ದಿನ ಭವಿಷ್ಯ 22 ಮೇ 2026

Contributed bynetravati.krishnamurthy@timesgroup.com|Vijaya Karnataka

22 ಮೇ 2026ರ ದಿನಭವಿಷ್ಯವನ್ನು ಶ್ರೀಪತಿ ಭಟ್ ಅವರು ನೀಡಿದ್ದಾರೆ. ಮೇಷ ರಾಶಿಯವರಿಗೆ ಮಕ್ಕಳ ಓದಿಗೆ ಪರಿಹಾರ ಸಿಗಲಿದೆ. ವೃಷಭ ರಾಶಿಯವರಿಗೆ ಆರೋಗ್ಯ ವೃದ್ಧಿಯಾಗಲಿದೆ. ಮಿಥುನ ರಾಶಿಯವರು ಬೆಲೆಬಾಳುವ ವಸ್ತು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಟಕ ರಾಶಿಯವರಿಗೆ ಆಧ್ಯಾತ್ಮಿಕ ವಿಚಾರಗಳ ಕಡೆಗೆ ಗಮನ ಹರಿಯಲಿದೆ. ಸಿಂಹ ರಾಶಿಯವರು ವಿಶ್ರಾಂತಿ ತೆಗೆದುಕೊಳ್ಳಬೇಕು. ಕನ್ಯಾ ರಾಶಿಯವರಿಗೆ ಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ. ತುಲಾ ರಾಶಿಯವರಿಗೆ ಸಂಸಾರದಲ್ಲಿ ಸಾಮರಸ್ಯ ಉಂಟಾಗಲಿದೆ. ವೃಶ್ಚಿಕ ರಾಶಿಯವರು ಸೋಲನ್ನು ಒಪ್ಪಿಕೊಳ್ಳಬೇಕಾಗಬಹುದು. ಧನು ರಾಶಿಯವರಿಗೆ ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಲಿವೆ.

horoscope for may 22 2026 guidance from the stars

ದಿನಭವಿಷ್ಯ 22 ಮೇ 2026

ಶ್ರೀಪತಿ ಭಟ್ | ಬೆಂಗಳೂರು

(ಕಟಕ, ತುಲಾ-ಈ ರಾಶಿಯವರಿಗೆ ಅಮೃತ ಸಿದ್ಧಿ ಯೋಗ)

=----------

ಮೇಷ : ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ಮನಸ್ಸಿನಲ್ಲಿನೆಮ್ಮದಿ ಮೂಡುತ್ತದೆ. ಹೊಸ ಉದ್ಯಮ ಆರಂಭಿಸಲು ಬಂಡವಾಳ ಹೂಡಿಕೆ ಮಾಡಬಹುದು. ಹೊಸ ವಾಹನ ಖರೀದಿ ಅಗತ್ಯವೆನಿಸುತ್ತದೆ.

(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಬೂದು)

------------

ವೃಷಭ : ಶ್ರೀಸೂರ್ಯನಾರಾಯಣನ ಸ್ಮರಣೆ ಮಾಡಿದಲ್ಲಿಆರೋಗ್ಯ ವೃದ್ಧಿಯಾಗಲಿದೆ. ಮೈ-ಕೈ ನೋವುಗಳು ಶಮನಗೊಳ್ಳುತ್ತವೆ. ಕೆಲಸಗಳು ನೆರವೇರಲು ತುಸು ಶ್ರಮ ವಹಿಸಬೇಕಾದೀತು.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಆಲೀವ್ )

------------

ಮಿಥುನ : ಸ್ನೇಹಿತರ ಕಷ್ಟಗಳಿಗೆ ನೆರವಾಗುವ ಸ್ವಭಾವದಿಂದ ತನ್ನ ಮೇಲೆ ಎಲ್ಲಾಎಳೆದುಕೊಂಡಂತೆ ಆಗಬಹುದು. ಬೆಲೆಬಾಳುವ ವಸ್ತುವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಎಚ್ಚರದಿಂದ ಇರಿ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕಂಚು)

--------------

ಕಟಕ: ಪ್ರಾಪಂಚಿಕ ವಿಚಾರವನ್ನು ಬಿಟ್ಟು ಆಧ್ಯಾತ್ಮಿಕ ವಿಚಾರಗಳ ಕಡೆಗೆ ಗಮನ ಹರಿಯಲಿದೆ. ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಕೇಳಿ ಬರಲಿದೆ. ಹಿರಿಯರ ಆಶೀರ್ವಾದ ಲಭಿಸುವುದು.

(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಗುಲಾಬಿ)

----------------

ಸಿಂಹ : ದೇಹಾರೋಗ್ಯದ ಸಲುವಾಗಿ ಕಾರ್ಯಗಳನ್ನು ಬಿಟ್ಟು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿಸಹವರ್ತಿಗಳ ಅಭಿಪ್ರಾಯಗಳನ್ನು ಪಡೆದುಕೊಳ್ಳಿ.

(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬಿಳಿ)

---------------

ಕನ್ಯಾ : ಅಧಿಕ ಶ್ರಮದಿಂದ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿಯಾಗಲಿದೆ. ಓದು ಅಥವಾ ಉದ್ಯೋಗ ಆಯ್ಕೆ ವಿಚಾರದಲ್ಲಿಸ್ನೇಹಿತರಿಂದ ಸೂಕ್ತ ಸಲಹೆ ದೊರೆಯಲಿದೆ.

(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ನೀಲಿ)

---------------

ತುಲಾ : ದೊಡ್ಡ ವಿಚಾರವೊಂದಕ್ಕೆ ಕೈ ಹಾಕಬೇಕಾದ ಸನ್ನಿವೇಶ ಎದುರಾಗುವುದು. ಆತ್ಮ ಸಂಯಮ ರೂಢಿಸಿಕೊಳ್ಳಬೇಕಾದ ಅಗತ್ಯವಿದೆ. ಸಂಸಾರದಲ್ಲಿಸಾಮರಸ್ಯವಿದ್ದು ಮನಸ್ಸಿಗೆ ಶಾಂತಿ ಉಂಟಾಗಲಿದೆ.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಕಪ್ಪು)

----------------

ವೃಶ್ಚಿಕ : ರಾಜಕೀಯ ಕ್ಷೇತ್ರದಲ್ಲಿರುವವರು ಸೋಲನ್ನು ಒಪ್ಪಿಕೊಳ್ಳಬೇಕಾದ ಮನಸ್ಥಿತಿಯನ್ನು ರೂಢಿಸಿಕೊಳ್ಳಿ. ಇನ್ನೊಬ್ಬರನ್ನು ಅರ್ಥೈಸಿಕೊಳ್ಳುವ ಗುಣ ಕಡಿಮೆಯಾಗಲಿದೆ.

(ಶುಭ ಸಂಖ್ಯೆ :8, ಅದೃಷ್ಟ ಬಣ್ಣ : ಹಳದಿ )

-----------------

ಧನು : ಆಸ್ತಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳು ಬಹಿರಂಗಗೊಳ್ಳಲಿವೆ. ವಾಣಿಜ್ಯ ಬೆಳೆಗಳನ್ನು ದಾಸ್ತಾನು ಮಾಡಿಕೊಳ್ಳುವ ಯೋಚನೆ ಸರಿಯಾದ್ದದ್ದಾಗಿರುತ್ತದೆ. ಆತ್ಮಬಲದ ಮೇಲೆ ನಂಬಿಕೆ ಇಡಿ.

(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಹಸಿರು)

---------------------

ಮಕರ : ವ್ಯವಹಾರವು ಊಹಿಸಿದ ವೆಚ್ಚಕ್ಕಿಂತ ಕಡಿಮೆ ಖರ್ಚಿನಲ್ಲಿಸಂಪೂರ್ಣವಾಗುವುದು. ಕೆಲವೊಂದು ಸಾಂಸಾರಿಕ ಸಮಸ್ಯೆಗಳಿಗೆ ಅತ್ಯಂತ ಭಾವುಕರಾಗುವಂತಾಗುವುದು.

(ಶುಭ ಸಂಖ್ಯೆ :1, ಅದೃಷ್ಟ ಬಣ್ಣ : ಕೆಂಪು)

-----------------

ಕುಂಭ : ದೇವತಾ ಕಾರ್ಯಗಳಲ್ಲಿಭಾಗವಹಿಸುವ ಉದ್ದೇಶದಿಂದ ಪ್ರಯಾಣ ಮಾಡಬೇಕಾಗಬಹುದು. ಅನಾರೋಗ್ಯ ಹೊಂದಿದ ಪತ್ನಿಯ ಆರೋಗ್ಯದಲ್ಲಿಸುಧಾರಣೆ ಕಂಡುಬರುವುದು.

(ಶುಭ ಸಂಖ್ಯೆ :4, ಅದೃಷ್ಟ ಬಣ್ಣ : ಆಕಾಶ ನೀಲಿ)

--------------

ಮೀನ : ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದ ಸಂಸ್ಥೆಯಲ್ಲಿಜವಾಬ್ದಾರಿಯುತ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ವೈವಾಹಿಕ ಮಾತುಕತೆಗಳು ಪ್ರಗತಿ ಪಥದತ್ತ ಸಾಗಲು ಶ್ರೀ ಸೀತಾರಾಮರನ್ನು ಪ್ರಾರ್ಥಿಸಿ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕೇಸರಿ)