ಮನೆ ಮದ್ದು

Contributed byShridevi Ambekallu|Vijaya Karnataka

ಮನೆ ಮದ್ದು ಶೀತ ಮತ್ತು ಉಷ್ಣ ಚಿಕಿತ್ಸೆ ಬಗ್ಗೆ ಲೇಖನ ತಿಳಿಸುತ್ತದೆ. ಪಾದದ ಬಳಿ ಊತ ಮತ್ತು ನೋವು ಕಾಣಿಸಿಕೊಂಡರೆ ಮಂಜುಗಡ್ಡೆ ಇಡುವುದು ಸರಿಯಲ್ಲ. ಆಯುರ್ವೇದದ ಪ್ರಕಾರ, ವಾತ ಕೆರಳಿದರೆ ನೋವು ಹೆಚ್ಚಾಗುತ್ತದೆ. ನೋವು ಕಡಿಮೆ ಮಾಡಲು ಉಷ್ಣೋಪಚಾರ ಮತ್ತು ಸ್ನೇಹನ ಮುಖ್ಯ. ಉಗುರುಗಳಿಗೆ ರಾಸಾಯನಿಕ ಬಣ್ಣ ಹಚ್ಚಬಾರದು. ಇದು ಆರೋಗ್ಯಕ್ಕೆ ಹಾನಿಕರ.

using home remedies cold and heat treatments

ಶೀತ ಮತ್ತು ಉಷ್ಣ ಚಿಕಿತ್ಸೆ

-------

ಪಾದದ ಬಳಿ ಕೊಂಚ ಊತ ಉಂಟಾಗಿ ಅಸಾಧ್ಯ ನೋವು ಕಾಣಿÓಸಿಕೊಂಡರೆ ಕೆಲವರು ಮಂಜುಗಡ್ಡೆ ಇಡುತ್ತಾರೆ. ಇದರಿಂದ ನೋವು ತಾತ್ಕಾಲಿಕವಾಗಿ ಸ್ವಲ್ಪ ಕಡಿಮೆಯಾಗಬಹುದು. ಆದರೆ ಮತ್ತೆ ಮತ್ತೆ ನೋವು ಹೆಚ್ಚುವ ಸಂದರ್ಭವೇ ಹೆಚ್ಚು.

ಆಯುರ್ವೇದದ ಪ್ರಕಾರ, ತ್ವಚೆಗೆ ಸ್ಪರ್ಶೇಂದ್ರಿಯದ ಸ್ಥಾನವಿದೆ. ‘ಸ್ಪರ್ಶನೇಭ್ಯೋಧಿಕಃ ವಾಯು’. ಅದರರ್ಥ ಚರ್ಮವು ವಾತದ ಸ್ಥಾನ. ಒಂದಿನಿತು ಶೀತದಿಂದಲೂ ವಾತ ಕೆರಳುತ್ತದೆ. ಅಂದರೆ ವಾತ ಪ್ರಕೋಪ. ಕೊನೆಗೆ ನೋವು ಬಾವು ಹೆಚ್ಚಳವಾಗುತ್ತದೆ. ಹಾಗಾಗಿ ಮಂಜುಗಡ್ಡೆಯಂತಹ ಶೀತಚಿಕಿತ್ಸೆಯಿಂದ ಖಂಡಿತವಾಗಿ ವಾತದ ಕೆರಳುವಿಕೆಯನ್ನು ಬಗ್ಗಿಸಲಾಗದು ಎಂಬುದನ್ನು ನೆನಪಿಡಿ. ವಾತಾದೃತೇ ನಾಸ್ತಿ ರುಜಃ- ಅಂದರೆ ದೇಹದ ಯಾವುದೇ ಭಾಗದಲ್ಲಿನೋವುಂಟಾದರೆ ಅದರ ಹಿಂದೆ ವಾತವೇ ಇದೆ. ಕುರ ಏಳುತ್ತದೆಯೇ? ಜಜ್ಜು ಗಾಯವೇ? ಮೂಗೇಟೇ? ಮೂಳೆ ಮುರಿತವೇ? ಅನಗತ್ಯ ವಿಷ ವಸ್ತು ಸೇರಿಕೆಯೇ? ಉರಿಯೂತವೇ? ಇದೆಲ್ಲದರ ಹಿಂದೆ ಇದೆ ವಾತ ದೋಷದ ಕರಾಮತ್ತು ಇದೆ. ಮಾತ್ರವಲ್ಲ, ಎರಡು ದೋಷಗಳು ಅರ್ಥಾತ್ ಪಿತ್ತ ಮತ್ತು ಕಫವು ಒಂದೆಡೆ ಇದ್ದರೆ ಅದು ಒಂದಿಲ್ಲೊಂದು ಸ್ಥಾನಕ್ಕೆ ಹ(ಸ)ರಿದಾಡಲು ವಾಯುವೇ ಕಾರಣ!

ಗ್ರಂಥಗಳು ನೀಡುವ ಸರಳ ನಿದರ್ಶನ- ವಾಯುನಾ ಯತ್ರ ನೀಯಂತೇ ತತ್ರ ಗಚ್ಛತಿ ಮೇಘವತ್ ! ಅಂದರೆ ಬಾನಿನಲ್ಲಿರುವ ತೇಲುವ ಮೋಡದ ನಿದರ್ಶನ. ಬಿಳಿದಾಗಲಿ, ಕರಿಯದಾಗಲಿ, ಮೋಡವು ಬಾನಂಗಳದಲ್ಲಿಸರಿದಾಡಲು ಬೀಸುಗಾಳಿಯೇ ಕಾರಣ. ಇಂತಹದೇ ವಿದ್ಯಮಾನ ನಮ್ಮ ದೇಹದಲ್ಲಿಸಂಭವಿಸುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಮತ್ತೊಂದು ವಿವರ ಇದೆ ನೋವು ಯಾವುದೇ ತೆರನಾದ ಕಾರಣದಿಂದ ಸಂಭವಿಸಲಿ, ಅದನ್ನು ಕಡಿಮೆ ಮಾಡಲು ಬೇಕಾದುದು ಉಷ್ಣೋಪಚಾರ. ಅಷ್ಟೆ ಅಲ್ಲ. ಅದಕ್ಕೂ ಮೊದಲು ಸ್ನೇಹನ. ಅರ್ಥಾತ್ ಜಿಡ್ಡು ವಸ್ತುವಿನ ಪೀಡನ, ಲೇಪನ, ಘರ್ಷಣ ಮೊದಲಾದ ಮಾಲೀಶಿನ ವೈವಿಧ್ಯಮಯ ಉಪಚಾರಗಳು. ಏಕೆಂದರೆ ವಾತವು ಶೀತ ಗುಣದ್ದಷ್ಟೆ ಅಲ್ಲ. ಅದು ಲಘು, ಶೀತ, ತೀಕ್ಷ$್ಣ, ಒರಟು ಹಾಗೂ ಚಂಚಲ ಸ್ವಭಾವದ್ದು. ಒಮ್ಮೆ ಒಂದೆಡೆ ಮತ್ತೊಮ್ಮೆ ಇನ್ನೊಂದೆಡೆ ಓಡಾಡುವ ಸ್ವಭಾವದ್ದು. ಹಾಗಾಗಿ ನೋವಿದ್ದ ಕಡೆ ಮಂಜುಗಡ್ಡೆ ಇಟ್ಟರಾಗದು. ಮದ್ದಿನ ಎಣ್ಣೆಗಳನ್ನು ಹದ ಬಿಸಿ ಮಾಡಿ ಹಚ್ಚಬೇಕು. ಅಥವಾ ಎಳ್ಳೆಣ್ಣೆಯ ಬಿಸಿ ಮಾಲೀಶು ಮಾಡಿದರೂ ಸರಿ.

ಉಗುರಿನಲ್ಲಿಯೂ ಜೀವಕಣಗಳಿವೆ. ನರಾಗ್ರಗಳಿಗೆ ಅವು ಬಹಳ ಗಾಢವಾಗಿ ಬೆಸೆದುಕೊಂಡಿವೆ. ಬಗೆ ಬಗೆಯ ರಾಸಾಯನಿಕ, ಕೃತಕ ಬಣ್ಣಗಳ ಗೊಡವೆ ಖಂಡಿತ ಬೇಡ. ದೇಹದೊಳಗೆ, ಲಿವರ್ ಮುಂತಾದ ಉಪಕಾರಿ ಅಂಗ ಮತ್ತು ಉಗುರುಗಳ ನಡುವೆ ಸೇತುವೆ ಇದೆ. ಅದರ ಮೂಲಕ ನಿರಂತರ ಸಂಪರ್ಕ ಕೊಂಡಿ ವಾಯು. ಕಾಮಾಲೆ ಕಂಡರೆ ಲಿವರ್ ಕೆಡುತ್ತದೆ. ಅದು ಪ್ರಕಟಗೊಳ್ಳುವುದು ಉಗುರು, ಕಣ್ಣು ಗುಡ್ಡೆಯ ಬಿಳಿಭಾಗ ಮತ್ತು ತ್ವಚೆಯಲ್ಲಿತಾನೇ? ಹಾಗಾಗಿ ಶೀತವೂ ಅಲ್ಲದ, ಉಷ್ಣವೂ ಸಲ್ಲದ ಉಗುರುಗಳಿಗೆ ಬಣ್ಣದ ವಿಷ ಲೇಪನ ಮಾಡಬಾರದು.

-ನಾಸತ್ಯ