ಭಾರತಯ ಸೇನೆಗೆ ಮತ್ತಷ್ಟು ಸುದರ್ಶನ ಚಕ್ರ
ಈ ವಾರ ಭಾರತಕ್ಕೆ ತಲುಪಲಿದೆ ನಾಲ್ಕನೇ ಘಟಕ | ಎಸ್ -400 ವ್ಯವಸ್ಥೆಯನ್ನು 10ಕ್ಕೆ ಏರಿಸುವ ಗುರಿ
ಭಾರತದ ವಾಯು ರಕ್ಷಣಾ ವಲಯದಲ್ಲಿಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆಯುತ್ತಿದ್ದು, ರಷ್ಯಾ ಮೂಲದ ಎಸ್ -400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಯ ನಾಲ್ಕನೇ ಘಟಕ ಈ ವಾರ ಭಾರತಕ್ಕೆ ತಲುಪುವ ನಿರೀಕ್ಷೆಯಿದೆ. ಭಾರತೀಯ ವಾಯುಪಡೆಯು ಈ ಶಕ್ತಿಶಾಲಿ ವ್ಯವಸ್ಥೆಯನ್ನು ‘ಸುದರ್ಶನ ಚಕ್ರ‘ ಎಂದು ಕರೆಯುತ್ತದೆ.
2025ರ ಮೇನಲ್ಲಿನಡೆಸಿದ ‘ಆಪರೇಷನ್ ಸಿಂದೂರ್ ’ ಅವಧಿಯಲ್ಲಿಈ ರಕ್ಷಣಾ ವ್ಯವಸ್ಥೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ನಂತರ, ಭಾರತೀಯ ರಕ್ಷಣಾ ಇಲಾಖೆಯು ಇದನ್ನು ಕೇವಲ ಒಂದು ಆಯುಧವಾಗಿ ನೋಡದೆ, ಪಶ್ಚಿಮ ಮತ್ತು ಉತ್ತರ ಗಡಿಗಳಲ್ಲಿವೈಮಾನಿಕ ಯುದ್ಧದ ದಿಕ್ಕನ್ನೇ ಬದಲಿಸಬಲ್ಲಅತ್ಯಂತ ಪ್ರಮುಖ ಆಸ್ತಿಯಾಗಿ ಪರಿಗಣಿಸುತ್ತಿದೆ.
ನಾಲ್ಕನೇ ಘಟಕ ಏಕೆ ಮಹತ್ವದ್ದು?
ಭಾರತವು 2018ರಲ್ಲಿರಷ್ಯಾದೊಂದಿಗೆ ಸುಮಾರು 5.43 ಬಿಲಿಯನ್ ಡಾಲರ್ ಮೌಲ್ಯದ ಸರಕಾರಿ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರ ಅಡಿಯಲ್ಲಿಒಟ್ಟು ವಾಯು ರಕ್ಷಣಾ ವ್ಯವಸ್ಥೆಯ ಐದು ಘಟಕಗಳನ್ನು ಪೂರೈಸಬೇಕಾಗಿದ್ದು, ಈಗಾಗಲೇ 3 ಘಟಕಗಳು ಭಾರತದ ರಕ್ಷಣಾ ಜಾಲದಲ್ಲಿಸಕ್ರಿಯವಾಗಿವೆ. ನಾಲ್ಕನೇ ಘಟಕ ಈಗ ರಷ್ಯಾದಿಂದ ಭಾರತದತ್ತ ಬರುತ್ತಿದೆ. ಐದನೇ ಹಾಗೂ ಕೊನೆಯ ಯೂನಿಟ್ ಈ ವರ್ಷದ ಕೊನೆಯಲ್ಲಿಅಥವಾ 2027ರ ಆರಂಭದಲ್ಲಿತಲುಪುವ ನಿರೀಕ್ಷೆಯಿದೆ.
ಭವಿಷ್ಯದ ಯೋಜನೆ: ‘ಆಪರೇಷನ್ ಸಿಂದೂರ್ ’ ಸಮಯದಲ್ಲಿಇದರ ಅತ್ಯುತ್ತಮ ಪ್ರದರ್ಶನವನ್ನು ನೋಡಿದ ಭಾರತ, ರಕ್ಷಣಾ ಕವಚವನ್ನು ಮತ್ತಷ್ಟು ಬಲಪಡಿಸಲು ಇನ್ನೂ ಐದು ಹೆಚ್ಚುವರಿ ಎಸ್ -400 ಘಟಕಗಳನ್ನು ಮತ್ತು ದಾಸ್ತಾನು ಭರ್ತಿ ಮಾಡಲು ಸುಮಾರು 280 ಇಂಟರ್ ಸೆಪ್ಟರ್ (ಕ್ಷಿಪಣಿ ನಿರೋಧಕ) ಕ್ಷಿಪಣಿಗಳನ್ನು ಖರೀದಿಸಲು ಪರಿಗಣಿಸುತ್ತಿದೆ. ಇದು ಅನುಮೋದನೆಗೊಂಡರೆ ಭಾರತದ ಒಟ್ಟು ಎಸ್ -400 ವ್ಯವಸ್ಥೆಯ ಸಂಖ್ಯೆ 10ಕ್ಕೆ ಏರಲಿದೆ.
ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ: ರಷ್ಯಾದ ‘ಅಲ್ಮಾಜ್ -ಆಂಟೇ’ ಸಂಸ್ಥೆ ಅಭಿವೃದ್ಧಿಪಡಿಸಿರುವ ಎಸ್ -400 ವ್ಯವಸ್ಥೆಯು ಏಕಕಾಲದಲ್ಲಿಹಲವಾರು ವೈಮಾನಿಕ ದಾಳಿಗಳನ್ನು ಪತ್ತೆಹಚ್ಚಿ, ಅವುಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಯುದ್ಧ ವಿಮಾನಗಳು ಮತ್ತು ಡ್ರೋನ್ ಗಳು, ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ರಾಡಾರ್ ಗೆ ಸಿಗದ ಸ್ಟೆಲ್ತ… ವಿಮಾನಗಳನ್ನು ಈ ವ್ಯವಸ್ಥೆ ಮೂಲಕ ಪತ್ತೆಹಚ್ಚಿ ಹೊಡೆದುರುಳಿಸಬಹುದು.
ಭಾರತದ ವಾಯು ರಕ್ಷಣಾ ಜಾಲದಲ್ಲಿಪಾತ್ರ: ಎಸ್ -400 ಸ್ವತಂತ್ರವಾಗಿ ಕೆಲಸ ಮಾಡುವುದಿಲ್ಲ. ಬದಲಿಗೆ, ಭಾರತೀಯ ವಾಯುಪಡೆಯ ಸಂಯೋಜಿತ ವಾಯು ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆ ಅಡಿಯಲ್ಲಿಕಾರ್ಯನಿರ್ವಹಿಸುತ್ತದೆ. ಈ ಜಾಲವು ಮಿಲಿಟರಿ ಮತ್ತು ನಾಗರಿಕ ರಡಾರ್ ಗಳು, ‘ನೇತ್ರಾ’ ಮತ್ತು ‘ಫಾಲ್ಕನ್ ’ನಂತಹ ವಾಯುಗಾಮಿ ಮುನ್ನೆಚ್ಚರಿಕೆ ವಿಮಾನಗಳು, ಭೂ-ಆಧಾರಿತ ಸಂವೇದಕಗಳು (ಖಛ್ಞಿsಟ್ಟs) ಮತ್ತು ಕಣ್ಗಾವಲು ವ್ಯವಸ್ಥೆಗಳಿಂದ ನೈಜ-ಸಮಯದ ದತ್ತಾಂಶವನ್ನು ಪಡೆದುಕೊಳ್ಳುತ್ತದೆ.
ಬಹುಪದರದ ರಕ್ಷಣಾ ತಂತ್ರ: ಎಸ್ -400 ದೂರಗಾಮಿ ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಿದರೆ, ಮಧ್ಯಮ ಮತ್ತು ಅಲ್ಪದೂರದ ಬೆದರಿಕೆಗಳನ್ನು ‘ಆಕಾಶ್ ’ ಮತ್ತು ‘’ಬರಾಕ್ -8’ನಂತಹ ಕ್ಷಿಪಣಿ ವ್ಯವಸ್ಥೆಗಳು ನಿಭಾಯಿಸುತ್ತವೆ. ಶತ್ರುಗಳು ಏಕಕಾಲದಲ್ಲಿನೂರಾರು ಡ್ರೋನ್ ಅಥವಾ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದಾಗ ಈ ಬಹುಪದರದ ರಕ್ಷಣೆ ಅತ್ಯಂತ ಸಹಕಾರಿಯಾಗುತ್ತದೆ. ಭವಿಷ್ಯದಲ್ಲಿಭಾರತದ ಸ್ವದೇಶಿ ‘ಪ್ರಾಜೆಕ್ಟ್ ಕುಶಾ’ ದೂರಗಾಮಿ ಕ್ಷಿಪಣಿ ಕಾರ್ಯಕ್ರಮವನ್ನು ಸಹ ಇದೇ ಜಾಲದೊಂದಿಗೆ ಸಂಯೋಜಿಸಲಾಗುತ್ತದೆ.

