ಹಾರರ್ ಚಿತ್ರದಿಂದ ಬಾಕ್ಸಾಫೀಸ್ ಲೂಟಿ
ಇಂಟ್ರೊ
ಹಾಲಿವುಡ್ ನ ಹಾರರ್ ಸಿನಿಮಾ ‘ಅಬ್ಸೆಷನ್ ’ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಈ ರೀತಿ ಕಡಿಮೆ ಬಜೆಟ್ ನಲ್ಲಿದೆವ್ವದ ಚಿತ್ರ ಮಾಡಿ ಬಾಕ್ಸಾಫೀಸ್ ನಲ್ಲಿಕೋಟ್ಯಂತರ ರೂಪಾಯಿ ದೋಚುವುದು ಸುಲಭ ಎನ್ನುವುದು ಹಾಲಿವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲೂಸಾಬೀತಾಗಿದೆ.
ಕಿರಣ್ ಚಂದ್ರ
ಅಮೆರಿಕದಲ್ಲಿಮೇ 10ರಂದು ತೆರೆಕಂಡ ಕರ್ರಿ ಬಾರ್ಕರ್ ನಿರ್ದೇಶನದಲ್ಲಿಕೇವಲ 7 ಕೋಟಿ ರೂ.ಗೆ ನಿರ್ಮಾಣವಾದ ‘ಅಬ್ಸೆಷನ್ ’ ಸಿನಿಮಾ ಈಗ ಜಗತ್ತಿನಾದ್ಯಂತ ಬರೋಬ್ಬರಿ 750 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೈಕಲ್ ಜಾನ್ಸ$್ಟನ್ , ಇಂಡೆ ನವರಟ್ಟೆ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರ ಶೀಘ್ರದಲ್ಲೇ ಸಾವಿರ ಕೋಟಿ ರೂ. ಗಳಿಕೆ ಮಾಡಲಿದೆ ಎನ್ನಲಾಗಿದೆ. ಕಳೆದ ವರ್ಷ ಟೊರಾಂಟೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಬಿಡುಗಡೆಯಾಗಿದ್ದ ಈ ಸೂಪರ್ ನ್ಯಾಚುರಲ್ ಹಾರರ್ ಚಿತ್ರ ಈ ವರ್ಷ ಜಗತ್ತಿನಾದ್ಯಂತ ರಿಲೀಸ್ ಆಗಿದ್ದು, ಭಾರತದಲ್ಲಿಇದೇ ಮೇ 29ರಂದು ತೆರೆಗೆ ಬರಲಿದೆ. 2007ರಲ್ಲಿತೆರೆಕಂಡಿದ್ದ ‘ಪ್ಯಾರಾನಾರ್ಮಲ್ ಆ್ಯಕ್ಟಿವಿಟಿ’ ಸಿನಿಮಾ ಕೇವಲ 15 ಲಕ್ಷ ರೂ. ಬಜೆಟ್ ನಲ್ಲಿತಯಾರಾಗಿ ಜಾಗತಿಕವಾಗಿ ಭರ್ತಿ 1800 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇದಾದ 19 ವರ್ಷಗಳ ನಂತರ ಬಂದಿರುವ ‘ಅಬ್ಸೆಷನ್ ’ ಈ ಹಿಂದಿನ ದಾಖಲೆ ಮುರಿಯಲಿದೆ ಎನ್ನಲಾಗುತ್ತಿದೆ.
ಕನ್ನಡದಲ್ಲೂಗೆದ್ದಿವೆ ಅಗ್ಗದ ಹಾರರ್
ಸ್ಯಾಂಡಲ್ ವುಡ್ ನಲ್ಲಿ1993ರಲ್ಲಿಬಂದಿದ್ದ ಬ್ಲಾಕ್ ಬಸ್ಟರ್ ಹಾರರ್ ಸಿನಿಮಾ ‘ಶ್ ’ ಕೇವಲ 19 ಲಕ್ಷ ರೂ. ಬಜೆಟ್ ನಲ್ಲಿನಿರ್ಮಾಣವಾಗಿತ್ತು. ಆದರೆ ಇದು ಗಲ್ಲಾಪೆಟ್ಟಿಗೆಯಲ್ಲಿಎರಡೂವರೆ ಕೋಟಿ ರೂ. ಬಾಚಿಕೊಂಡಿದೆ. ಪಾಯಿಗಳನ್ನು. ಇದು ಉಪೇಂದ್ರ ಬ್ಲಾಕ್ ಬಸ್ಟರ್ ಸಿನಿಮಾ. 2013ರಲ್ಲಿತೆರೆಕಂಡಿದ್ದ ಫೌಂಡ್ ಫುಟೇಜ್ ಶೈಲಿಯ ‘6-5=2’ ಸಿನಿಮಾ ಕೇವಲ 30 ಲಕ್ಷ ರೂ.ನಲ್ಲಿನಿರ್ಮಾಣವಾಗಿ 5 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. 2016ರಲ್ಲಿಬಂದ ‘ರಂಗಿತರಂಗ’ ಚಿತ್ರ ಕೂಡ ಕೇವಲ ಒಂದೂವರೆ ಕೋಟಿ ರೂ. ಬಜೆಟ್ ನಲ್ಲಿಸಿದ್ಧವಾಗಿ ಬರೋಬ್ಬರಿ 40 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿತ್ತು. ಕಳೆದ ವರ್ಷ ಕನ್ನಡದ ಹಾರರ್ ಕಾಮಿಡಿ ಸಿನಿಮಾ ‘ಸು ಫ್ರಮ್ ಸೋ’ ಕೂಡ 2 ಕೋಟಿ ರೂ.ನಷ್ಟು ಕಡಿಮೆ ಬಜೆಟ್ ನಲ್ಲಿತಯಾರಾಗಿ ಚಿತ್ರಮಂದಿರದಲ್ಲಿತೆರೆಕಂಡ ಬಳಿಕ 120 ಕೋಟಿ ರೂ.ಗೂ ಹೆಚ್ಚು ಗಳಿಸಿತು. ಹೀಗೆ ಅತಿ ಕಡಿಮೆ ಬಜೆಟ್ ನಲ್ಲಿನಿರ್ಮಾಣವಾಗಿರುವ ಹಾರರ್ ಚಿತ್ರಗಳು ಕನ್ನಡದಲ್ಲೂಕಮಾಲ್ ಮಾಡಿವೆ.
ಬಾಲಿವುಡ್ ನಲ್ಲೂಕಡಿಮೆ ಬಜೆಟ್ ಭರ್ಜರಿ ಹಿಟ್
2024ರಲ್ಲಿಕೇವಲ 50 ಕೋಟಿ ರೂ. ಬಜೆಟ್ ನ ಹಾರರ್ ಸಿನಿಮಾ ‘ಸ್ತ್ರೀ 2’ 850 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. 2018ರಲ್ಲಿತೆರೆಕಂಡಿದ್ದ ಇದರ ಪ್ರೀಕ್ವೆಲ್ ‘ಸ್ತ್ರೀ’ ಕೂಡ ಕೇವಲ 20 ಕೋಟಿ ರೂ. ಬಜೆಟ್ ನಲ್ಲಿನಿರ್ಮಾಣವಾಗಿ 200 ಕೋಟಿ ರೂ.ವರೆಗೆ ಕಲೆಕ್ಷನ್ ಮಾಡಿದೆ. ಬಾಲಿವುಡ್ ನಲ್ಲಿಇತ್ತೀಚಿನ ಹಾರರ್ ಸಿನಿಮಾಗಳಾದ ‘ತುಂಬಾಡ್ ’, ‘ಮುಂಜ್ಯಾ’, ‘ಶೈತಾನ್ ’ ಕೂಡ ಕೋಟಿಗಳಲ್ಲಿನಿರ್ಮಾಣಗೊಂಡು ನೂರಾರು ಕೋಟಿ ರೂ. ಕಲೆಕ್ಷನ್ ಮಾಡಿವೆ. ಈ ಹಿಂದೆ ರಾಮ್ ಗೋಪಾಲ್ ವರ್ಮ ನಿರ್ದೇಶನದ ‘ಭೂತ್ ’, ‘ರಾಝ್ ’, ‘ರಾಗಿಣಿ ಎಂಎಂಎಸ್ ’ ಸಿನಿಮಾಗಳೆಲ್ಲವೂ ಕಡಿಮೆ ಬಜೆಟ್ ನಲ್ಲಿತಯಾರಾಗಿ ಹತ್ತು ಪಟ್ಟು ಅಥವಾ ಅದಕ್ಕಿಂತ ಹೆಚ್ಚೇ ಗಳಿಕೆ ಮಾಡಿ ಮೈಲಿಗಲ್ಲುಸ್ಥಾಪಿಸಿವೆ.
ಬಾಕ್ಸ್
ಪ್ರೇಕ್ಷಕರ ಅಭಿರುಚಿಗೆ ಆದ್ಯತೆ
ಸ್ಯಾಂಡಲ್ ವುಡ್ ಹಾಗೂ ಭಾರತದ ಅನೇಕ ಪ್ರಾಂತೀಯ ಚಿತ್ರರಂಗಗಳು ಕಡಿಮೆ ಬಜೆಟ್ ನಲ್ಲಿಉತ್ತಮ ಕತೆ ಆಯ್ಕೆ ಮಾಡಿ ಅದಕ್ಕೆ ಸೂಕ್ತ ಸ್ಟಾರ್ ಕಾಸ್ಟ್ , ತಂತ್ರಜ್ಞರ ತಂಡದೊಂದಿಗೆ ಹಾರರ್ ಸಿನಿಮಾಗಳನ್ನು ಮಾಡಿ ಜನರನ್ನು ಚಿತ್ರಮಂದಿರಕ್ಕೆ ಸೆಳೆಯವ ಪ್ರಯತ್ನ ಮಾಡಬಹುದು. ನಾವು ಕೊಟ್ಟಿದನ್ನು ಜನರು ನೋಡೇ ನೋಡುತ್ತಾರೆ ಎಂಬ ಮನಸ್ಥಿತಿಯಿಂದ ಹೊರಬಂದು ಅವರಿಗೆ ಬೇಕಾದನ್ನು ನೀಡಿ ಸಂತಸಗೊಳಿಸಬೇಕಿದೆ. ಹೀಗಾದಾಗ ಮಾತ್ರ ಸದ್ಯಕ್ಕೆ ಸೋಲುಗಳಿಂದ ಕಂಗೆಟ್ಟಿರುವ ಚಿತ್ರರಂಗ ಚೇತರಿಸಿಕೊಳ್ಳಲು ಸಾಧ್ಯ.

