ಫ್ಲಾಪ್ ಚಿತ್ರ (ಸ್ಲಗ್ )
ಬಿಗ್ ಬಜೆಟ್ ಬಾಲಿವುಡ್ ಸಿನಿಮಾಗಳ ಮಹಾಸೋಲು
ಇಂಟ್ರೊ
ಬೃಹತ್ ಬಜೆಟ್ , ಸ್ಟಾರ್ ನಟರ ದಂಡು, ಅದ್ಧೂರಿ ಪ್ರಚಾರವಿದ್ದರೆ ಸಿನಿಮಾ ಹಿಟ್ ಆಗುತ್ತದೆ ಎಂಬ ನಂಬಿಕೆ ಬಾಲಿವುಡ್ ನಲ್ಲಿಸುಳ್ಳಾಗಿದೆ. ಆಮೀರ್ ಖಾನ್ , ಶಾರುಖ್ ಖಾನ್ , ರಣಬೀರ್ ಕಪೂರ್ ರಂಥ ದೊಡ್ಡ ನಟರ ಚಿತ್ರಗಳೂ ಬಾP್ಸ…ಆಫೀಸ್ ನಲ್ಲಿಮಕಾಡೆ ಮಲಗಿವೆ. ಪ್ರೇಕ್ಷಕರನ್ನು ಸೆಳೆಯುವ ಕಥೆಯೂ ಇರಬೇಕು ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿಯಾಗಿವೆ.
ಲವಲವಿಕೆ ಸುದ್ದಿಲೋಕ
ನಟ ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ ಇತ್ತೀಚಿನ ‘ಏಕ್ ದಿನ್ ’ ಸಿನಿಮಾ ಬಾಲಿವುಡ್ ನಲ್ಲಿದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದರೂ, ಬಾP್ಸ…ಆಫೀಸ್ ಗಳಿಕೆಯಲ್ಲಿನಿರೀಕ್ಷಿತ ಯಶಸ್ಸು ಕಾಣುವಲ್ಲಿವಿಫಲವಾಗಿದೆ. ತಮಿಳಿನ ‘ಲವ್ ಟುಡೇ’ ಚಿತ್ರದ ಹಿಂದಿ ರಿಮೇಕ್ ಆಗಿರುವ ಈ ಸಿನಿಮಾ ನಾಯಕ ನಟ ಜುನೈದ್ ಖಾನ್ ಗೆ ಬಹುಮುಖ್ಯವಾಗಿತ್ತು. ದಕ್ಷಿಣ ಭಾರತದಲ್ಲಿಭರ್ಜರಿ ಯಶಸ್ಸು ಕಂಡಿದ್ದ ಕಥೆಯನ್ನು ಬಾಲಿವುಡ್ ಪ್ರೇಕ್ಷಕರಿಗೆ ತಲುಪಿಸುವ ಜವಾಬ್ದಾರಿ ಈ ಚಿತ್ರತಂಡದ ಮೇಲಿತ್ತು. ಆದರೆ ‘ಏಕ್ ದಿನ್ ’ ಬಿಡುಗಡೆಯಾದ ಮೊದಲ ವಾರದಲ್ಲೇ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಸುಮಾರು 15 ಕೋಟಿ ರೂ. ಬಜೆಟ್ ನ ಈ ಸಿನಿಮಾ ಕೇವಲ 5.44 ಕೋಟಿ ರೂ. ಗಳಿಸಲಷ್ಟೇ ಶಕ್ತವಾಯಿತು. ಈ ರೀತಿ ಬಾಲಿವುಡ್ ನಲ್ಲಿಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾಗಳು ಫ್ಲಾಪ್ ಆಗಿರುವ ಉದಾಹರಣೆಗಳು ಸಾಕಷ್ಟಿವೆ.
ಆದಿಪುರುಷ್ -600 ಕೋಟಿ ರೂ. ಬಜೆಟ್
ಪೌರಾಣಿಕ ಹಿನ್ನೆಲೆಯ ಸಿನಿಮಾಗಳ ಶೈಲಿಯನ್ನೇ ಬದಲಿಸುವ ಭರವಸೆಯೊಂದಿಗೆ ಬಂದ ‘ಆದಿಪುರುಷ್ ’ ಸಿನಿಮಾ ಬಾP್ಸ…ಆಫೀಸ್ ನಲ್ಲಿಅತಿ ದೊಡ್ಡ ಮಟ್ಟದ ಹಿನ್ನಡೆ ಅನುಭವಿಸಿತು. ಇದರ ಬಹುಪಾಲು ಬಜೆಟ್ ಅನ್ನು ಗ್ರಾಫಿP್ಸ… ಮತ್ತು ವಿಎಫ್ ಎP್ಸ… ಮೇಲೆ ವಿನಿಯೋಗಿಸಲಾಗಿತ್ತು. ಆದರೆ ತೆರೆಯ ಮೇಲೆ ಇದರ ದೃಶ್ಯಗಳು ಅಪೂರ್ಣ ಮತ್ತು ಕಾರ್ಟೂನ್ ನಂತೆ ಕಂಡಿದ್ದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಯಿತು. ರಾಮಾಯಣದಂತಹ ಮಹಾಕಾವ್ಯದ ಪಾತ್ರಗಳಿಗೆ ಬಳಸಲಾದ ಆಡುಭಾಷೆ ಮತ್ತು ಕೆಲವು ಸಂಭಾಷಣೆಗಳು ಜನರ ಭಾವನೆಗಳಿಗೆ ಧಕ್ಕೆ ತಂದವು.
ಥW್ಸ… ಆಫ್ ಹಿಂದೂಸ್ತಾನ್ -300 ಕೋಟಿ ರೂ. ಬಜೆಟ್
ಆಮೀರ್ ಖಾನ್ ಮತ್ತು ಅಮಿತಾಭ್ ಬಚ್ಚನ್ ಜತೆಯಾಗಿದ್ದ ‘ಥW್ಸ… ಆಫ್ ಹಿಂದೂಸ್ತಾನ್ ’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಇದರ ಕಳಪೆ ಕಥೆ ಮತ್ತು ‘ಪೈರೇಟ್ಸ್ ಆಫ್ ದಿ ಕೆರಿಬಿಯನ್ ’ ಚಿತ್ರದ ಅಂಧಾನುಕರಣೆ ಪ್ರೇಕ್ಷಕರಿಗೆ ಹಿಡಿಸಲಿಲ್ಲ. ಇದಕ್ಕೆ ದಾಖಲೆ ಮಟ್ಟದ ಓಪನಿಂಗ್ ಸಿಕ್ಕರೂ ಚಿತ್ರದ ಕಥೆ ಮತ್ತು ನಿರೂಪಣೆ ಪ್ರೇಕ್ಷಕರನ್ನು ಹಿಡಿದಿಡಲು ವಿಫಲವಾಯಿತು. ಈ ಚಿತ್ರದ ಕಥೆಯಲ್ಲಿಯಾವುದೇ ಹೊಸತನವಿರಲಿಲ್ಲಮತ್ತು ಪ್ರೇಕ್ಷಕರಿಗೆ ಆ ಕಥೆ ತಲೆಬುಡವಿಲ್ಲದಂತೆ ಭಾಸವಾಯಿತು.
ಲಾಲ್ ಸಿಂಗ್ ಚಡ್ಡಾ-180 ಕೋಟಿ ರೂ. ಬಜೆಟ್
ಹಾಲಿವುಡ್ ನ ಕ್ಲಾಸಿಕ್ ಚಿತ್ರ ‘ಫಾರೆಸ್ವ್ ಗಂಪ್ ’ನ ಅಧಿಧಿಕೃತ ಹಿಂದಿ ರಿಮೇಕ್ ಆಗಿದ್ದ ‘ಲಾಲ್ ಸಿಂಗ್ ಚಡ್ಡಾ’ ಕೂಡ ಸೂಪರ್ ಫ್ಲಾಪ್ . ಇದರ ಮೂಲ ಚಿತ್ರ ನೋಡಿದವರಿಗೆ ಈ ಸಿನಿಮಾದಲ್ಲಿಅದರಲ್ಲಿದ್ದ ಭಾವನಾತ್ಮಕ ತೂಕ ಕಾಣಿಸಲಿಲ್ಲ. ಇದರಲ್ಲಿಭಾರತೀಯ ಇತಿಹಾಸದೊಂದಿಗೆ ಕಥೆ ಬೆಸೆಯುವ ಪ್ರಯತ್ನ ನಡೆದರೂ ಅಷ್ಟು ಪರಿಣಾಮಕಾರಿಯಾಗಲಿಲ್ಲ. ಈ ಚಿತ್ರ ಬಿಡುಗಡೆಗೂ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿಬಾಯ್ಕಾಟ್ ಲಾಲ್ ಸಿಂಗ್ ಚಡ್ಡಾ ಟ್ರೆಂಡ್ ದೊಡ್ಡ ಮಟ್ಟದಲ್ಲಿಸದ್ದು ಮಾಡಿತ್ತು. ಆಮೀರ್ ಖಾನ್ ಅವರ ಕೆಲವು ಹಳೆಯ ಹೇಳಿಕೆಗಳು ಈ ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು. ಕೋವಿಡ್ ಕಾಲದಲ್ಲಿಈ ಚಿತ್ರದ ಬಿಡುಗಡೆ ಹಲವು ಬಾರಿ ಮುಂದೂಡಲ್ಪಟ್ಟಿತು. ಇದರಿಂದ ಜನರಿಗೆ ಆ ಚಿತ್ರದ ಮೇಲಿದ್ದ ಕುತೂಹಲ ಕ್ರಮೇಣ ಕಡಿಮೆಯಾಯಿತು.
ಝೀರೊ-200 ಕೋಟಿ ರೂ. ಬಜೆಟ್
ನಟ ಶಾರುಖ್ ಖಾನ್ ‘ಝೀರೊ’ ಚಿತ್ರದಲ್ಲಿಈ ಹಿಂದೆಂದೂ ಮಾಡದ ಬೌವ ಸಿಂಗ್ ಎಂಬ ಕುಬ್ಜ ವ್ಯಕ್ತಿಯ ಪಾತ್ರ ನಿರ್ವಹಿಸಿದ್ದರು. ಅದ್ಧೂರಿ ಮೇಕಿಂಗ್ ಹೊರತಾಗಿಯೂ ಈ ಚಿತ್ರ ಪ್ರೇಕ್ಷಕರನ್ನು ತಲುಪಲು ವಿಫಲವಾಯಿತು. ಇದರ ಮೊದಲರ್ಧ ವಿಭಿನ್ನ ಮತ್ತು ಕುತೂಹಲಕಾರಿಯಾಗಿತ್ತು. ಆದರೆ ದ್ವಿತೀಯಾರ್ಧದಲ್ಲಿಕಥೆಯು ಹಾದಿ ತಪ್ಪಿ ವಿಜ್ಞಾನ ಮತ್ತು ಪ್ರೇಮಕಥೆಯ ನಡುವೆ ಸಿಲುಕಿ ಪ್ರೇಕ್ಷಕರಿಗೆ ಗೊಂದಲವುಂಟುಮಾಡಿತು. ಒಬ್ಬ ಕುಬ್ಜ ಬಾಹ್ಯಾಕಾಶಕ್ಕೆ ಹೋಗುವ ಕ್ಲೈಮ್ಯಾP್ಸ… ದೃಶ್ಯಗಳು ಸಾಮಾನ್ಯ ಪ್ರೇಕ್ಷಕರಿಗೆ ಅತಿರಂಜಿತವಾಗಿ ಕಂಡವು ಮತ್ತು ಅವು ವಾಸ್ತವಕ್ಕೆ ದೂರವಾಗಿದ್ದವು. ಕತ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮರಂತಹ ಘಟಾನುಘಟಿ ನಟಿಯರಿದ್ದರೂ ಇದರ ಚಿತ್ರಕಥೆಯಲ್ಲಿನ ನ್ಯೂನತೆಗಳಿಂದಾಗಿ ಅವರ ಅಭಿನಯವೂ ಈ ಚಿತ್ರವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಶಂಶೇರಾ-150 ಕೋಟಿ ರೂ. ಬಜೆಟ್
ರಣಬೀರ್ ಕಪೂರ್ ದ್ವಿಪಾತ್ರದಲ್ಲಿನಟಿಸಿದ ಮತ್ತು ಭರ್ಜರಿ ಪ್ರಚಾರ ಪಡೆದ ‘ಶಂಶೇರಾ’ ಸಿನಿಮಾ ಬಾP್ಸ…ಆಫೀಸ್ ನಲ್ಲಿನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಇದರ ಕಥೆ ತುಂಬಾ ಹಳೆಯ ಕಾಲದ್ದಾಗಿದ್ದು, ನವೀನತೆಯ ಕೊರತೆ ಎದ್ದುಕಾಣುತ್ತಿತ್ತು. ಈ ಕಾರಣ ಪ್ರೇಕ್ಷಕರಿಗೆ ಇದು ನೀರಸವೆನಿಸಿತು. ಇದರ ಮೇಕಿಂಗ್ ಮತ್ತು ಶೈಲಿಯು ಕನ್ನಡದ ಖ್ಯಾತ ಸಿನಿಮಾ ‘ಕೆಜಿಎಫ್ ’ಅನ್ನು ಅನುಕರಿಸಲು ಹೋಗಿ ವಿಫಲವಾದಂತೆ ಕಂಡುಬಂದಿತು. ತನ್ನದೇ ಆದ ವಿಶಿಷ್ಟತೆ ಸೃಷ್ಟಿಸುವ ಬದಲು ಬೇರೆ ಚಿತ್ರದ ನೆರಳಿನಲ್ಲಿನಿಂತಂತೆ ಭಾಸವಾಗಿತ್ತು ಈ ಸಿನಿಮಾ.
ಸಾಮ್ರಾಟ್ ಪೃಥ್ವಿರಾಜ್ -200 ಕೋಟಿ ರೂ. ಬಜೆಟ್
ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್ ’ ಚಿತ್ರ ಬಾP್ಸ…ಆಫೀಸ್ ನಲ್ಲಿದೊಡ್ಡ ಮಟ್ಟದ ಸೋಲು ಕಂಡಿತು. ಅದರಲ್ಲಿದ್ದ ಕೆಲವು ಐತಿಹಾಸಿಕ ತಪ್ಪುಗಳ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾದವು. ಇತಿಹಾಸವನ್ನು ಸರಿಯಾಗಿ ಬಿಂಬಿಸಿಲ್ಲಎಂಬ ಕಾರಣಕ್ಕೆ ಈ ಸಿನಿಮಾ ವಿವಾದಕ್ಕೊಳಗಾಯಿತು. ಕೇವಲ ಅದ್ಧೂರಿ ಸೆಟ್ ಗಳು ಮತ್ತು ದುಬಾರಿ ಕಾಸ್ಟ್ಯೂಮ್ ಗಳ ಮೇಲೆ ಹೂಡಿಕೆ ಮಾಡಿದ ಚಿತ್ರತಂಡ ಬಲವಾದ ಚಿತ್ರಕಥೆ ರೂಪಿಸುವಲ್ಲಿಸೋತಿತು. ಈ ಸಿನಿಮಾದಲ್ಲಿಇರಬೇಕಾಗಿದ್ದ ವೇಗ ಮತ್ತು ಭಾವನಾತ್ಮಕ ಸೆಳೆತ ಕಾಣೆಯಾಗಿತ್ತು. ದೊಡ್ಡ ಮಟ್ಟದ ಪ್ರಚಾರದ ಹೊರತಾಗಿಯೂ ಪ್ರೇಕ್ಷಕರು ಈ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರಲು ಆಸಕ್ತಿ ತೋರಲಿಲ್ಲ.
ಬಾಂಬೆ ವೆಲ್ವೆಟ್ -120 ಕೋಟಿ ರೂ. ಬಜೆಟ್
ನಿರ್ದೇಶಕ ಅನುರಾಗ್ ಕಶ್ಯಪ್ ‘ಬಾಂಬೆ ವೆಲ್ವೆಟ್ ’ ಸಿನಿಮಾದಲ್ಲಿ1960ರ ದಶಕದ ಮುಂಬಯಿ ನಗರವನ್ನು ಮರುಸೃಷ್ಟಿಸಲು ಭಾರಿ ಶ್ರಮ ವಹಿಸಿದ್ದರು. ಜಾಝ್ ಸಂಗೀತ ಮತ್ತು ಅದ್ಧೂರಿ ಸೆಟ್ ಗಳ ಮೂಲಕ ಈ ಚಿತ್ರವನ್ನು ಕಲಾತ್ಮಕವಾಗಿ ರೂಪಿಸಲು ಪ್ರಯತ್ನಿಸಿದ್ದರು. ಆದರೆ ಕೇವಲ ದೃಶ್ಯ ವೈಭವಕ್ಕೆ ನೀಡಿದ ಪ್ರಾಮುಖ್ಯತೆಯನ್ನು ಕಥೆಗೆ ನೀಡದ ಕಾರಣ ಈ ಸಿನಿಮಾ ಸೋತಿತು. ಇದರ ಕಥೆಯು ತುಂಬಾ ಗೊಂದಲದಿಂದ ಕೂಡಿದ್ದು, ಪ್ರೇಕ್ಷಕರಿಗೂ ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಯಿತು. ಅಸ್ತವ್ಯಸ್ತವಾಗಿದ್ದ ಚಿತ್ರಕಥೆ ಮತ್ತು ನಿಧಾನಗತಿಯ ನಿರೂಪಣೆ ನೋಡುಗರನ್ನು ಚಿತ್ರಮಂದಿರದಿಂದ ಹೊರನಡೆಯುವಂತೆ ಮಾಡಿತು. ಇದರಲ್ಲಿರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಶ್ರಮಿಸಿದರೂ ಚಿತ್ರದ ಒಟ್ಟು ನೀರಸ ಶೈಲಿಯಿಂದಾಗಿ ಅವರ ಅಭಿನಯವೂ ಗಮನ ಸೆಳೆಯಲಿಲ್ಲ.

