ಪತ್ರವೃಕ್ಷ

Contributed byShridevi Ambekallu|Vijaya Karnataka

ಬೋಧಿ ವೃಕ್ಷದ ಮೇ 16-22, 2026ರ ಸಂಚಿಕೆ ಶನೈಶ್ಚರ ಜಯಂತಿಯ ಅಂಗವಾಗಿ ಶನಿ ದೇವರ ಕುರಿತು ಆಕರ್ಷಕ ಲೇಖನಗಳನ್ನು ಪ್ರಕಟಿಸಿದೆ. ಶನಿ ದೇವರ ಬಗ್ಗೆ ಜನರಲ್ಲಿರುವ ಭಯವನ್ನು ಹೋಗಲಾಡಿಸಿ, ಅವರು ನ್ಯಾಯಾಧೀಶರಂತೆ ವರ್ತಿಸುತ್ತಾರೆ ಎಂಬುದನ್ನು ವಿವರಿಸಿದೆ. ಶನಿ ದೇವನು ತಪ್ಪುಗಳಿಗೆ ಶಿಕ್ಷೆ ನೀಡಿ, ಒಪ್ಪುಗಳಿಗೆ ಫಲ ನೀಡುತ್ತಾನೆ. ನ್ಯಾಯ ಮಾರ್ಗದಲ್ಲಿ ನಡೆದರೆ ಒಳಿತಾಗುತ್ತದೆ.

understanding lord shani lets remember devotion instead of fear

ಸಮೃದ್ಧ ಸಂಚಿಕೆ

ಮೇ 16-22, 2026ರ ಬೋಧಿ ವೃಕ್ಷ ಪ್ರತಿ ವಾರದಂತೆ ಹಲವು ವಿಷಯಗಳಿಂದ ಸಮೃದ್ಧವಾಗಿ, ಸುಂದರವಾಗಿ ಮೂಡಿಬಂದಿದೆ. ಶನೈಶ್ಚರ ಜಯಂತಿ ನಿಮಿತ್ತ ಶನಿ ದೇವರ ಕುರಿತು ವಿಚಾರಪ್ರದ ಲೇಖನಗಳನ್ನು ಸಂಚಿಕೆ ಆಕರ್ಷಣೀಯವಾಗಿ ಪ್ರಕಟಿಸಿದೆ. ಸೂರ್ಯ ಪುತ್ರರಾದ ಶನಿ ದೇವರ ಬಗ್ಗೆ ಜನಸಾಮಾನ್ಯರಲ್ಲಿಭಕ್ತಿಗಿಂತಲೂ ಭಯವೇ ಹೆಚ್ಚಾಗಿರುತ್ತದೆ. ಯಾವಾಗಲೂ ಕೆಟ್ಟದ್ದನ್ನೇ ಮಾಡುತ್ತಾನೆæಂಬ ಪೂರ್ವಾಗ್ರಹ ಇರುತ್ತದೆ. ಆದರೆ ವಾಸ್ತವವಾಗಿ ಯಮ ಮತ್ತ ಶನಿ ಇಬ್ಬರೂ ಅತ್ಯಂತ ಶಿಸ್ತಿನ ನಿಯಮ ಪಾಲಕರಾಗಿರುತ್ತಾರೆ. ಯಾವ ಬೇಧ ಭಾವ ಇಲ್ಲದೆ ಸದಾ ಒಳಿತಿನ ಹಾಗೂ ನ್ಯಾಯ ಪಕ್ಷಪಾತಿಗಳಾಗಿರುವ ಹಾಗೂ ನಮ್ಮ ತಪ್ಪುಗಳಿಗೆ ತಕ್ಕ ಶಿಕ್ಷೆ ವಿಧಿಸಿ, ಒಪ್ಪುಗಳಿಗೆ ಸೂಕ್ತ ಫಲ ನೀಡುವ ನ್ಯಾಯಾಧೀಶರು. ಸಾಡೇ ಸಾತಿ ಇದ್ದಾಗ ಶನಿ ಸ್ವಲ್ಪ ಕಿರಿಕಿರಿ ಮಾಡಿದರೂ ಕೊನೆಗೆ ನಮಗೆ ಕೊಡಬೇಕಾದ ಎಲ್ಲವನ್ನೂ ಕೊಡುವಂತ ಕರುಣಾಮಯಿ. ನಾವು ನ್ಯಾಯ ಮಾರ್ಗದಲ್ಲಿನಡೆಯಬೇಕಷ್ಟೇ, ಇಲ್ಲವಾದರೆ ಶಿಕ್ಷೆ ಖಂಡಿತ!

- ಕಣಜನಹಳ್ಳಿ ಚಂದ್ರಶೇಖರ್ | ಬೆಂಗಳೂರು