ಸಂಗೀತ ಗ್ರಾಮ ರುದ್ರಪಟ್ಟಣ
---------
ಸುಮಾವೀಣಾ
--
ರುದ್ರಪಟ್ಟಣ (ಹಾಸನ): ‘ಕರ್ನಾಟಕದ ತಂಜಾವೂರು’ ಎಂದೇ ಪ್ರಸಿದ್ಧಿ ಪಡೆದಿರುವ ಸುಂದರ ಸಾಂಸ್ಕೃತಿಕ ಸಂಗೀತ ಗ್ರಾಮ ರುದ್ರಪಟ್ಟಣ. ಕಾವೇರಿ ನದಿ ತಟದಲ್ಲಿಸ್ಥಿತವಾಗಿರುವ ತಂಬೂರಿಯ ಮಾದರಿಯಲ್ಲಿನಿರ್ಮಾಣವಾಗಿರುವ ಸಪ್ತಸ್ವರ ದೇವತಾ ಧ್ಯಾನ ಮಂದಿರ ಇಲ್ಲಿನ ವಿಶೇಷತೆ. ಇದರ ಮುಖ್ಯ ರೂವಾರಿ ಆರ್ .ಕೆ ಪದ್ಮನಾಭ ಅವರು.
ರುದ್ರಪಟ್ಟಣ ಎಂದ ಕೂಡಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಗೆ ಸೇರಿದ ಆರ್ .ಕೆ.ಶ್ರೀಕಂಠನ್ , ಆರ್ .ಕೆ ಪದ್ಮನಾಭ ಸೇರಿದಂತೆ ಅನೇಕ ದಿಗ್ಗಜರ ಹೆಸರುಗಳು ತಟ್ಟನೆ ಹೊಳೆಯುತ್ತವೆ. ವೇದ, ಸಂಸ್ಕೃತ, ಜ್ಯೋತಿಷ ಶಾಸ್ತ್ರದಲ್ಲಿಅಗಾಧ ಪಾಂಡಿತ್ಯ ಹೊಂದಿರುವ ಪಂಡಿತ ವರ್ಗವೇ ಇಲ್ಲಿದೆ ಅಲ್ಲದೆ ಭಾವಗೀತೆ ಪ್ರಕಾರದಲ್ಲಿಪ್ರಸಿದ್ಧಿ ಪಡೆದಿರುವ ರತ್ನಮಾಲ ಪ್ರಕಾಶ್ ಮತ್ತು ಮಾಲತಿ ಶರ್ಮ ಅವರು ಇದೇ ಗ್ರಾಮದವರು.
ಸಂಗೀತ ಕಾರ್ಯಕ್ರಮ
ಪ್ರತಿ ವರ್ಷದಂತೆ ಈ ಬಾರಿಯು ಐತಿಹಾಸಿಕ ವಿಶೇಷತೆ ಇರುವ ರಾಮಮಂದಿರ ಮತ್ತು ಸಪ್ತಸ್ವರ ದೇವತಾ ಧ್ಯಾನ ಮಂದಿರದ ಬಳಿ ಇದೇ 20ರಿಂದ ಆರಂಭಗೊಂಡು 24ರವರೆಗೆ ಐದು ದಿನಗಳ ಸಂಗೀತೋತ್ಸವ ನಡೆಯಲಿದೆ. ಶಾಸ್ತ್ರೀಯ ಗಾಯನ ಮತ್ತು ವಾದ್ಯ ಕಛೇರಿಗಳು, ಜುಗಲ್ ಬಂಧಿ ಸಂಗೀತಾಸಕ್ತರ ಮನ ತಣಿಸಲಿವೆ. ಮೇ 24ರಂದು ರಥೋತ್ಸವ, ನಾಮ ಸಂಕೀರ್ತನೆ ಹಾಗೂ ಸಂತ ತ್ಯಾಗರಾಜರ ಪಂಚರತ್ನ ಕೃತಿಗಳ ಗೋಷ್ಠಿ ಗಾಯನ ಇರಲಿದೆ.
ಬೆಂಗಳೂರಿನಿಂದ 194 ಕಿ.ಮೀ., ಹಾಸನದಿಂದ 60 ಕಿ.ಮೀ. ಹಾಗೂ ರಾಮನಾಥಪುರದಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿ

