ಹೊಸದಿಲ್ಲಿ: ಇತ್ತೀಚೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಯುವಕರನ್ನು ‘ಜಿರಳೆ’ಗಳಿಗೆ ಹೋಲಿಸಿದ್ದ ಸಂಗತಿಯು ಸಾಮಾಜಿಕ ಮಾಧ್ಯಮದಲ್ಲಿಸಂಚಲನ ಮೂಡಿಸಿದೆ. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿಮೀಮ್ಸ್ , ಟ್ರೋಲಿಂಗ್ ಗಳ ಅಬ್ಬರ ಜೋರಾಗಿದೆ. ಈ ಚರ್ಚೆಯ ನಡುವೆ ಯುವಕರಿಂದ ಸಾಮಾಜಿಕ ಮಾಧ್ಯಮದಲ್ಲಿಶುರುವಾದ ‘ಕಾಕ್ರೋಚ್ ಜನತಾ ಪಾರ್ಟಿ’ ಹ್ಯಾಂಡಲ್ ಈಗ ಟ್ರೆಂಡ್ ಆಗಿದೆ.
ಇದು ಪ್ರಾರಂಭವಾದ ಕೇವಲ ಗಂಟೆಗಳಲ್ಲಿಲಕ್ಷಾಂತರ ಜನರು ಫಾಲೋ ಮಾಡುತ್ತಿದ್ದಾರೆ. ಈಗ ಇನ್ ಸ್ಟಾಗ್ರಾಮ್ ನಲ್ಲಿ5 ಮಿಲಿಯನ್ ಗಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿಯ ‘ಎಕ್ಸ್ ’ನಲ್ಲೂಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಪಕ್ಷದ ವೆಬ್ ಸೈಟ್ ನಲ್ಲಿ200,000ಕ್ಕಿಂತ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.

