‘ರಕ್ಕಿ’ಯ ಎನರ್ಜಿಟಿಕ್ ಸಾಂಗ್ ಲಾಂಚ್

Contributed byKiran Mr. Kumar|Vijaya Karnataka

ರಕ್ಕಿ ಚಿತ್ರದ ಮೊದಲ ಹಾಡು 'ರಗಡೋ ರಕ್ಕಿ' ಬಿಡುಗಡೆಯಾಗಿದೆ. ಈ ಹಾಡು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ನಾಯಕ ರಕ್ಕಿ ಸುರೇಶ್‌ ಅವರ ಸ್ಟೈಲಿಶ್‌ ಲುಕ್‌ ಗಮನ ಸೆಳೆಯುತ್ತಿದೆ. ಜೆನ್‌ ಜೀ ಸಂಸ್ಕ್ಕೃತಿಯನ್ನು ಪ್ರತಿಬಿಂಬಿಸುವ ಹಾಡು ಟ್ರೆಂಡಿ ಬೀಟ್ಸ್‌ ಹೊಂದಿದೆ. ಲೋಕಿ ತವಸ್ಯ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ. ಕಂಬಿರಾಜು ನೃತ್ಯ ಸಂಯೋಜನೆ ಮಾಡಿದ್ದಾರೆ. ವೆಂಕಟ್‌ ಭಾರದ್ವಾಜ್‌ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರ ಸೆನ್ಸಾರ್‌ ಹಂತದಲ್ಲಿದೆ.

rakki movies energetic song ragado rakki is being released

ರಕ್ಕಿ ಚಿತ್ರದ ಮೊದಲ ಹಾಡು ‘ರಗಡೋ ರಕ್ಕಿ’ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಈ ಚಿತ್ರದ ಮೂಲಕ ನಾಯಕರಾಗಿರುವ

ರಕ್ಕಿ ಸುರೇಶ್ ಈ ಹಾಡಿನಲ್ಲಿ ಸ್ಟೈಲಿಶ್ ಲುಕ್ ಹಾಗೂ ಡಾಸ್ಸ್ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಜೆನ್ ಜೀ ಸಂಸ್ಕ್ಕೃತಿಯನ್ನು ಪ್ರತಿಬಿಂಬಿಸುವ ಈ ಹಾಡು ಟ್ರೆಂಡಿ ಬೀಟ್ಸ್ , ಯೂತ್ ಫುಲ್ ಎನರ್ಜಿ ಮತ್ತು ಸ್ಟೈಲಿಶ್ ಮೇಕಿಂಗ್ ನಿಂದ ಗಮನ ಸೆಳೆಯುತ್ತಿದೆ.

ಈ ಹಾಡಿಗೆ ಲೋಕಿ ತವಸ್ಯ ಸಂಗೀತ ಮತ್ತು ಸಾಹಿತ್ಯವನ್ನು ನೀಡಿದ್ದಾರೆ. ಕಂಬಿರಾಜು ನೃತ್ಯ ಸಂಯೋಜನೆ ಮಾಡಿದ್ದಾರೆ. ವೆಂಕಟ್ ಭಾರದ್ವಾಜ್ ಅವರ ಕಥೆ, ಚಿತ್ರಕಥೆ ಮತ್ತು ನಿರ್ದೇಶನದಲ್ಲಿಮೂಡಿಬಂದಿರುವ ‘ರಕ್ಕಿ‘ ಚಿತ್ರವು ಸದ್ಯ ಸೆನ್ಸಾರ್ ಹಂತದಲ್ಲಿಇದæ. ಪಲ್ಲವಿ ಮಂಜುನಾಥ್ , ಆಶಿಕಾ ಸೋಮಶೇಖರ್ , ಬಿ. ಸುರೇಶ್ , ರಮೇಶ್ ಪಂಡಿತ್ , ಹರಿಣಿ ಶ್ರೀಕಾಂತ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.