ಕೆಕೆಆರ್ ಪ್ಲೇಆಫ್ ಆಸೆ ಜೀವಂತ

Contributed bymanjunath.gowda@timesgroup.com|Vijaya Karnataka

ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡ ಮುಂಬಯಿ ಇಂಡಿಯನ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಮನೀಶ್‌ ಪಾಂಡೆ ಮತ್ತು ರೊವ್ಮನ್‌ ಪೊವೆಲ್‌ ಅವರ ಬ್ಯಾಟಿಂಗ್‌ ಪ್ರದರ್ಶನ ತಂಡಕ್ಕೆ ನೆರವಾಯಿತು. ಈ ಗೆಲುವಿನೊಂದಿಗೆ ಕೋಲ್ಕೊತಾ ತಂಡ ಪ್ಲೇಆಫ್‌ ಪ್ರವೇಶದ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮುಂಬಯಿ ತಂಡ ಮೊದಲು ಬ್ಯಾಟಿಂಗ್‌ ಮಾಡಿ 147 ರನ್‌ ಗಳಿಸಿತ್ತು. ಕೋಲ್ಕೊತಾ 18.5 ಓವರ್‌ಗಳಲ್ಲಿ ಗುರಿ ತಲುಪಿತು.

kkr defeats mumbai to keep playoff hopes alive

ಕೋಲ್ಕೊತಾ: ಮಳೆ ಬಾಧಿತ ಪಂದ್ಯದಲ್ಲಿಸಂಘಟಿತ ಬೌಲಿಂಗ್ ಬಳಿಕ ಮನೀಶ್ ಪಾಂಡೆ (45) ಮತ್ತು ರೊವ್ಮನ್ ಪೊವೆಲ್ (40) ಅವರ ಮತ್ತು ಬ್ಯಾಟಿಂಗ್ ನಿರ್ವಹಣೆ ತೋರಿದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಪ್ರಸಕ್ತ ಐಪಿಎಲ್ ನ ತನ್ನ 13ನೇ ಪಂದ್ಯದಲ್ಲಿ4 ವಿಕೆಟ್ ಗಳಿಂದ ಮುಂಬಯಿ ಇಂಡಿಯನ್ಸ್ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟು 13 ಅಂಕಗಳನ್ನು ಕಲೆಹಾಕಿದ ಕೋಲ್ಕೊತಾ, ತನ್ನ ಪ್ಲೇಆಫ್ ಪ್ರವೇಶವನ್ನು ಜೀವಂತವಾಗಿಟ್ಟುಕೊಂಡಿದೆ.

148 ರನ್ ಗುರಿ ಬೆನ್ನಟ್ಟಿದ ಕೋಲ್ಕೊತಾ, 18.5 ಓವರ್ ಗಳಲ್ಲಿ6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿಬುಧವಾರ ಟಾಸ್ ಸೋತು ಬ್ಯಾಟಿಂಗ್ ಗೆ ಅವಕಾಶ ಪಡೆದ 5 ಬಾರಿಯ ಚಾಂಪಿಯನ್ ಮುಂಬಯಿ, ಕ್ಯಾಮೆರೊನ್ ಗ್ರೀನ್ ಮತ್ತು ಸೌರಭ್ ದುಬೆ ಅವರ ಮಾರಕ ದಾಳಿಗೆ ಆರಂಭಿಕ ಹಿನ್ನಡೆ ಎದುರಿಸಿತು. ಪವರ್ ಪ್ಲೇ ಅವಧಿ ಮುಕ್ತಾಯಕ್ಕೆ ಮುನ್ನವೇ 5.3 ಓವರ್ ಗಳಲ್ಲಿಅಗ್ರ ಕ್ರಮಾಂಕದ 4 ವಿಕೆಟ್ ಕಳೆದುಕೊಂಡ ಮುಂಬಯಿ, ಮೂರಂಕಿ ಮೊತ್ತ ಮುಟ್ಟುವ ಮೊದಲೇ ಆಲೌಟಾಗುವ ಆತಂಕ ಎದುರಿಸಿತು. ಏತನ್ಮಧ್ಯೆ ವರುಣ ಅಡ್ಡಿಪಡಿಸಿದ ಕಾರಣ ಸುಮಾರು ಒಂದು ತಾಸು ಪಂದ್ಯ ಸ್ಥಗಿತಗೊಂಡಿತು. ನಂತರ ಆಟ ಪುನರಾರಂಭವಾದಾಗ ಮಧ್ಯಮ ಕ್ರಮಾಂಕದಲ್ಲಿತಿಲಕ್ ವರ್ಮಾ(20) ಮತ್ತು ಹಾರ್ದಿಕ್ ಪಾಂಡ್ಯ (26) ರನ್ ಗಳಿಸಲು ತಿಣುಕಾಡಿ ಔಟಾದರು. ಇದರ ನಡುವೆ ಕಾರ್ಬಿನ್ ಬಾಷ್ (32) ದಿಟ್ಟ ಬ್ಯಾಟಿಂಗ್ ನಡೆಸಿ ತಂಡದ ಗೌರವಯುತ ಹೋರಾಟಕ್ಕೆ ಸಾಕ್ಷಿಯಾದರು. ಸೌರಭ್ ಮತ್ತು ಗ್ರೀನ್ ಜತೆಗೆ ಕಾರ್ತಿಕ್ ತಲಾ 2 ವಿಕೆಟ್ ಹಂಚಿಕೊಂಡರು.

ಕೋಲ್ಕೊತಾ: 18.5 ಓವರ್ ಗಳಲ್ಲಿ6 ವಿಕೆಟ್ ಗೆ 148(ಮನೀಶ್ 45, ಪೊವೆಲ್ 40, ರಹಾನೆ 21; ಕಾರ್ಬಿನ್ 30ಕ್ಕೆ 3).