ಸೆಕೆಂಡ್ ಲೀಡ್

Contributed byJaya shree|Vijaya Karnataka

ಗಡಿ ಭದ್ರತಾ ಪಡೆಯ ಮಹಿಳಾ ತಂಡ ಮೌಂಟ್ ಎವರೆಸ್ಟ್ ಶಿಖರ ಏರಿದೆ. ಮೇ 21ರಂದು ಈ ಐತಿಹಾಸಿಕ ಸಾಧನೆ ಮಾಡಲಾಗಿದೆ. ಬಿಎಸ್ಎಫ್ ವಜ್ರ ಮಹೋತ್ಸವದ ಸಂದರ್ಭದಲ್ಲಿ ಈ ಯಶಸ್ಸು ಲಭಿಸಿದೆ. ಕೌಸರ್ ಫಾತಿಮಾ, ಮುನ್ಮುನ್ ಘೋಷ್, ರಬೇಕಾ ಸಿಂಗ್ ಮತ್ತು ತ್ಸೆರಿಂಗ್ ಚೋರೋಲ್ ತಂಡದಲ್ಲಿದ್ದರು. ಭಾರತೀಯ ಮಹಿಳಾ ಶಕ್ತಿಯ ಧೈರ್ಯಕ್ಕೆ ಇದು ಸಾಕ್ಷಿಯಾಗಿದೆ.

bsf womens team makes historic ascent to everest peak

ಎವರೆಸ್ಟ್ ಶಿಖರವೇರಿದ

ಬಿಎಸ್ ಎಫ್ ಮಹಿಳಾ ತಂಡ

‘ಮಿಷನ್ ವಂದೇ ಮಾತರಂ’ ಅಭಿಯಾನದ ಅಡಿಯಲ್ಲಿಗಡಿ ಭದ್ರತಾ ಪಡೆಯ (ಬಿಎಸ್ ಎಫ್ ) ಮಹಿಳಾ ಪರ್ವತಾರೋಹಣ ತಂಡವು ಮೇ 21ರಂದು ವಿಶ್ವದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು ಏರಿ ಐತಿಹಾಸಿಕ ಸಾಧನೆ ಮಾಡಿದೆ. ಬಿಎಸ್ ಎಫ್ ತನ್ನ ವಜ್ರ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿಮಹಿಳಾ ತಂಡದ ಸಾಹಸ ರಾಷ್ಟ್ರದ ಗಮನ ಸೆಳೆದಿದೆ.

ಪರ್ವತಾರೋಹಣದಲ್ಲಿಲಡಾಖ್ ನ ಕೌಸರ್ ಫಾತಿಮಾ, ಪಶ್ಚಿಮ ಬಂಗಾಳದ ಮುನ್ಮುನ್ ಘೋಷ್ , ಉತ್ತರಾಖಂಡದ ರಬೇಕಾ ಸಿಂಗ್ ಮತ್ತು ಕಾರ್ಗಿಲ್ ನ ತ್ಸೆರಿಂಗ್ ಚೋರೋಲ್ ಎಂಬ ನಾಲ್ವರು ಮಹಿಳೆಯರು ಪಾಲ್ಗೊಂಡಿದ್ದರು. ಸಮುದ್ರ ಮಟ್ಟದಿಂದ 8,848.86 ಮೀಟರ್ ಎತ್ತರದ ಶಿಖರವನ್ನು ತಲುಪಿದ ತಂಡವು, ಅಲ್ಲಿಬಿಎಸ್ ಎಫ್ ಧ್ವಜವನ್ನು ಹಾರಿಸಿತು.

ಮಹಿಳಾ ತಂಡವನ್ನು ಸೇನಾ ಅಧಿಕಾರಿಗಳು ಶ್ಲಾಘಿಘಿಸಿದ್ದು, ‘‘ಈ ಸಾಧನೆಯು ಭಾರತೀಯ ನಾರಿ ಶಕ್ತಿಯ ಅಪ್ರತಿಮ ಧೈರ್ಯ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಗಡಿ ಕಾಯುವ ಮಹಿಳಾ ಸೈನಿಕರು ಕೇವಲ ಭೂಮಿಯ ಮೇಲಲ್ಲದೆ, ಗಗನಚುಂಬಿ ಶಿಖರಗಳ ಮೇಲೆಯೂ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬಲ್ಲರು ಎಂಬುದನ್ನು ಈ ತಂಡವು ಜಗತ್ತಿಗೆ ತೋರಿಸಿಕೊಟ್ಟಿದೆ’’ ಎಂದು ಬಣ್ಣಿಸಿದರು.

ಫೋಟೊ: ಬಿಎಸ್ ಎಫ್