ಸೆಕೆಂಡ್ ಲೀಡ್ 2

Contributed byJaya shree|Vijaya Karnataka

ಭಾರತದ ಸರ್ವೋಚ್ಚ ನ್ಯಾಯಾಲಯ ಮೀಸಲಾತಿ ಕುರಿತು ಮಹತ್ವದ ಅವಲೋಕನ ಮಾಡಿದೆ. ಈಗಾಗಲೇ ಶಿಕ್ಷಣ ಮತ್ತು ಆರ್ಥಿಕವಾಗಿ ಮುಂದುವರಿದಿರುವ ಕುಟುಂಬಗಳಿಗೆ ಮೀಸಲು ಮುಂದುವರಿಸುವ ಬಗ್ಗೆ ನ್ಯಾಯಾಲಯ ಪ್ರಶ್ನೆ ಎತ್ತಿದೆ. ಪೋಷಕರು ಐಎಎಸ್ ಅಧಿಕಾರಿಗಳಾಗಿದ್ದರೂ ಮಕ್ಕಳಿಗೆ ಮೀಸಲು ಬೇಕೇ ಎಂದು ನ್ಯಾಯಾಲಯ ಕೇಳಿದೆ. ಮೀಸಲಾತಿಯ ಲಾಭ ಪಡೆದ ಕುಟುಂಬಗಳ ಮುಂದಿನ ಪೀಳಿಗೆಗೆ ಮೀಸಲು ಮುಂದುವರಿಸುವ ಬಗ್ಗೆ ಮರುಪರಿಶೀಲನೆ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

reservation for the children of ias officers supreme courts significant ruling

ಅಧಿಕಾರಿಗಳ ಮಕ್ಕಳಿಗೆ ಮೀಸಲು ಏಕೆ?

ಮೀಸಲು ಮುಂದುವರಿಕೆ ಮರುಪರಿಶೀಲನೆ ಅಗತ್ಯವೆಂದ ಸುಪ್ರೀಂಕೋರ್ಟ್

ಭಾರತದ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಮೀಸಲು ಮತ್ತು ಸಾಮಾಜಿಕ ಚಲನಶೀಲತೆಯ ಕುರಿತು ಅತ್ಯಂತ ಮಹತ್ವದ ಅವಲೋಕನಗಳನ್ನು ಮಾಡಿದೆ. ಶಿಕ್ಷಣ ಮತ್ತು ಆರ್ಥಿಕವಾಗಿ ಈಗಾಗಲೇ ಮುಂದುವರಿದಿರುವ ಕುಟುಂಬಗಳು ಮೀಸಲು ಸೌಲಭ್ಯವನ್ನು ಮುಂದುವರಿಸುವ ಬಗ್ಗೆ ನ್ಯಾಯಾಲಯವು ಪ್ರಶ್ನೆ ಎತ್ತಿದೆ. ಹಿಂದುಳಿದ ವರ್ಗಗಳ ‘ಕೆನೆಪದರ’ (ಇ್ಟಛಿaಞy ಔayಛ್ಟಿ) ಕುರಿತಾದ ವಿಚಾರಣೆಯ ಸಂದರ್ಭದಲ್ಲಿ, ಪೋಷಕರಿಬ್ಬರೂ ಐಎಎಸ್ ಅಧಿಕಾರಿಗಳಾಗಿದ್ದರೆ ಅವರ ಮಕ್ಕಳಿಗೆ ಮೀಸಲಿನ ಅಗತ್ಯವಿದೆಯೇ ಎಂದು ಪೀಠವು ಕೇಳಿದೆ.

ಮೀಸಲಾತಿಯ ಮೂಲಕ ಒಮ್ಮೆ ಆರ್ಥಿಕ ಮತ್ತು ಶೈಕ್ಷಣಿಕ ಸಬಲೀಕರಣ ಸಾಧಿಸಿದ ನಂತರ, ಸಮಾಜದಲ್ಲಿವ್ಯಕ್ತಿಯ ಸ್ಥಾನಮಾನ ಸುಧಾರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪೋಷಕರು ಐಎಎಸ್ ಅಧಿಕಾರಿಗಳಾಗಿದ್ದಾಗಲೂ ಮಕ್ಕಳು ಮೀಸಲು ಬಯಸಿದರೆ, ಈ ವ್ಯವಸ್ಥೆಯಿಂದ ನಾವು ಹೊರಬರಲು ಎಂದಿಗೂ ಸಾಧ್ಯವಿಲ್ಲ, ಎಂದು ನ್ಯಾಯಮೂರ್ತಿ ನಾಗರತ್ನ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ. ಇಂತಹ ಮುಂದುವರಿದ ವರ್ಗಗಳನ್ನು ಮೀಸಲಾತಿಯಿಂದ ಹೊರಗಿಡುವ ಸರಕಾರದ ಆದೇಶಗಳನ್ನು ಕೆಲವರು ಪ್ರಶ್ನಿಸುತ್ತಿರುವುದಕ್ಕೆ ನ್ಯಾಯಾಲಯ ಆಶ್ಚರ್ಯ ವ್ಯಕ್ತಪಡಿಸಿದೆ.

ಪೋಷಕರು ಮೀಸಲಿನ ಲಾಭ ಪಡೆದು ಉನ್ನತ ಉದ್ಯೋಗ ಮತ್ತು ಉತ್ತಮ ಆದಾಯ ಹೊಂದಿರುವಾಗ, ಅವರ ಮಕ್ಕಳು ಮೀಸಲಾತಿಯಿಂದ ಹೊರಬರಬೇಕು ಎಂದು ನ್ಯಾಯಾಧೀಶರು ತಿಳಿಸಿದರು. ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲು ಅಗತ್ಯ ನಿಜ, ಆದರೆ ಅದರ ಲಾಭ ಪಡೆದು ಒಂದು ಹಂತಕ್ಕೆ ತಲುಪಿದ ಕುಟುಂಬಗಳ ಮುಂದಿನ ಪೀಳಿಗೆಗೆ ಮೀಸಲು ಮುಂದುವರಿಸುವ ಬಗ್ಗೆ ಮರುಪರಿಶೀಲನೆಯ ಅಗತ್ಯವಿದೆ ಎಂದು ನ್ಯಾಯಾಲಯ ಪ್ರತಿಪಾದಿಸಿದೆ. ಆರ್ಥಿಕವಾಗಿ ದುರ್ಬಲ ವರ್ಗದ (ಉWಖ) ಮೀಸಲು ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ನಡುವಿನ ವ್ಯತ್ಯಾಸವನ್ನು ಸಹ ಈ ಸಂದರ್ಭದಲ್ಲಿಪ್ರಸ್ತಾಪಿಸಿದೆ.