ಹಿಸ್ಟರಿ ಮೆಲುಕು ಮೇ 25

Contributed byDHEERAJ K|Vijaya Karnataka

ಮೇ 25, 1999 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಗೆ ಪ್ರವೇಶಿಸಿತು. ಪಿಎಸ್‌ಎಲ್‌ವಿ-ಸಿ2 ರಾಕೆಟ್ ಮೂಲಕ ಭಾರತದ ಓಷನ್‌ಸ್ಯಾಟ್-1 ಉಪಗ್ರಹದೊಂದಿಗೆ ಜರ್ಮನಿ ಮತ್ತು ದಕ್ಷಿಣ ಕೊರಿಯಾದ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಯಿತು. ಇದು ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತು. ಕಡಿಮೆ ವೆಚ್ಚದಲ್ಲಿ ನಿಖರವಾದ ಉಡಾವಣಾ ಸೇವೆಗಳನ್ನು ಒದಗಿಸುವ ಮೂಲಕ ಭಾರತವು ವಿಶ್ವಾಸಾರ್ಹ ಬಾಹ್ಯಾಕಾಶ ಪಾಲುದಾರನಾಗಿ ಹೊರಹೊಮ್ಮಿತು.

the day india entered the global space market may 25

ಇಸ್ರೊ ಐತಿಹಾಸಿಕ ಸಾಧನೆ

ಮೇ 25, 1999

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೊ ಇತಿಹಾಸದಲ್ಲಿ1999ರ ಮೇ 25 ಅತ್ಯಂತ ಮಹತ್ವದ ದಿನವಾಗಿದೆ. ಅಂದು ಭಾರತವು ಜಾಗತಿಕ ವಾಣಿಜ್ಯ ಬಾಹ್ಯಾಕಾಶ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸಿತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಇಸ್ರೊದ ಹೆಮ್ಮೆಯ ಪಿಎಸ್ ಎಲ್ವಿ-ಸಿ2 (Pಖಔ್ಖ-ಇ2) ರಾಕೆಟ್ , ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಸಾಮರ್ಥ್ಯವನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತು. ಇದು ಕೇವಲ ಒಂದು ಯಶಸ್ವಿ ಉಡಾವಣೆಯಾಗಿರದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ದೊಡ್ಡ ಮಾರುಕಟ್ಟೆಗೆ ಭಾರತ ಮುನ್ನುಡಿ ಬರೆಯಲು ಕಾರಣವಾಯಿತು.

ಈ ಐತಿಹಾಸಿಕ ಯಾನದಲ್ಲಿಪಿಎಸ್ ಎಲ್ವಿ ರಾಕೆಟ್ ಭಾರತದ ಸಾಗರ ಸಂಶೋಧನಾ ಉಪಗ್ರಹವಾದ ಐಆರ್ ಎಸ್ -ಪಿ4ಐ್ಕಖ-P4) ಅಥವಾ ಓಷನ್ ಸ್ಯಾಟ್ -1ಅನ್ನು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತು. ಇದರೊಂದಿಗೆ ಅತ್ಯಂತ ಪ್ರಮುಖವಾಗಿ ವಿದೇಶದ ಎರಡು ಪ್ರಮುಖ ಉಪಗ್ರಹಗಳಾದ ಜರ್ಮನಿಯ ಡಿಎಲ್ ಆರ್ -ಟಬ್ ಸ್ಯಾಟ್ (ಈಔ್ಕ-T್ಠಚಿsaಠಿ) ಮತ್ತು ದಕ್ಷಿಣ ಕೊರಿಯಾದ ಕಿಟ್ ಸ್ಯಾಟ್ -3 (ಓಜಿಠಿsaಠಿ-3) ಉಪಗ್ರಹಗಳನ್ನು ಸಹ ಅತ್ಯಂತ ನಿಖರವಾಗಿ ನಿಯೋಜಿತ ಕಕ್ಷೆಯಲ್ಲಿಸ್ಥಾಪಿಸಲಾಯಿತು. ಇದು ಭಾರತವು ಏಕಕಾಲದಲ್ಲಿಮೂರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಕಳುಹಿಸಿದ ಮೊದಲ ಬಹು-ಉಪಗ್ರಹ ಉಡಾವಣಾ ಕಾರ್ಯಾಚರಣೆಯಾಗಿತ್ತು.

ವಿದೇಶಿ ಸಂಸ್ಥೆಗಳ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ತಲುಪಿಸುವ ಮೂಲಕ ಇಸ್ರೊ ತನ್ನ ವಾಣಿಜ್ಯ ವಿಭಾಗವಾದ ಆಂಟ್ರಿP್ಸ… ಕಾರ್ಪೊರೇಷನ್ ಮೂಲಕ ಜಾಗತಿಕ ಮಟ್ಟದಲ್ಲಿಆದಾಯ ಗಳಿಸುವ ಮತ್ತು ನಂಬಿಕಸ್ಥ ಬಾಹ್ಯಾಕಾಶ ಪಾಲುದಾರನಾಗಿ ಹೊರಹೊಮ್ಮುವ ಶಕ್ತಿಯನ್ನು ಪ್ರದರ್ಶಿಸಿತು. ಅತ್ಯಂತ ಕಡಿಮೆ ವೆಚ್ಚದಲ್ಲಿಮತ್ತು ನೂರಕ್ಕೆ ನೂರರಷ್ಟು ನಿಖರತೆಯೊಂದಿಗೆ ಉಪಗ್ರಹಗಳನ್ನು ಉಡಾವಣೆ ಮಾಡುವ ಭಾರತದ ತಂತ್ರಜ್ಞಾನಕ್ಕೆ ಜಾಗತಿಕ ಮನ್ನಣೆ ದೊರೆಯಲು ಈ ಮೈಲಿಗಲ್ಲುನೆರವಾಯಿತು. ಅಲ್ಲಿಯವರೆಗೆ ಕೇವಲ ಸ್ವಾವಲಂಬನೆಗಾಗಿ ಶ್ರಮಿಸುತ್ತಿದ್ದ ಭಾರತೀಯ ಬಾಹ್ಯಾಕಾಶ ಕ್ಷೇತ್ರವು, ಈ ಯಶಸ್ಸಿನ ನಂತರ ಜಗತ್ತಿನ ಇತರ ದೇಶಗಳಿಗೆ ಅತ್ಯಂತ ವಿಶ್ವಾಸಾರ್ಹ ಬಾಹ್ಯಾಕಾಶ ಸೇವೆಯನ್ನು ನೀಡುವ ಜಾಗತಿಕ ಕೇಂದ್ರವಾಗಿ ರೂಪಾಂತರಗೊಳ್ಳಲು ಭದ್ರವಾದ ಬುನಾದಿ ಹಾಕಿತು.