಾವುದೋ ಒಂದು ಚಿಕ್ಕ ವಿಷಯವು ನಿಮ್ಮನ್ನು ಅಲುಗಾಡಿಸಲು ಸಾಧ್ಯ ಮತ್ತು ನೀವು ದುಃಖಿಗಳಾಗಿ ಬಿಡುತ್ತೀರಿ ಅಥವಾ ಮಗುಚಿ ಬೀಳುತ್ತೀರಿ.
ನೀವು ಯಾವುದರ ಬಗ್ಗೆ ದುಃಖಿಗಳಾಗಿದ್ದೀರಿ? ಅಲ್ಲಿಂದ, ಇಲ್ಲಿಂದ ಬರುವ ಕೆಲವು ಮಾತುಗಳಿಂದಾಗಿಯೇ? ಕೆಲವು ಮಾತುಗಳು ನಿಮ್ಮನ್ನು ದುಃಖಿಗಳಾಗಿ ಮಾಡಿ ಬಿಡುತ್ತವೆ. ನೀವು ಯಾವುದನ್ನು ಹಿಡಿದಿಟ್ಟುಕೊಂಡಿದ್ದೀರಿ? ನೀವು ಯಾವುದಕ್ಕಾಗಿ ಹುಡುಕಾಡುತ್ತಿದ್ದೀರಿ? ಯಾವುದೋ ಒಂದು ದೊಡ್ಡ ಸಂತೋಷಕ್ಕಾಗಿ ಎದುರು ನೋಡುತ್ತಿದ್ದೀರಾ? ನಿಮಗೆ ನೀವೇ ಆನಂದ ಆಗಿರುವಾಗ ಯಾವ ದೊಡ್ಡ ಸಂತೋಷ ನಿಮಗೆ ಬರಲು ಸಾಧ್ಯ?
ನಾಯಿಗಳು ಮೂಳೆಗಳನ್ನು ಕಚ್ಚುವುದನ್ನು ನೋಡಿದ್ದೀರೆ? ಅವು ಮೂಳೆಗಳನ್ನು ಏಕೆ ಕಚ್ಚುತ್ತವೆ. ಗೊತ್ತೆ? ನಾಯಿಗಳು ಮೂಳೆಗಳನ್ನು ಕಚ್ಚುತ್ತಾ, ಕಚ್ಚುತ್ತಾ ಇದ್ದಾಗ. ಆ ಗಟ್ಟಿಯಾದ ಮೂಳೆಯು ಅವರ ಬಾಯೊಳಗೆ ಗಾಯ ಮಾಡುತ್ತದೆ. ನಾಯಿಯ ರಕ್ತವೇ ಹೊರಚಿಮ್ಮಲು ಪ್ರಾರಂಭಿಸುತ್ತದೆ, ಆದರೆ ನಾಯಿಗೆ ಅನ್ನಿಸುತ್ತದೆ, ‘ಈ ಮೂಳೆಯು ಬಹಳ ಸ್ವಾದಿಷ್ಟವಾಗಿದೆ’ ಎಂದು. ಸ್ವಲ್ಪ ಸಮಯದ ನಂತರ ನಾಯಿಯ ಇಡೀ ಬಾಯಿ ಊದಿಕೊಂಡು, ನೋವು ಉಂಟಾಗುತ್ತದೆ. ಆ ನಾಯಿ, ಆ ಮೂಳೆಯನ್ನು ಸವಿಯಲು ಅಷ್ಟೊಂದು ಸಮಯವನ್ನು ಕಳೆಯಿತು ಮತ್ತು ಅದರಿಂದ ಏನೂ ಪಡೆದುಕೊಳ್ಳಲಿಲ್ಲ! ಅದು ನಾಯಿಯ ಹೊಟ್ಟೆಯನ್ನೂ ತುಂಬಿಸಲಿಲ್ಲ. ಯಾವ ರಸವನ್ನೂ ಅದು ಹೊರತರಲಿಲ್ಲ, ಆದರೂ ನಾಯಿ ಆ ಮೂಳೆಯನ್ನು ಮತ್ತೆ, ಮತ್ತೆ ಅಗೆಯುತ್ತಲೇ ಇರುತ್ತದೆ.
ಸಂತೋಷ ಎಲ್ಲಿದೆ?
ನೀವು ಜೀವನದಲ್ಲಿಅನುಭವಿಸುವ ಯಾವುದೇ ಸಂತೋಷವಾಗಲಿ, ಅದು ನಿಮ್ಮದೇ ಆಳದಿಂದ ಬರುತ್ತಿದೆ. ನಿಮ್ಮದೇ ಆತ್ಮದ ಆಳದಿಂದ ನೀವು ಹಿಡಿದಿಟ್ಟುಕೊಂಡಿರುವ ಆ ಎಲ್ಲವನ್ನೂ ಬಿಟ್ಟುಬಿಟ್ಟಾಗ ಮತ್ತು ನೆಲೆಗೊಂಡಾಗ, ಆ ಸ್ಥಳದಲ್ಲಿಯೇ ಕೇಂದ್ರೀಕೃತವಾದಾಗ, ಅದೇ ಧ್ಯಾನ . ವಾಸ್ತವದಲ್ಲಿ, ಧ್ಯಾನ ಎಂದರೆ, ಒಂದು ಕೃತ್ಯವಲ್ಲ! ಅದು ಅಕೃತ್ಯದ ಕಲೆ. ಏನೂ ಮಾಡದೆ ಇರುವ ಕಲೆ. ಮತ್ತು ಧ್ಯಾನದಲ್ಲಿದೊರಕುವ ವಿಶ್ರಾಂತಿಯು ನೀವು ಅನುಭವಿಸಬಹುದಾದ ಆಳವಾದ ನಿದ್ದೆಗಿಂತಲೂ ಆಳವಾಗಿರುತ್ತದೆ! ಏಕೆಂದರೆ, ನಿದ್ದೆಯಲ್ಲಿಎಲ್ಲಿಯೋ ಒಂದು ಕಡೆ ಆಸೆಯು ತೇಲುತ್ತಲೇ ಇರುತ್ತದೆ, ಆದರೆ ಧ್ಯಾನದಲ್ಲಿ, ನೀವು ಎಲ್ಲಾಆಸೆಗಳನ್ನೂ ಮೀರಿರುತ್ತೀರಿ. ಅದು ನಿಮ್ಮ ದೇಹ - ಮನಸ್ಸಿನ ಸಂಕೀರ್ಣವನ್ನು ಸವೀರ್ ಸಿಂಗ್ ಮಾಡಿಸಿದಂತೆ, ಕ್ರಮ ಪರೀಕ್ಷೆಗೆ ಒಳಪಡಿಸಿದಂತೆ.
ಯಾರು ಏನೇ ಮಾಡಿದರೂ ಸಹ ಎಲ್ಲರೂ ಗೋರಿಗೇ ಹೋಗುತ್ತಾರೆ. ಅದೇ ಅಂತಿಮ ನಿರ್ಗಮನ ಸ್ಥಾನ! ಆ ಅಂತಿಮ ನಿರ್ಗಮನದತ್ತ ನಿಮ್ಮ ದೃಷ್ಟಿಯು ಇರಲಿ. ಈ ದೇಹ ನಿಮ್ಮನ್ನು ಬಿಟ್ಟು ಹೋಗುವ ಮೊದಲೇ ನೀವು ಎಲ್ಲವನ್ನೂ ಬಿಡುವುದನ್ನು ಕಲಿಯಿರಿ. ಅದೇ ಸ್ವಾತಂತ್ರ್ಯ.
ನೀವು ಸಂತರೇ ಆಗಿರಲಿ ಅಥವಾ ಪಾಪಿಗಳೇ ಆಗಿರಲಿ, ನೀವು ಮಣ್ಣಿನಲ್ಲಿಒಂದಾಗುತ್ತೀರಿ. ನೀವು ಸಿರಿವಂತರಾದರೂ ಅಥವಾ ಬಡವರಾದರೂ, ಬುದ್ಧಿವಂತರಾದರೂ, ಮೂರ್ಖರಾದರೂ ಅಥವಾ ಕಡು ಮೂರ್ಖರಾದರೂ ನೀವು ಹೋಗುವುದು ಗೋರಿಗೆ. ಜನರು ಯುದ್ಧಗಳನ್ನು ನಡೆಸಿದರೂ, ಯಾರು ಸೋತರೂ, ಯಾರೇ ಗೆದ್ದರೂ, ಅವರೂ ಸಹ ಗೋರಿಗೇ ಹೋಗುತ್ತಾರೆ. ಏನಾಗಿದ್ದರೂ ಏನಂತೆ? ಯಾರೆಲ್ಲಾಜೀವಿಸಿದರೋ, ಅವರು ಬಳಲಿದರು ಮತ್ತು ಹೋದವರೆಲ್ಲಾಪ್ರಶಾಂತವಾಗಿ ಹೋದರು.
ಆದ್ದರಿಂದ, ನಿಮ್ಮ ಮನಸ್ಸಿನಲ್ಲಿಆಗಾಗ ಥಟ್ಟನೆ ಸಿಡಿಯುವಂತೆ ಮಾಡುವ, ನೀವು ನೆಲೆನಿಲ್ಲದಂತೆ ಮಾಡುವ ಮತ್ತು ಶಾಂತಿಯಿಂದ ಇರಲು, ಸಂತೋಷದಿಂದ ಇರಲು, ಪ್ರೇಮದಲ್ಲಿಇರಲು ಬಿಡದೆ ಇರುವಂತಹ ಆ ಸಣ್ಣ - ಪುಟ್ಟ ವಿಷಯಗಳು ಯಾವುವು ಎಂದು ಮನನ ಮಾಡಿ.
ಸಂತೋಷ ತರುವ ವೈರಾಗ್ಯ
ವೈರಾಗ್ಯವು ನಿಮ್ಮ ಜೀವನದಲ್ಲಿಅಷ್ಟೊಂದು ಸಂತೋಷವನ್ನು ತರಬಲ್ಲದು. ವೈರಾಗ್ಯವೆಂದರೆ ಉದಾಸೀನತೆಯ ಒಂದು ಸ್ಥಿತಿ ಎಂದು ತಿಳಿದುಕೊಂಡು ಬಿಡಬೇಡಿ. ವೈರಾಗ್ಯಕ್ಕೂ, ಉದಾಸೀನತೆಗೂ ವ್ಯತ್ಯಾಸವಿದೆ.
‘ಓಹ್ ! ಹೇಗಿದ್ದರೂ ಎಲ್ಲರೂ ಒಂದಲ್ಲಒಂದು ದಿನ ಎಲ್ಲವನ್ನೂ ಬಿಟ್ಟು ಮಣ್ಣಾಗಿ ಹೋಗುತ್ತಾರೆ’ ಆದ್ದರಿಂದ ಈಗ ಮಾಡಬೇಕಾಗಿರುವುದಾದರೂ ಏನು?’ ಇದು ಉದಾಸೀನತೆ, ವೈರಾಗ್ಯವಲ್ಲ. ಉದಾಸೀನತೆಯ ಸ್ಥಿತಿಯಲ್ಲಿಅಪೂರ್ಣತೆಯಿದೆ.
ನೀವು ವೈರಾಗಿಗಳಾಗಿ ಬಿಟ್ಟರೆ, ನೀವು ಎಲ್ಲವನ್ನೂ ತ್ಯಜಿಸಿಬಿಟ್ಟು, ಒಂದು ಬೌದ್ಧ ವಿಹಾರಕ್ಕೋ, ಒಂದು ಆಶ್ರಮಕ್ಕೋ ಹೋಗಿ ಸೇರಿಕೊಂಡು ಬಿಡುತ್ತೀರಿ ಎಂದುಕೊಳ್ಳಬೇಡಿ! ಇದಲ್ಲದೆ, ಇಂತಹ ವಿಹಾರಗಳಲ್ಲಿ, ಆಶ್ರಮಗಳಲ್ಲಿಇರುವ ಜನರೆಲ್ಲರೂ ಸಹ ಹಗಲುಗನಸು ಕಾಣುತ್ತಿರುತ್ತಾರೆ, ಸ್ವರ್ಗದ ಬಗ್ಗೆ ಹಗಲುಗನಸು ಕಾಣುತ್ತಿರುತ್ತಾರೆ. ಅದು ವೈರಾಗ್ಯವಲ್ಲ!
ಬಾಕ್ಸ್ ಮಾಡಿ
ವೈರಾಗ್ಯದಿಂದ ಸಂತೋಷ ಸಾಧ್ಯವೇ?
ವೈರಾಗ್ಯವು ಪೂರ್ಣವಾಗಿ ಉತ್ಸಾಹದಿಂದ ಮತ್ತು ಸಂತೋಷದಿಂದ ತುಂಬಿದೆ! ನಿಮ್ಮ ಜೀವನದಲ್ಲಿಎಲ್ಲಾರೀತಿಯ ಸಂತೋಷವನ್ನೂ ತಂದುಕೊಡುತ್ತದೆ ಮತ್ತು ನಿಮ್ಮನ್ನು ಅಷ್ಟೊಂದು ಪೂರ್ಣವಾಗಿ ವಿಶ್ರಮಿಸಲು ಬಿಡುತ್ತದೆ. ನೀವು ಚೆನ್ನಾಗಿ ವಿಶ್ರಮಿಸಿದಾಗ ನೀವು ಆಳವಾದ ಧ್ಯಾನಕ್ಕೆ ಹೋಗುತ್ತೀರಿ. ಆಳವಾದ ಧ್ಯಾನದಿಂದ ಹೊರಬಂದಾಗ ನೀವು ಬಹಳ ಕ್ರಿಯಾಶೀಲರಾಗುತ್ತೀರಿ - ನೀವು ಇನ್ನೂ ಉತ್ತಮವಾಗಿ ಕೆಲಸ ಮಾಡಲು ಸಾಧ್ಯ. ನೀವು ಆಳವಾಗಿ ವಿಶ್ರಮಿಸಿದಷ್ಟೂ ನಿಮ್ಮ ಚಟುವಟಿಕೆಗಳಲ್ಲಿಹೆಚ್ಚು ಕ್ರಿಯಾಶೀಲರಾಗುವಿರಿ. ಆಳವಾದ ವಿಶ್ರಾಮ ಮತ್ತು ಕ್ರಿಯಾತ್ಮಕ ಚಟುವಟಿಕೆಯು ವಿರುದ್ಧವಾದ ಮೌಲ್ಯಗಳಾದರೂ ಸಹ, ಅವು ಒಂದಕ್ಕೊಂದು ಪೂರಕವಾಗಿದೆ.

