ನಿರ್ದೇಶಕ ಅರವಿಂದ್ ಕೌಶಿಕ್ ಇದೇ ಮೊದಲ ಬಾರಿಗೆ ಗ್ಯಾಂಗ್ ಸ್ಟರ್ ಕಥೆಯೊಂದನ್ನು ನಿರ್ದೇಶಿಸಿದ್ದಾರೆ. ಅದೇ ‘ಕಂಟ್ರಿ ಮೇಡ್ - ಭಾಗ 2’. ಈಗ ಈ ಸಿನಿಮಾದ ಪಾತ್ರಗಳನ್ನು ಪರಿಚಯಿಸುವ ಟೀಸರ್ ರಿಲೀಸ್ ಆಗಿದೆ.
‘ಬಾಲ್ಯದಿಂದಲೂ ನನ್ನ ಕಾಡಿದ ಊರು ಪಾವಗಡ. ಅಲ್ಲೇನಾದರೂ ಶೂಟಿಂಗ್ ಮಾಡಬೇಕೆಂದು ಆಸೆ ಇತ್ತು. ಆ ಊರಿನಲ್ಲಿನಾನು ನೋಡಿದ ಒಂದಿಷ್ಟು ನಿಜ ಜೀವನದ ವ್ಯಕ್ತಿಗಳನ್ನು ಆಧರಿಸಿ ಪಾತ್ರಗಳನ್ನು ಸೃಷ್ಟಿಸಿದೆ. ಹಾಗೆ ಹುಟ್ಟಿಕೊಂಡಿದ್ದೇ ಕಾಜಲ್ , ಮಿಲ್ಕಿ, ಮಜ್ಜಿಗೆ, ಬಾಂಬೆ ಬಂಟಿ, ಪಾಯ್ಸನ್ ರವಿ, ಜೋಕರ್ ಜಾನಿ, ಜಿಮ್ ಚೇತು, ಪುಷ್ಪ, ಆ್ಯಂಕರ್ ಅಂಜಲಿ, ರೀಲ್ ಶಾಂತಮ್ಮ, ಡೇರ್ ಡೆವಿಲ್ ಸರೋಜ. ಆ ಪಾತ್ರಗಳಿಂದ ಹುಟ್ಟಿಕೊಂಡ ಕಥೆಯೇ ‘ಕಂಟ್ರಿ ಮೇಡ್ - ಭಾಗ 2’ ಎಂದಿದ್ದಾರೆ ಅರವಿಂದ್ ಕೌಶಿಕ್ .
‘ನಮ್ಮೂರಲ್ಲಿನೊಣಗಳು ಜಾಸ್ತಿ. ಏಕೆಂದರೆ ನಮ್ಮೂರಲ್ಲಿಹೆಣಗಳು ಜಾಸ್ತಿ ಎಂಬ ಒಂದೆಳೆ ಇಟ್ಟುಕೊಂಡು ಈ ಚಿತ್ರದ ಕಥೆ ಬರೆದೆ’ ಎನ್ನುವ ಅರವಿಂದ್ , ‘ದ್ವೇಷ, ರೋಷ, ಸಿಟ್ಟು, ಸೇಡಿನ ಯುದ್ಧಗಳನ್ನು ಹೆಚ್ಚಾಗಿ ಗಂಡಸರು ಮಾಡಿದರೂ, ಗಾಯಗಳಾಗೋದು ಹೆಂಗಸರಿಗೆ. ಹೊಸಿಲು ದಾಟಿ ಗಂಡಸ್ತನ ಮೆರೆದು ಚಾಕು ಇರಿಯುವ ಗಂಡಸರಿಗೆ, ಮನೆಯಲ್ಲಿನ ಹೆಂಗಸರ ನೆನಪು ಬರುವುದಿಲ್ಲ. ಈ ಅಂಶವನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಈ ಚಿತ್ರದಲ್ಲಿಎಲ್ಲಾಪಾತ್ರಗಳಿಗೂ ಪ್ರಾಮುಖ್ಯತೆ ಇದೆ’ ಎಂದಿದ್ದಾರೆ ಅರವಿಂದ ಕೌಶಿಕ್ . ಚಿತ್ರಕ್ಕೆ ಅರ್ಜುನ್ ರಾಮು ಸಂಗೀತ, ಸೂರ್ಯ ಛಾಯಾಗ್ರಹಣ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನವಿದೆ.

