ವಿದ್ಯಾನಿಧಿ ಕಾಲೇಜಿನಲ್ಲಿಸಿಇಟಿ ಓರಿಯೆಂಟೇಷÜನ್ ವಿದ್ಯಾನಿಧಿ ಕಾಲೇಜಿನಲ್ಲಿಸಿಇಟಿ ಓರಿಯೆಂಟೇ?Üನ್ ವಿಕ ಸುದ್ದಿಲೊ

Contributed bymadhugirinews@gmail.com|Vijaya Karnataka

ತುಮಕೂರಿನ ವಿದ್ಯಾನಿಧಿ ಕಾಲೇಜಿನಲ್ಲಿ ಕೆ-ಸಿಇಟಿ ಮತ್ತು ಕಾಮೆಡ್‌-ಕೆ ಓರಿಯೆಂಟೇಷನ್‌ ಕಾರ್ಯಕ್ರಮ ನಡೆಯಿತು. ಸ್ಪರ್ಧಾತ್ಮಕ ಯುಗದಲ್ಲಿ ಸಿಇಟಿ ಪರೀಕ್ಷೆಯ ಮಹತ್ವವನ್ನು ಎನ್‌.ಬಿ. ಪ್ರದೀಪ್‌ ಕುಮಾರ್‌ ತಿಳಿಸಿದರು. ಪತ್ರಿಕೆಗಳು ವಿದ್ಯಾರ್ಥಿಗಳಿಗೆ ಸಿಇಟಿ ಕುರಿತು ಸರಿಯಾದ ಮಾಹಿತಿ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ರವೀಂದ್ರಭಟ್ಟ ಐನಕೈ ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಎಸ್‌. ಕುಮಾರ್‌, ಪಿಜೆ ಜಯಶೀಲ, ಡಾ. ಪ್ರಸನ್ನಕುಮಾರ್‌ ಹಾಜರಿದ್ದರು.

cet orientation program at vidyanidhi college guiding students to shape their future

ವಿದ್ಯಾನಿಧಿ ಕಾಲೇಜಿನಲ್ಲಿಸಿಇಟಿ ಓರಿಯೆಂಟೇಷÜನ್

ವಿಕ ಸುದ್ದಿಲೋಕ ತುಮಕೂರು: ಸ್ಪರ್ಧಾತ್ಮಕ ಯುಗದಲ್ಲಿಸಿಇಟಿ ಪರೀಕ್ಷೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಮೆಟ್ಟಿಲಾಗಿದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್ .ಬಿ. ಪ್ರದೀಪ್ ಕುಮಾರ್ ತಿಳಿಸಿದರು.

ನಗರದ ವಿದ್ಯಾನಿಧಿ ಕಾಲೇಜಿನಲ್ಲಿಆಯೋಜಿಸಿದ್ದ ಕೆ-ಸಿಇಟಿ, ಕಾಮೆಡ್ -ಕೆ ಓರಿಯೆಂಟೇಷÜನ್ ಕಾರ್ಯಕ್ರಮದಲ್ಲಿಮಾತನಾಡಿದ ಅವರು ಕಾಲೇಜು ಮತ್ತು ಕೋರ್ಸ್ ನ ಆಯ್ಕೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಪ್ರೇರಣೆ ಹಾಗೂ ದಿಕ್ಸೂಚಿಯ ಅಗತ್ಯವಿರುತ್ತದೆ. ಮಕ್ಕಳು ಸ್ಪಷ್ಟ ನಿಲುವಿನಿಂದ ಸೂಕ್ತ ವಿಷಯಗಳನ್ನು ಆಯ್ಕೆ ಮಾಡಿದರೆ ಭವಿಷ್ಯ್ಯ ದೃಢÜವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಸಾಕಾರಗೊಳಿಸಿ, ಉತ್ತಮ ಭವಿಷ್ಯ ನಿರ್ಮಿಸಲಿ ಎಂದು ತಿಳಿಸಿದರು.

ಪತ್ರಕರ್ತ ರವೀಂದ್ರಭಟ್ಟ ಐನಕೈ ಮಾತನಾಡಿ, ಇಂದಿನ ಶಿಕ್ಷಣ ಕ್ಷೇತ್ರದಲ್ಲಿವಿದ್ಯಾರ್ಥಿಗಳಿಗೆ ಸಿಇಟಿ ಕುರಿತು ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡುವಲ್ಲಿಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಸಿಇಟಿ ಪರೀಕ್ಷೆಯ ವೇಳಾಪಟ್ಟಿ, ಪಠ್ಯಕ್ರಮ, ತಜ್ಞರಸಲಹೆಗಳು, ಮಾದರಿ ಪ್ರಶ್ನೆಪತ್ರಿಕೆಗಳು, ಯಶಸ್ವಿ ವಿದ್ಯಾರ್ಥಿಗಳ ಅನುಭವಗಳು ಮತ್ತು ವೃತ್ತಿ ಆಯ್ಕೆಗಳ ಬಗ್ಗೆ ಪತ್ರಿಕೆಗಳು ನಿರಂತರವಾಗಿ ಮಾಹಿತಿ ನೀಡುತ್ತವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಇವು ಬಹಳ ಉಪಯುಕ್ತವಾಗಿವೆ. ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದರ ಜತೆಗೆ ಆತ್ಮವಿಶ್ವಾಸ ಹೆಚ್ಚಿಸಲು ಪತ್ರಿಕೆಗಳು

ಸಹಕಾರಿಯಾಗುತ್ತವೆ. ಸರಿಯಾದ ಸಮಯದಲ್ಲಿಸರಿಯಾದ ಮಾಹಿತಿ ತಲುಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿಪತ್ರಿಕೆಗಳು ಮಹತ್ವದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು.

ಕಾಮೆಡ್ ಕೆ ಸಿಇಒ ಡಾ. ಎಸ್ . ಕುಮಾರ್ , ಮಾಜಿ ನೋಡಲ್ ಅಧಿಕಾರಿ ಪಿಜೆ ಜಯಶೀಲ, ಸಂಯೋಜಕ ಡಾ. ಪ್ರಸನ್ನಕುಮಾರ್ ಹಾಜರಿದ್ದರು.

ಫೋಟೋ 13ಕೆಜಿಎಚ್ 12

ತುಮಕೂರು ನಗರದ ವಿದ್ಯಾನಿಧಿ ಕಾಲೇಜಿನಲ್ಲಿಆಯೋಜಿಸಿದ್ದ ಕೆ-ಸಿಇಟಿ, ಕಾಮೆಡ್ -ಕೆ ಓರಿಯೆಂಟೇಷÜನ್

ಕಾರ್ಯಕ್ರಮ ನಡೆಯಿತು.