‘ಕೀರ್ತಿ ಐ ಲವ್ ಯು’

Contributed byKiran Mr. Kumar|Vijaya Karnataka

ಹೊಸ ತಂಡವೊಂದು 'ಕೀರ್ತಿ ಐ ಲವ್‌ ಯು' ಎಂಬ ಪ್ರೀತಿಯ ಚಿತ್ರವನ್ನು ತೆರೆಗೆ ತರುತ್ತಿದೆ. ಪ್ರಜ್ಯೋತ್ ಎಸ್. ರಾವ್ ಮತ್ತು ನಿಧಿ ಗೌಡ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ನಿರಂಜನ್ ಆರಾಧ್ಯ ನಿರ್ದೇಶನದ ಈ ಚಿತ್ರದ ಮೊದಲ ಹಾಡು 'ಮುದ್ದಾದ ಮೂಗುತಿ' ಬಿಡುಗಡೆಯಾಗಿದೆ. ಯುವಜನತೆಗೆ ಪ್ರೀತಿಯ ಬಗ್ಗೆ ಜಾಗೃತಿ ಮೂಡಿಸುವ ಚಿತ್ರ ಇದಾಗಿದೆ. ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದೆ.

keerthi i love you starring prajoth s rao and nidhi gowda

ಕೀರ್ತಿ ಐ ಲವ್ ಯು

ಹೊಸ ತಂಡವೊಂದು ‘ಕೀರ್ತಿ ಐ ಲವ್ ಯು’ ಎಂಬ ಲವ್ ಜಾನರ್ ನ ಚಿತ್ರವನ್ನು ತೆರೆಯ ಮೇಲೆ ತರುತ್ತಿದೆ. ನಿರಂಜನ್ ಆರಾಧ್ಯ ನಿರ್ದೇಶನದಲ್ಲಿಮೂಡಿಬರುತ್ತಿರುವ ಈ ಚಿತ್ರದ ನಾಯಕ ಪ್ರಜ್ಯೋತ್ ಎಸ್ . ರಾವ್ ಹಾಗೂ ನಾಯಕಿ ನಿಧಿ ಗೌಡ . ಇತ್ತೀಚೆಗೆ ಈ ಚಿತ್ರದ ಮೊದಲ ಹಾಡು ‘ಮುದ್ದಾದ ಮೂಗುತಿ’ ಬಿಡುಗಡೆಯಾಗಿದೆ.

ನಿರಂಜನ್ ಆರಾಧ್ಯ, ‘ಪ್ರೀತಿಯ ಕುರಿತು ಹಲವು ಚಿತ್ರಗಳು ಬಂದಿವೆ. ಆದರೆ ನಮ್ಮ ವ್ಯಾಖ್ಯಾನವೇ ಬೇರೆ. ಚಿಕ್ಕ ವಯಸ್ಸಿನಲ್ಲೇ ಲವ್ , ಡೇಟಿಂಗ್ ಎನ್ನುತ್ತಾರೆ. ಅದೆಲ್ಲಾತಪ್ಪು ಎಂದು ಯುವಜನತೆಗೆ ಜಾಗೃತಿ ಮೂಡಿಸುವ ಚಿತ್ರ ಇದು. ಅಭಿರಾಮ್ ಸಂಗೀತ ನೀಡಿರುವ ಮೂರು ಹಾಡುಗಳು ಚಿತ್ರದಲ್ಲೂಇವೆ. ಆ ಪೈಕಿ ಅರುಣ್ ಕುಮಾರ್ ಬರೆದು, ಆರ್ಫಾಜ್ ಉಲ್ಲಾಳ್ ಹಾಡಿರುವ ಮೊದಲ ಹಾಡು ಬಿಡುಗಡೆಯಾಗಿದೆ. ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ’ ಎಂದಿದ್ದಾರೆ.