ಗಿಲ್ಲಿನಟನ ‘ಸರ್ವೇ ನಂಬರ್ 45’

Contributed byKiran Mr. Kumar|Vijaya Karnataka

ಗಿಲ್ಲಿನಟ ಅಭಿನಯದ 'ಸರ್ವೇ ನಂಬರ್‌45' ಸಿನಿಮಾ ರೈತರ ಕಷ್ಟಗಳ ಕಥೆಯನ್ನು ಹೇಳುತ್ತದೆ. ಸರ್ಕಾರ ನೀಡುವ ಸರ್ವೇ ನಂಬರ್‌ನಿಂದ ಉಂಟಾಗುವ ಸಮಸ್ಯೆಗಳನ್ನು ರೈತ ಹೇಗೆ ಎದುರಿಸುತ್ತಾನೆ ಎಂಬುದೇ ಚಿತ್ರದ ಕಥಾವಸ್ತು. ಒಳ್ಳೆಯತನದಿಂದ ಸಮಸ್ಯೆ ಬಗೆಹರಿಸುವ ಮಾರ್ಗವನ್ನು ಸಿನಿಮಾ ತೋರಿಸುತ್ತದೆ. ಕೆಟ್ಟತನದ ಪರಿಣಾಮಗಳನ್ನು ಎಚ್ಚರಿಸುವ ಸಂದೇಶ ಚಿತ್ರದಲ್ಲಿದೆ. ಶಿವಕುಮಾರ್‌ಎಂ. ಶೆಟ್ಟಿಹಳ್ಳಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

villans survey number 45 a tale of farmers struggles and solutions

ರೈತರು ತಮ್ಮ ಜಮೀನಿನಲ್ಲಿಕೃಷಿ ಮಾಡುವ ಜಾಗಕ್ಕೆ ಸರಕಾರ ಸರ್ವೇ ನಂಬರ್ ನೀಡಿರುತ್ತದೆ. ಈ ಸರ್ವೇ ನಂಬರ್ ನಿಂದ ರೈತನೊಬ್ಬನಿಗೆ ಆಗುವ ಕಷ್ಟಕೋಟಲೆಗಳನ್ನಿಟ್ಟುಕೊಂಡು ಮಾಡಿರುವ ಸಿನಿಮಾವೇ ‘ಸರ್ವೇ ನಂಬರ್ 45’. ಇದರಿಂದ ಎದುರಾಗುವ ಸಮಸ್ಯೆಗಳು ಮತ್ತು ಅದನ್ನು ರೈತನು ಚಾಣಾಕ್ಷತನದಿಂದ, ಒಳ್ಳೆಯತನದಲ್ಲಿಹೇಗೆ ಬಗೆಹರಿಸಿಕೊಳ್ಳುತ್ತಾನೆ ಎಂಬುದೇ ಸಿನಿಮಾದ ಕಥೆ. ಆದರೆ, ಕೆಟ್ಟದ್ದನ್ನು ಮಾಡಲು ಮುಂದಾದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ ಎನ್ನುವುದೇ ಸಿನಿಮಾದ ಟ್ವಿಸ್ವ್ .

‘ನಾವು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ತದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ’ ಎಂಬ ಸಂದೇಶವಿರುವ ಈ ಸಿನಿಮಾವನ್ನು ಶಿವಕುಮಾರ್ ಎಂ. ಶೆಟ್ಟಿಹಳ್ಳಿ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಹಾಗೂ ಎರಡು ಹಾಡುಗಳನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಗಿಲ್ಲಿನಟ, ಸಂತೋಷ್ , ಪ್ರಾವಲಿಕ ಮತ್ತು ಮೌನಹಾಸನ್ ನಟಿಸಿದ್ದಾರೆ. ಚಿತ್ರಕ್ಕೆ ವಿಶಾಲ್ ಅಲಾಪ್ ಸಂಗೀತ ನೀಡಿದ್ದು, ದೀಪಕ್ ಕುಮಾರ್ ಜಿ.ಕೆ. ಛಾಯಾಗ್ರಹಣ, ರಾಮಾರ್ಜುನ್ ಅವರ ಸಂಕಲನ, ಚಕ್ರಿ ಕಿರಿಸಾವೆ ಅವರ ಸಂಭಾಷಣೆ ಹಾಗೂ ರಘು ಆರ್ .ಜೆ. ನೃತ್ಯ ನಿರ್ದೇಶನವಿದೆ. ಮೈಸೂರಿನ ಹುಣಸೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.