‘ನೀನಿದ್ದರೆ’ ಆಲ್ಬಂ ಸಾಂಗ್

Contributed byKiran Mr. Kumar|Vijaya Karnataka

'ನೀನಿದ್ದರೆ' ಎಂಬ ಹೊಸ ಆಲ್ಬಂ ಹಾಡು ಬಿಡುಗಡೆಯಾಗಿದೆ. ಹಿರಿಯ ನಟ ರಮೇಶ್ ಭಟ್ ಹಾಡನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ ಅವರ ಸಾಹಿತ್ಯ, ಸಂಗೀತ ಮತ್ತು ನಿರ್ದೇಶನವಿದೆ. ಈ ಹಾಡು ಈಗ ಸಿನಿಮಾವಾಗುವ ಹಂತದಲ್ಲಿದೆ. ಮೂರು ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

neeniddare album song released movie details

ನೀನಿದ್ದರೆ ಆಲ್ಬಂ ಸಾಂಗ್ ಈಗ ಬಿಡುಗಡೆ ಆಗಿದ್ದು, ಇದೇ ಮುಂದೆ ಚಲನಚಿತ್ರ ಆಗಲಿದೆ.

ಇತ್ತೀಚೆಗೆ ಬಿಡುಗಡೆ ಆದ ಈ ಸಾಂಗ್ ಅನ್ನು ಹಿರಿಯ ನಟ ರಮೇಶ್ ಭಟ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ಈ ಹಾಡಿನ ಸಾಹಿತ್ಯ, ಸಂಗೀತ ಮತ್ತು ನಿರ್ದೇಶನ ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ ಅವರದ್ದು. ಬ್ರೇಸ್ ಲೆಟ್ ನೋಡುತ್ತಾ ಫ್ಲ್ಯಾಶ್ ಬ್ಯಾಕ್ ಗೆ ಹೋಗುವ ದೃಶ್ಯಗಳೊಂದಿಗೆ ಗೀತೆಯು ಸಾಗುತ್ತದೆ. ನಾಯಕನಾಗಿ ಅವಿಲ್ ರೋಡ್ರೀಗಸ್ , ನಾಯಕಿಯಾಗಿ ಕೆರನ್ ಪಿಂಟೋ ಹಾಗೂ ಹಳೆ ಪ್ರೇಯಸಿಯಾಗಿ ಸ್ಮಿತಾ ಪಿಂಟೋ ಅಭಿನಯಿಸಿದ್ದಾರೆ. ಈ ಹಾಡಿಗೆ ಲಕ್ಷೀಕಾಂತ್ ಛಾಯಾಗ್ರಹಣ, ರಾಜೇಶ್ ಚೌಹಾಣ್ ಸಂಕಲನವಿದೆ.

‘ಹಿಮಗಿರಿ ಎಸ್ಟೇಟ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿರುವ ಈ ಹಾಡನ್ನು ಗಾಯಕಿ ಶಿಲ್ಪ ಕುಟೀನ್ ಹಾಡಿದ್ದಾರೆ. ಮೊದಲು ಒಂದು ಹಾಡು ಮಾಡುವುದೆಂದು ಯೋಜನೆ ಹಾಕಲಾಗಿತ್ತು. ಮುಂದೆ ಅದು ಐದಕ್ಕೆ ಮುಂದುವರಿಯಿತು. ಈಗ ಇದ®್ನæೕ ಸಿನಿಮಾ ಮಾಡುವ ನಿಟ್ಟಿನಲ್ಲಿಕಾರ್ಯ ನಿರ್ವಹಿಸುತ್ತಿದ್ದು, ಮೂರು ತಿಂಗಳಲ್ಲಿಸೆಟ್ಟೇರಲಿದೆ’ ಎಂದಿದ್ದಾರೆ ನಿರ್ದೇಶಕ ವಿನ್ಸೆಂಟ್ ಫರ್ನಾಂಡಿಸ್ ಕಾಸ್ಸಿಯಾ.