ರೈಟ್ ಗೆ

Contributed bybabitha.salian@timesgroup.com|Vijaya Karnataka

ಲವ್‌ ಮಾಕ್‌ಟೇಲ್‌ 3 ಸಿನಿಮಾದಲ್ಲಿ ಜಗ್ಗಾ ಮಮ್ಮಿ ಪಾತ್ರದಿಂದ ಪ್ರಸಿದ್ಧರಾದ ನಟ ಜಗದೀಶ್‌ ಈಗ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಶೂಟಿಂಗ್‌ ನೋಡುತ್ತಾ ಬೆಳೆದಿದ್ದ ಜಗದೀಶ್‌ಗೆ ಕೃಷ್ಣ ಅವಕಾಶ ನೀಡಿದ್ದರು. ಇದೀಗ 'ದೇವಿ' ಸಿನಿಮಾದಲ್ಲಿ ನಾಯಕನ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರಕ್ಕೆ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ಇದೆ.

jagga mamma actor gets new opportunity starts shooting for devi movie

ಶೂಟಿಂಗ್ ಮಡಿಲಲ್ಲಿಜಗ್ಗಾ ಮಮ್ಮಿ

ಇಂಟ್ರೊ

ಸೂಪರ್ ಹಿಟ್ ‘ಲವ್ ಮಾಕ್ ಟೇಲ್ 3’ ಸಿನಿಮಾ ಬಿಡುಗಡೆಯಾಗಿ 50 ದಿನಗಳು ಕಳೆದಿದ್ದರೂ ಅದರಲ್ಲಿರುವ ಜಗ್ಗಾ ಮಮ್ಮಿ ಪಾತ್ರ ಇವತ್ತಿಗೂ ಜನಮನದಲ್ಲಿಉಳಿದಿದೆ. ಈ ಪಾತ್ರ ಮಾಡಿರುವ ನಟ ಜಗದೀಶ್ ಈಗ ಹೊಸ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ.

ಮಲ್ವೀರ

ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ ಟೇಲ್ ’ ಸರಣಿಯ ಪ್ರತಿ ಸಿನಿಮಾದಲ್ಲಿಯೂ ಒಂದು ವಿಭಿನ್ನ ಪಾತ್ರ ಸೃಷ್ಟಿಸಿರುತ್ತಾರೆ. ತಮ್ಮ ಅಪ್ತ ವಲಯದಲ್ಲಿಇರುವವರಿಗೇ ಆ ಪಾತ್ರ ನೀಡಿ ಚಿತ್ರರಂಗಕ್ಕೆ ಕರೆತರುತ್ತಾರೆ. ಅಂಥದ್ದೇ ಪಾತ್ರ ಈ ಜಗ್ಗಾ ಮಮ್ಮಿ. ಇದರಲ್ಲಿನಟಿಸಿರುವ ಜಗದೀಶ್ ಅವರು ಕೃಷ್ಣರ ತಂದೆ ಮನೆಯಲ್ಲೇ ಸುಮಾರು ವರ್ಷಗಳಿಂದ ಕೆಲಸ ಮಾಡಿದವರು.

ಚಂದನವನಕ್ಕೆ ಸಿನಿಮಾ ಹಳ್ಳಿ ಅಥವಾ ಶೂಟಿಂಗ್ ಮಹದೇವಪುರ ಎಂದೂ ಪರಿಚಿತವಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿಹುಟ್ಟಿರುವ ನಟ ಜಗದೀಶ್ ಬಾಲ್ಯದಿಂದಲೇ ಸಿನಿಮಾ ಶೂಟಿಂಗ್ ನೋಡುತ್ತಾ ಬೆಳೆದವರು. ತಾವು ಸಿನಿಮಾಗೆ ಆಯ್ಕೆಯಾದ ಬಗ್ಗೆ ಲವಲವಿಕೆಗೆ ವಿವರಿಸಿರುವ ಅವರು, ‘ಜನರು ತೆರೆಯ ಮೇಲೆ ನೋಡುತ್ತಿದ್ದ ಕನ್ನಡದ ಸೂಪರ್ ಸ್ಟಾರ್ ಗಳನ್ನು ನಾನು ಚಿಕ್ಕ ವಯಸ್ಸಿನಿಂದಲೇ ಕಣ್ಣಾರೆ ಕಾಣುತ್ತಾ ಬೆಳೆದವನು. ‘ಲವ್ ಮಾಕ್ ಟೇಲ್ 3’ ಸಿನಿಮಾದ ಒಂದು ಪಾತ್ರಕ್ಕೆ ನಾನು ಸೂಕ್ತವೆನಿಸಿ ನಟಿ ಮಿಲನಾ ನಾಗರಾಜ್ ನನಗೆ ನಟಿಸಲು ಹೇಳಿದರು. ಇದಕ್ಕಾಗಿ ಅವರು ನನ್ನನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತಂದರೂ ಇಡೀ ಸಿನಿಮಾ ಶೂಟಿಂಗ್ ನಲ್ಲಿನಾನು ಡೈಲಾಗ್ ಬರೆಯುತ್ತಾ, ನನ್ನ ಪಾತ್ರವನ್ನು ಅಭ್ಯಾಸ ಮಾಡುತ್ತಾ ಅವರಿಗೆ ಎಲ್ಲಾವಿಧದಲ್ಲೂಸಹಾಯ ಮಾಡುತ್ತಾ ನಟನೆ ಹಾಗೂ ಸಿನಿಮಾ ಮೇಕಿಂಗ್ ಕಲಿತೆ. ನನ್ನ ಪಾತ್ರಕ್ಕೆ ಇಷ್ಟು ದೊಡ್ಡ ಯಶಸ್ಸು ಸಿಗುತ್ತದೆ ಎಂದು ನಾನು ಕೂಡ ನಿರೀಕ್ಷೆ ಮಾಡಿರಲಿಲ್ಲ. ಮೊದಲಿನಿಂದಲೂ ನಾನು ಶೂಟಿಂಗ್ ನೋಡುತ್ತಾ ಬೆಳೆದಿದ್ದರೂ ನಟಿಸಲು ಅವಕಾಶ ಸಿಗಬೇಕಲ್ಲ? ಯಾರೂ ನನ್ನ ನಟನೆ ಗುರುತಿಸಿರಲಿಲ್ಲ. ಈಗ ಕೃಷ್ಣರಿಂದ ಈ ಅವಕಾಶ ಸಿಕ್ಕಿದೆ’ ಎಂದಿದ್ದಾರೆ.

ಲವ್ ಮಾಕ್ ಟೇಲ್ 3 ಸಿನಿಮಾದಲ್ಲಿಜಗ್ಗಾ ಮಮ್ಮಿ ಪಾತ್ರಕ್ಕೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆಗಳಿಂದಾಗಿ ಜಗದೀಶ್ ಗೆ ಈಗ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೂ ಅವರು ಅದರಲ್ಲಿಸದ್ಯಕ್ಕೆ ಒಂದನ್ನು ಆಯ್ಕೆ ಮಾಡಿದ್ದಾರೆ. ಈ ಬಗ್ಗೆ ಅವರು, ‘ಇದೇ ಜೂನ್ ನಿಂದ ‘ದೇವಿ’ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಹೊಸ ಹೀರೊ ಚೇತನ್ ನಟನೆಯ ಎರಡನೇ ಸಿನಿಮಾವಾಗಿರುವ ಇದರಲ್ಲಿನನ್ನ ಪಾತ್ರ ವಿಭಿನ್ನವಾಗಿದೆ. ತಾಯಿ ಮಗನ ಭಾವನೆಗಳಿರುವ ಈ ಹಳ್ಳಿಕಥೆಯಲ್ಲಿನಾನು ನಾಯಕನ ಸ್ನೇಹಿತನಾಗಿದ್ದೇನೆ. ಹೀರೊಗಿಂತಲೂ ಹೆಚ್ಚು ಸ್ಕ್ರೀನ್ ಸ್ಪೇಸ್ ಇರುವ ಪಾತ್ರ ನನ್ನದು’ ಎಂದು ಹೇಳಿದ್ದಾರೆ.

ಕೋಟ್

ಡಾರ್ಲಿಂಗ್ ಕೃಷ್ಣರಿಗೆ ಇನ್ಮುಂದೆ ಅವರ ಯಾವುದೇ ಸಿನಿಮಾಗೂ ನಾನು ಸೂಕ್ತವೆಂದು ಅನಿಸಿದರೆ ಅವಕಾಶ ನೀಡುವಂತೆ ಕೇಳಿದ್ದೇನೆ. ಅವರೂ ಇದಕ್ಕೆ ಒಪ್ಪಿದ್ದಾರೆ. ಈಗ ನಮ್ಮ ಊರಿನಲ್ಲೂನನ್ನನ್ನು ಜಗ್ಗಾ ಮಮ್ಮಿ ಎಂದೇ ಕರೆಯುತ್ತಾರೆ.

ಜಗದೀಶ್ | ನಟ