ಕೋಲ್ಕೊತಾ: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿ ಮನೋಜ್ ಅಗರ್ವಾಲ್ ಮತ್ತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮುಖ್ಯ ಸಲಹೆಗಾರರಾಗಿ ಸುಬ್ರತಾ ಗುಪ್ತಾ ನೇಮಕ ಮಾಡಿರುವ ರಾಜ್ಯ ಸರಕಾರದ ಕ್ರಮ ಬಿಜೆಪಿ-ಚುನಾವಣಾ ಆಯೋಗದ ಮಧ್ಯೆಯ ಲಜ್ಜೆಗೆಟ್ಟ ಮೈತ್ರಿಯ ಸಂಕೇತವಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ರಾಜ್ಯ ಸರಕಾರದ ನೇಮಕಾತಿ ಬಿಜೆಪಿ-ಚುನಾವಣಾ ಆಯೋಗದ ನಡುವಿನ ಒಳ ಒಪ್ಪಂದದ ಸಂಕೇತವಾಗಿದೆ. ಲಜ್ಜೆಗೆಟ್ಟ ಹೊಂದಾಣಿಕೆಯ ಪ್ರತಿಬಿಂಬಿವಾಗಿದೆ ಎಂದು ಕಾಂಗ್ರೆಸ್ , ಟಿಎಂಸಿ ವಾಗ್ದಾಳಿ ನಡೆÜಸಿವೆ.
‘‘ರಾಜ್ಯದಲ್ಲಿಎಸ್ ಐಆರ್ ಪ್ರಕ್ರಿಯೆಯ ಹೊಣೆ ಹೊತ್ತ ಅಧಿಕಾರಿಗಳಿಗೆ ಚುನಾವಣೆ ಗೆಲ್ಲುತ್ತಿದ್ದಂತೆ ಬಿಜೆಪಿ ಉಡುಗೊರೆ ನೀಡಿದೆ. ಬಿಜೆಪಿ ಗೆಲ್ಲಲು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಅಧಿಕಾರಿಗಳನ್ನು ಮುಖ್ಯ ಕಾರ್ಯದರ್ಶಿಯಾಗಿ, ಮುಖ್ಯಮಂತ್ರಿಗಳ ಸಲಹೆಗಾರರಾಗಿ ನೇಮಿಸಿರುವುದು ‘ಚೋರ್ ಬಜಾರ್ ’ನಲ್ಲಿಕಳ್ಳತನ ದೊಡ್ಡದಾದಷ್ಟೂ ಬಹುಮಾನವೂ ದೊಡ್ಡದಾಗಿರುತ್ತದೆ ಎಂಬುದನ್ನು ಸೂಚಿಸಿತ್ತದೆ,’’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ನಡೆಸಿದ್ದಾರೆ.
ಅಗರ್ವಾಲ್ , ಸುಬ್ರತಾ ಗುಪ್ತ ನೇಮಕ ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕೆಲಸ ಮಾಡಿಲ್ಲ. ಬಿಜೆಪಿಗೆ ಅನುಕೂಲ ಮಾಡಿಕೊಡಲು ವಿಶೇಷವಾಗಿ ಶ್ರಮಿಸಿದೆ ಎಂಬುದಕ್ಕೆ ಪುರಾವೆಯಾಗಿದೆ. ನೇಮಕಾತಿಯು ಚುನಾವಣಾ ಆಯೋಗ ಮತ್ತು ಬಿಜೆಪಿ ನಡುವಿನ ಲಜ್ಜೆಗೆಟ್ಟ ಒಪ್ಪಂದ, ಚುನಾವಣೆಯಲ್ಲಿಪ್ರತಿಪಕ್ಷಗಳ ವಿರುದ್ಧ ದೊಡ್ಡ ಪಿತೂರಿ ರೂಪಿಸಿದ ಸಂಕೇತವಾಗಿದೆ,’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಕಿಡಿಕಾರಿದ್ದಾರೆ.

