ಪು. 11 ಚಂದ್ರನ ಪ್ರಭಾವ

Contributed byShridevi Ambekallu|Vijaya Karnataka

ಜ್ಯೋತಿಷ ಶಾಸ್ತ್ರದಲ್ಲಿ ಚಂದ್ರನಿಗೆ ಮಹತ್ವದ ಸ್ಥಾನವಿದೆ. ಮನಸ್ಸು, ಭಾವನೆಗಳು, ತಾಯಿ, ಪ್ರೀತಿ ಮತ್ತು ಸಮೃದ್ಧಿಗೆ ಚಂದ್ರನೇ ಅಧಿಪತಿ. ಚಂದ್ರನ ಪ್ರಭಾವದಿಂದ ನಮ್ಮ ಮನಸ್ಸಿನಲ್ಲಿ ಏರಿಳಿತಗಳು ಉಂಟಾಗುತ್ತವೆ. ಚಂದ್ರನ ಕೃಪೆಯಿಂದ ಶಾಂತಿ, ಸಮತೋಲನ ಸಿಗುತ್ತದೆ. ನವಗ್ರಹಗಳಲ್ಲಿ ಚಂದ್ರನ ಪಾತ್ರವು ಆಯುಸ್ಸು ಮತ್ತು ದೇಹದ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ.

influence of the moon importance of mind peace and health in our lives

ಮನಸ್ಸಿನ ಕಾರಕ ಚಂದ್ರ

----

ಜ್ಯೋತಿಷ ಶಾಸ್ತ್ರದ ಪ್ರಕಾರ ಚಂದ್ರ ಗ್ರಹದ ಮಹತ್ವ ಏನು? ವ್ಯಕ್ತಿಯ ಮೇಲೆ ಬೀರುವ ಪ್ರಭಾವಗಳೇನು? ಈ ಕುರಿತು ಸಂಪೂರ್ಣ ಮಾಹಿತಿ.

--

* ಪ್ರಶಾಂತ ಭಟ್ ಕೋಟೇಶ್ವರ

-----

ಪುರಾಣಗಳಲ್ಲಿಚಂದ್ರನಿಗೆ ವಿಶೇಷ ಸ್ಥಾನವಿದೆ. ಚಂದ್ರನು ಅತ್ರಿ ಮಹರ್ಷಿ ಮತ್ತು ಅನಸೂಯಾ ದೇವಿ ಅವರ ಪುತ್ರ. ಚಂದ್ರನನ್ನು ಸೋಮ ಎಂದೂ ಕರೆಯುತ್ತಾರೆ. ಮತ್ತೊಂದು ಕಥೆಯ ಪ್ರಕಾರ, ಸಮುದ್ರ ಮಥನ ಸಮಯದಲ್ಲಿಚಂದ್ರನು ಅಮೃತದ ಜೊತೆ ಉದ್ಭವಿಸಿದನು. ಚಂದ್ರನಿಗೆ 27 ನಕ್ಷತ್ರಗಳು ಪತ್ನಿಯರಾಗಿ ಇದ್ದಾರೆ (ಅವುಗಳು ದಕ್ಷ ಪ್ರಜಾಪತಿಯ ಪುತ್ರಿಯರು). ಅವರಲ್ಲಿಪ್ರಧಾನ ರೋಹಿಣಿ ನಕ್ಷತ್ರ. ಚಂದ್ರನು ವಿಶೇಷವಾಗಿ ರೋಹಿಣಿ ನಕ್ಷತ್ರವನ್ನು ಹೆಚ್ಚು ಪ್ರೀತಿಸಿದನು. ಇದರಿಂದ ಬೇಸರಗೊಂಡ ದಕ್ಷನು ಚಂದ್ರನಿಗೆ ಶಾಪ ನೀಡಿದನು. ನಂತರ ದೇವತೆಗಳ ಪ್ರಾರ್ಥನೆಯಿಂದ, ಚಂದ್ರನು ಸಂಪೂರ್ಣ ನಾಶವಾಗದೇ ಕೃಷ್ಣ ಪಕ್ಷ- ಶುಕ್ಲಪಕ್ಷ ರೂಪದಲ್ಲಿ ಕ್ಷಯ-ವೃದ್ಧಿ ಹೊಂದುವಂತಾಯಿತು. ಆದರೆ ಚಂದ್ರನು ತಾಯಿಯಂತೆ ಪ್ರೀತಿ ಮತ್ತು ಸಮೃದ್ಧಿಯನ್ನು ನೀಡುವ ಗ್ರಹ ಎಂದು ಪರಿಗಣಿಸಲಾಗಿದೆ.

ಚಂದ್ರನ ಪ್ರಭಾವ

ಪ್ರಪಂಚದಲ್ಲಿಹೇಗೆ ಚಂದ್ರನಿಂದ ಹುಣ್ಣಿಮೆ ಅಮಾವಾಸ್ಯೆಗಳಲ್ಲಿಎಲ್ಲಾಪ್ರಧಾನ ನೀರಿನ ಮೂಲಗಳು ಕೂಡ ಗುರುತ್ವಕ್ಕೆ ಒಳಗಾಗುತ್ತವೋ (ಸಮುದ್ರದ ನದಿಗಳ ನೀರು ಇಳಿತ ಹಾಗೂ ಏರಿಕೆ) ಹಾಗೆಯೇ ನಮ್ಮ ಮನಸ್ಸು ಕೂಡ ಪ್ರಕೃತಿಯಲ್ಲಿನೆಲೆಗೊಂಡ ಚಂದ್ರ ದೇವರ ಪ್ರಭಾವದಿಂದ ಅವನ ಸಂಚಾರಕ್ಕೆ ಅನುಗುಣವಾಗಿ ಏರುಪೇರುಗಳಾಗುವ ಬದಲಾವಣೆಯನ್ನು ಕಾಣಬಹುದು.

ಅಂದರೆ, ‘ಶರೀರೇಷ್ವಾಸತೇ ದೇವಾಃ ಗ್ರಹಾಃ ಸೂರ್ಯಾದಯೋ ನವ|

ತಸ್ಮಾತ್ತೇಷು ಪ್ರಶಾಂತೇಷು ದೇಹ ಶಾಂತಿಃ ಭವೇತ್ ನೃಣಾಮ||

ಬ್ರಹ್ಮಾಂಡದಲ್ಲಿನ ಸ್ಥಿತಿಗತಿಯಂತೆ ಬ್ರಹ್ಮಾಂಡದಲ್ಲಿರುವ ಪ್ರತಿಯೊಂದು ಚರಾಚರಗಳಲ್ಲಿಬ್ರಹ್ಮಾಂಡದಲ್ಲಿರುವ ಸಕಲ ಶಕ್ತಿಗಳ ಅಂಶವು ಈ ಪಿಂಡಾಂಡದಲ್ಲಿಅಂದರೆ ಶರೀರದಲ್ಲಿಅವುಗಳ ಒಂದೊಂದು ಶಕ್ತಿಯ ಗ್ರಹಗಳ ಅಂಶಗಳು ಇವೆ. ಪ್ರತಿಯೊಂದು ಮನುಷ್ಯನಲ್ಲಿಯೂ ಅಂದರೆ ಪಿಂಡಾಂಡದಲ್ಲಿಯೂ ಬ್ರಹ್ಮಾಂಡದ ಎಲ್ಲಗ್ರಹಗಳು, ದೇವತೆಗಳು, ಪರ್ವತಗಳು, ನದಿಗಳು, ಸಮುದ್ರಗಳು ಹೀಗೆ ಎಲ್ಲವೂ ಇವೆ. ಇವುಗಳ ಸತ್ ಸ್ಥಿತಿಯನ್ನು ಪಡೆಯುವಲ್ಲಿಮನುಷ್ಯನು ತನ್ನ ದಶೆಗೆ ಅನುಗುಣವಾಗಿ ನಕ್ಷತ್ರಗಳ ಪರಿಣಾಮದಲ್ಲಿಗ್ರಹಗಳ ಸಂಚಾರವನ್ನು ನೋಡಿಕೊಂಡು ಕಾಲಕಾಲಕ್ಕೆ ಆಯಾ ದೇವತೆಗಳ ಅನುಗ್ರಹವನ್ನು ಬಗೆಬಗೆಯ ಅನುಷ್ಠಾನಗಳಿಂದ ಪಡೆಯಬೇಕು.

*ಧಾರ್ಮಿಕ ಮಹತ್ವ

ಚಂದ್ರನು ಸೋಮಸ್ವರೂಪಿ, ಅಮೃತದ ಸಂಕೇತ. ಸೋಮವಾರದಂದು ಚಂದ್ರನ ಪೂಜೆ ಮಾಡುವುದರಿಂದ ಮನಃಶಾಂತಿ ದೊರೆಯುತ್ತದೆ. ಶಿವನ ಜಟೆಯಲ್ಲಿಚಂದ್ರನು ಅಲಂಕರಿಸಿದ್ದಾನೆ (ಚಂದ್ರಶೇಖರ). ಶಿವನನ್ನು ಆರಾಧಿಸಿದರೆ ಅದು ಚಂದ್ರನನ್ನು ಸಂತೋಷಪಡಿಸಿದಂತೆ ಅದಕ್ಕಾಗಿಯೇ ಸೋಮವಾರವು ಶಿವನಿಗೆ ಪ್ರಿಯವಾದ ದಿನ ಆಗಿದೆ. ಸೋಮ ಪ್ರದೋಷದಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಚಂದ್ರನ ಕೃಪೆಯಿಂದ ಶಾಂತಿ, ಸಮತೋಲನ ಸಿಗುತ್ತದೆ. ಚಂದ್ರನಿಂದ ಪ್ರಕೃತಿಯಲ್ಲಿರುವ ಎಲ್ಲಾಔಷಧಗಳಿಗೂ ಶಕ್ತಿಯು ದೊರೆಯುತ್ತದೆ. ಔಷಧಗಳ ಸೇವನೆಯಲ್ಲಿಚಂದ್ರನ ಸ್ಮರಣೆಯು ಗಮನಾರ್ಹ.

---

ಚಂದ್ರನ ಇತರ ಹೆಸರುಗಳು

ಸೋಮ, ಚಂದ್ರ, ಶಶಿ, ಸುಧಾಂಶು,ಇಂದು, ನಿಶಾಕರ, ಶಂಕರ ಭೂಷಣ, ಔಷಧೀಶ.

ನವಗ್ರಹಗಳಲ್ಲಿಸ್ಥಾನ

ಚಂದ್ರನು ಸೂರ್ಯನ ಬೆಳಕಿನಿಂದ ಪ್ರಕಾಶಿಸುತ್ತಾನೆ ಮತ್ತು ಭೂಮಿಗೆ ಸಮೀಪದಲ್ಲಿದ್ದಾನೆ. ದಿಕ್ಕುಗಳಲ್ಲಿಚಂದ್ರನಿಗೆ ಆಗ್ನೇಯ ದಿಕ್ಕು. ಅಧಿದೇವತೆ -ಆಪಃ, ಪ್ರತ್ಯಧಿದೇವತೆ-ಪಾರ್ವತಿ, ಬಣ್ಣ -ಬಿಳಿ, ಗೋತ್ರ -ಆತ್ರೇಯ, ನವಗ್ರಹದಲ್ಲಿಚಂದ್ರದೇವರ ಜಪ ಸಂಖ್ಯೆ 11000, ಧಾನ್ಯ -ಅಕ್ಕಿ, ರತ್ನ-ಮುತ್ತು, ಸಮಿತ್ -ಪಾಲಾಶ, ಚಂದ್ರನಿಗೆ ಸಂಬಂಧಪಟ್ಟ ದಾನ -ಶಂಖ. ಚಂದ್ರನಿಂದ ಸಂಬಂಧಪಟ್ಟ ರೋಗ -ವಾತ. ಚಂದ್ರನು ಕರ್ಕಾಟಕ ರಾಶಿಯನ್ನು ಆಳುತ್ತಾ್ತನೆ. ವೃಷಭ ರಾಶಿಯಲ್ಲಿಉಚ್ಛ ಸ್ಥಾನದಲ್ಲಿರುತ್ತಾನೆ. ಹತ್ತು ವರ್ಷಗಳ ಕಾಲ ದಶಾಭುಕ್ತಿಯಲ್ಲಿರುತ್ತಾನೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಸೋಮನು ನವಗ್ರಹಗಳಲ್ಲಿಒಬ್ಬನಾಗಿದ್ದು, ಪ್ರೀತಿ, ಶಾಂತಿ ಮತ್ತು ಮನಸ್ಸಿನ ಅಧಿಪತಿಯಾಗಿದ್ದಾನೆ. ಚಂದ್ರನು ಶಾಂತ, ಸುಂದರ ಪ್ರಕಾಶವನ್ನು ಹೊಂದಿದ್ದಾನೆ. ಅವನು ಹತ್ತು ಬಿಳಿ ಕುದುರೆಗಳ ರಥದಲ್ಲಿಸಂಚರಿಸುತ್ತಾನೆ. ಚಂದ್ರನ ಕೈಯಲ್ಲಿಸಾಮಾನ್ಯವಾಗಿ ಅಮೃತ ಕಲಶ ಇರುತ್ತದೆ.

ಬದುಕಿನಲ್ಲಿನವಗ್ರಹಗಳ ಪಾತ್ರ

ಮಾನವನ ಆಯುಸ್ಸು 120 ವರ್ಷ. ಇದನ್ನು ಕೇತು 7 ವರ್ಷ, ಶುಕ್ರ 20 ವರ್ಷ, ರವಿ 6 ವರ್ಷ, ಚಂದ್ರ 10 ವರ್ಷ, ಕುಜ 7 ವರ್ಷ, ರಾಹು 18 ವರ್ಷ, ಗುರು 16 ವರ್ಷ, ಶನಿ 19 ವರ್ಷ, ಬುಧ 17ವರ್ಷ, ಅಂದರೆ- 7+20+6+10+7+18+16+19+17 = 120 ವರ್ಷಗಳಾಗಿ ವಿಂಗಡನೆ ಮಾಡಲಾಗಿದೆ.

ಇಲ್ಲಿತೋರಿಸಿದ ಗ್ರಹಗಳ ಬದಲಾವಣೆಯ ಆಧಾರದಲ್ಲಿಮಾನವನ ಬೆಳವಣಿಗೆಗಳು ವ್ಯತ್ಯಾಸವಾಗುತ್ತದೆ. ಆದಿತ್ಯಾದಿ ನವಗ್ರಹರ ಶಕ್ತಿಗಳೇ ಮಾನವಾದಿ ಜೀವರಾಶಿಗಳ ಒಳಗಿರುವುದು. ರವಿಯು ಶರೀರವನ್ನು ಸೂಚಿಸುತ್ತಾನೆ. ಪರಾಕ್ರಮಾದಿ ಗುಣಗಳನ್ನು ರವಿ ಕುಜರು ಶರೀರದೊಳಗೆ ಸೃಷ್ಟಿಸುತ್ತಾರೆ. ತಾಳ್ಮೆ, ಸೌಂದರ್ಯಗಳಿಗೆ ಮನಸ್ಸಿನ ಸ್ಥಿತಿಗತಿಗಳಿಗೆ ಚಂದ್ರ ಶುಕ್ರರು ಕಾರಣರು. ಮನೋಬಲಕ್ಕೆ ಚಂದ್ರನೇ ಕಾರಣ. ಜ್ಞಾನವನ್ನು ನೀಡುವವನು ಗುರುವಾದರೆ, ಬುದ್ಧಿ ಚತುರತೆಗಳಿಗೆ ಕಾರಣನು ಬುಧ. ಶನಿಯು ದೇಹದ ಎಲುಬು (ಕಾಂಕ್ರಿಟ್ ಕಂಬದೊಳಗಿನ ಕಬ್ಬಿಣದ ಸರಳುಗಳಂತೆ) ಕಾರಕನು. ರಾಹು ಕೇತುಗಳು ಸಂಕರ್ಷಣಾ ಶಕ್ತಿಗಳು. ಅಂದರೆ ಉತ್ಸಾಹ ಮತ್ತು ನಿರುತ್ಸಾಹಗಳನ್ನು ನೀಡುವವರು. ಉದಾ: ಜಾತಕದಲ್ಲಿರವಿ ಕುಜರು ನಿರ್ಬಲರಾಗಿದ್ದು ರಾಹು ಪರಾಕ್ರಮ ಭಾಗದಲ್ಲಿಬಲಿಷ್ಠನಾಗಿದ್ದರೆ ಅತಿಯಾದ ಪರಾಕ್ರಮ, ಉತ್ಸಾಹ ಉಂಟಾಗುತ್ತದೆ. ಆದರೆ ಸಾಧಿಸಲು ಅಸಾಧ್ಯವಾದಾಗ ತಕ್ಷಣ ಸಂಪೂರ್ಣ ನಿರುತ್ಸಾಹಿಯಾಗುತ್ತಾನೆ. ಇಲ್ಲಿಶನಿಯು ದುರ್ಬಲನಾಗಿದ್ದರೆ ಪರಾಕ್ರಮ ಮಾಡಲು ಹೋಗಿ ಕೈಕಾಲು ಮುರಿದುಕೊಳ್ಳುವುದೋ ಅಥವಾ ಇನ್ನಾವುದೋ ಅನಾಹುತ ಆಗಬಹುದು. ಹಾಗಾಗಿ ಜ್ಯೋತಿಷಿಗಳ ಸಲಹೆ ಪಡೆಯುವುದು ಉತ್ತಮ.

ಹೀಗೆ ಒಂದೊಂದು ಗ್ರಹಗಳು ಒಂದೊಂದು ಬಲವನ್ನು ನೀಡುತ್ತಾರೆ. ಈ ಗ್ರಹರ ಸಂಧಿಕಾಲದಲ್ಲಿಆಸಕ್ತಿಗಳ ಬದಲಾವಣೆಯೂ ಆಗುತ್ತದೆ. ಇಲ್ಲಿಶುಕ್ರಾದಿತ್ಯ, ಕುಜ- ರಾಹು, ರಾಹು -ಬೃಹಸ್ಪತಿ ಸಂಧಿಗಳ ಕಾಲ ಅಪಾಯಕಾರಿ. ಇದು ಮನುಷ್ಯನ ಮನಸ್ಥಿತಿ ಬದಲಾಗುವ ಕಾಲವಿದು. ಬೇರೆ ಗ್ರಹರಲ್ಲೂಇದೇ ರೀತಿ ಇದ್ದರೂ ಅದು ಅಪಾಯಕಾರಿಯಾಗುವುದಿಲ್ಲ. ಹಾಗಾಗಿ ಇದಕ್ಕೆ ಪುರಾತನರು ಸಂಧಿ ಶಾಂತಿ ಹೋಮ ಪರಿಹಾರಗಳನ್ನು ತಿಳಿಸಿದ್ದಾರೆ. ಇನ್ನು ಆಹಾರ ನಿಯಮಗಳಿಂದಲೂ ಸಾಧ್ಯವಿದ್ದರೆ ನಿಯಂತ್ರಿಸಬಹುದು. ಯಾಕೆಂದರೆ ಗ್ರಹರ ರಶ್ಮಿಗಳು ಘ್ಕಿvಜಿಠಿaಞಜ್ಞಿ, p್ಟಟಠಿಛಿಜ್ಞಿ ಗಳಿಗೂ ಕಾರಕವಾಗುತ್ತದೆ. ಯಾವಾಗ ಈ ಪೋಷಕಾಂಶಗಳ ಕೊರತೆಗಳುಂಟಾಗುತ್ತದೋ ಆಗ ರೋಗೋತ್ಪತ್ತಿ, ಮರಣಾದಿಗಳು ಸಂಭವಿಸುತ್ತದೆ. ಜಗತ್ತಿನ ಪ್ರತಿಯೊಂದು ನಾವು ತಿನ್ನುವ ಆಹಾರಗಳಿಗೆ ಗ್ರಹರ ಕಾರಕತ್ವ ಇರುತ್ತದೆ. ಉದಾ: ಕೆಲವರು ಹೇಳುವ ಮಾತುಗಳನ್ನು ನೀವು ಕೇಳಿರಬಹುದು. ‘ಹಿಂದೆ ನನಗೆ ಸಿಹಿ ಎಂದರೆ ಪಂಚಪ್ರಾಣ. ಈಗ ಸಿಹಿಯೇ ಇಷ್ಟವಿಲ್ಲ. ಈಗ ಖಾರವೇ ಇಷ್ಟ, ಆ ತರಕಾರಿ ನನಗೆ ತುಂಬಾ ಇಷ್ಟವಿತ್ತು, ಈಗ ಅದರ ವಾಸನೆ ಬಂದರೂ ಇಷ್ಟವಾಗದು’ ಎಂಬಿತ್ಯಾದಿ ವಿಚಾರಗಳನ್ನು ಹೇಳುತ್ತಾರೆ. ಇದೆಲ್ಲಾದೇಹದ ಬೆಳವಣಿಗೆಯ ಫಲಗಳು. ಅಂದರೆ ದಶಾ ಕಾಲಗಳ ಫಲ. ಹಾಗಾಗಿ ದೇಹದ ಆಯುಸ್ಸು 120 ವರ್ಷಗಳನ್ನು ನವಗ್ರಹರು ಸೂಚಿಸುತ್ತಾರೆ. ಇದನ್ನು ಈ ರೀತಿ ವಿಂಗಡಿಸಲಾಗಿದೆ. ಒಟ್ಟಿನಲ್ಲಿ‘ಶರೀರ ಮಾಧ್ಯಂ ಖಲು ಧರ್ಮ ಸಾಧನಂ’ ಎಂಬಂತೆ ಸಕಲ ಕರ್ಮಗಳಿಗೂ ಶರೀರದ ಸೌಖ್ಯವೇ ಅಗತ್ಯ. ಅದನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ.

*ಬಾಕ್ಸ್ ಮಾಡಿ

ಜ್ಯೋತಿಷದಲ್ಲಿಮಹತ್ವ

ಸೋಮ (ಚಂದ್ರ) ಗ್ರಹನು ಮನಸ್ಸು, ಭಾವನೆಗಳು , ಕಲ್ಪನೆ, ತಾಯಿ, ಮನಃಶಾಂತಿ ಇವುಗಳನ್ನು ಸೂಚಿಸುತ್ತಾನೆ. ಜಾತಕನ ಕುಂಡಲಿಯಲ್ಲಿಚಂದ್ರ ಬಲವಾಗಿದ್ದರೆ: ಶಾಂತಿ, ಸಂತೋಷ, ಉತ್ತಮ ಮನೋಸ್ಥಿತಿ, ಸೃಜನಶೀಲತೆ ಇರುತ್ತದೆ. ದುರ್ಬಲವಾಗಿದ್ದರೆ: ಮಾನಸಿಕ ಅಶಾಂತಿ, ಚಿಂತೆ, ಆತಂಕ, ನಿದ್ರಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಲೇಖಕರು: ಜ್ಯೋತಿಷಿ, ಅಧ್ಯಾತ್ಮ ಚಿಂತಕರು