ಭಾರತೀಯ ಅರಣ್ಯ ಸೇವೆಗೆ ಅನುಷಾ ಶ್ರೀನಿವಾಸ್ ಆಯ್ಕೆ

Contributed bywww.hvprasanna@gmail.com|Vijaya Karnataka

ಕನಕಪುರ ತಾಲೂಕಿನ ಸಾಸಲಪುರ ಗ್ರಾಮದ ಅನುಷಾ ಶ್ರೀನಿವಾಸ್‌ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ 63ನೇ ರಾರ‍ಯಂಕ್‌ ಪಡೆದು ಆಯ್ಕೆಯಾಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಅನುಷಾ ಶ್ರೀನಿವಾಸ್‌ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ತಮ್ಮ ಪರಿಶ್ರಮದಿಂದ ಯುವ ಜನತೆಗೆ ಪ್ರೇರಣೆಯಾಗಿರುವ ಅನುಷಾ ಅವರು ದೇಶ ಸೇವೆಯಲ್ಲಿ ಉನ್ನತ ಸಾಧನೆ ಮಾಡುವಂತೆ ಶುಭ ಹಾರೈಸಿದರು. ಗ್ರಾಮಸ್ಥರು ಹೆಗ್ಗಳಿಕೆ ವ್ಯಕ್ತಪಡಿಸಿದರು.

anusha srinivas selected for indian forest service with a rank of 63

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಭಿನಂದನೆ

ವಿಕ ಸುದ್ದಿಲೋಕ ಸಾತನೂರು

ಕೇಂದ್ರ ಲೋಕ ಸೇವಾ ಆಯೋಗ ಯುಪಿಎಸ್ ಸಿ ನಡೆಸಿದ ಭಾರತೀಯ ಅರಣ್ಯ ಸೇವೆ , (ಐಎಫ್ ಎಸ್ ) ಪರೀಕ್ಷೆಯಲ್ಲಿ63ನೇ ರಾರ ಯಂಕ್ ಗಳಿಸಿ ಆಯ್ಕೆಯಾದ ಅನುಷಾ ಶ್ರೀನಿವಾಸ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

2025 ನೇ ಸಾಲಿನ ಯುಪಿಎಸ್ ಸಿ ಭಾರತೀಯ ಅರಣ್ಯ ಸೇವೆ (ಐಎಫ್ ಎಸ್ ) ಪರೀಕ್ಷೆಯಲ್ಲಿಕನಕಪುರ ತಾಲೂಕಿನ ಸಾತನೂರು ಹೋಬಳಿಯ ಸಾಸಲಪುರ ಗ್ರಾಮದ ಅನುಷಾ ಶ್ರೀನಿವಾಸ್ ಆಲ್ ಇಂಡಿಯಾ 63ನೇ ರಾರ ಯಂಕ್ ಪಡೆದು ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾಗಿದ್ದಾರೆ. ತಂದೆ ಶ್ರೀನಿವಾಸ್ ಜತೆ ಅನುಷಾ ಶ್ರೀನಿವಾಸ್ ಮತ್ತು ಅವರ ಕುಟುಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವ ನಗರದ ನಿವಾಸದಲ್ಲಿಭೇಟಿಯಾಗಿ ಅಭಿನಂದನೆ ಸ್ವೀಕರಿಸಿದರು.

ಇವರ ಪತಿ ಸತ್ಯಜಿತ್ ಎಸ್ .ಪಿ, ಸಾಸಲಪುರ ಗ್ರಾಮದ ಪುಟ್ಟಯ್ಯ ಸಿ ಎಂಬುವವರ ಮಗನಾಗಿದ್ದು, ಅನುಷಾ ಶ್ರೀನಿವಾಸ್ ಸಾಸಲಪುರ ಗ್ರಾಮದ ಸೊಸೆಯಾಗಿದ್ದಾರೆ. ಅನುಷಾ ಅವರ ತಂದೆ ತಾಯಿ ಮೈಸೂರಿನವರಾಗಿದ್ದಾರೆ.

ಅನುಷಾರನ್ನು ಅಭಿನಂದಿಸಿದ ಡಿಸಿಎಂ ಶಿವಕುಮಾರ್ , ತಮ್ಮ ಪರಿಶ್ರಮ, ಸಂಕಲ್ಪ ಮತ್ತು ಸಾಧನೆಯ ಮೂಲಕ ಯುವ ಜನತೆಗೆ ಪ್ರೇರಣೆಯಾಗಿರುವ ನಮ್ಮ ಕನಕಪುರ ತಾಲೂಕಿನ ಸಾಸಲಪುರ ಗ್ರಾಮದ ಹೆಣ್ಣು ಮಗಳಾದ ಅನುಷಾ ಶ್ರೀನಿವಾಸ್ ಅವರು ಮುಂದಿನ ದಿನಗಳಲ್ಲಿದೇಶ ಸೇವೆಯಲ್ಲಿಉನ್ನತ ಸಾಧನೆ ಮಾಡಿ ನಾಡಿಗೆ ಕೀರ್ತಿ ತರಲೆಂದು ಶುಭ ಹಾರೈಸಿದರು.

ಸಾಸಲಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಸಂಬಂಧಿಕರು ನಮ್ಮ ಗ್ರಾಮದಲ್ಲಿಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾಗಿರುವುದು ಹೆಗ್ಗಳಿಕೆಯಾಗಿದೆ ಎಂದು ಅಭಿನಂದನೆಗಳನ್ನು ಸಲ್ಲಿಸಿದರು.

13 ಸಾತನೂರು 1: ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಸಾಸಲಪುರ ಗ್ರಾಮದ ಅನುಷಾ ಶ್ರೀನಿವಾಸ್ ಗೆ ಉಪಮುಖ್ಯಮಂತ್ರಿಗಳು ಅಭಿನಂದನೆ ಸಲ್ಲಿಸಿದರು.