*ಚಿತ್ರ:ಮಂದಿರ*
ಜಯನಗರ ಶಿವಮಂದಿರದಲ್ಲಿಮಕ್ಕಳ ವಿಕಾಸಕ್ಕೆ ಹಾಗೂ ಉತ್ತಮ ಜೀವನಕ್ಕೆ ಸಂಸ್ಕಾರ ಮತ್ತು ಸಂಸ್ಕೃತ ಎಂಬ 11 ದಿನಗಳ ಶಿಬಿರ ನಡೆಯಿತು.ಡಾ.ಚಂಪಾರಾಣಿ ಕಲ್ಯಾಣರಾವ ಕುಂಬಾರ,ಡಾ.ಲಿಂಗರಾಜ ಸಿರಗಾಪುರ, ಜಿ.ಜಿ.ವಣಿಕ್ಯಾಳ,ಎಂ.ಡಿ.ಮಠಪತಿ ಇತರರಿದ್ದರು.
ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ವ್ ದಿಂದ ಸಂಸ್ಕಾರ-ಸಂಸ್ಕೃತ ಶಿಬಿರ(ಕಿಕ್ಕರ್ )
ಮಕ್ಕಳ ವಿಕಸನಕ್ಕೆ ಸಂಸ್ಕಾರ ಅತ್ಯಗತ್ಯ
ವಿಕ ಸುದ್ದಿಲೋಕ ಕಲಬುರಗಿ
ಮಕ್ಕಳಿಗೆ ಸಂಸ್ಕಾರ ಹೇಳಿಕೊಡುವುನ್ನು ಪೋಷಕರು ತಮ್ಮ ಮನೆಯಿಂದಲೇ ಪ್ರಾರಂಭಿಸಬೇಕು. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇದು ಸಹಕಾರಿಯಾಗಲಿದೆ ಎಂದು ಖ್ಯಾತ ಜ್ಯೋತಿಷಿ ವಿದ್ವಾಂಸ ಡಾ.ಚಂಪಾರಾಣಿ ಕಲ್ಯಾಣರಾವ ಕುಂಬಾರ ಹೇಳಿದರು.
ಜಯನಗರ ಶಿವಮಂದಿರದಲ್ಲಿಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ವ್ ದಿಂದ ಬುಧವಾರ ಹಮ್ಮಿಕೊಂಡಿದ್ದ ಮಕ್ಕಳ ವಿಕಾಸಕ್ಕೆ ಹಾಗೂ ಉತ್ತಮ ಜೀವನಕ್ಕೆ ಸಂಸ್ಕಾರ ಮತ್ತು ಸಂಸ್ಕೃತ ಎಂಬ 11 ದಿನಗಳ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದು ಮಕ್ಕಳಿಗೆ ಸಂಸ್ಕಾರ ಅವಶ್ಯವಾಗಿದೆ. ಮಕ್ಕಳಲ್ಲಿಶಿಸ್ತು ಮತ್ತು ಮಾನವೀಯ ಮೌಲ್ಯಗಳ ಗುಣಗಳನ್ನು ಕಲಿಸಬೇಕು. ಸಂಸ್ಕಾರವಂತ ಮಕ್ಕಳಿಗೆ ಜೀವನದಲ್ಲಿಉನ್ನತ ಸ್ಥಾನ ಹೊಂದಲು ಸಹಕಾರಿಯಾಗಲಿದೆ ಎಂದರು.
ಸಾಹಿತಿ ಜಿ.ಜಿ.ವಣಿಕ್ಯಾಳ ಮಾತನಾಡಿ, ಇಂದು ಮಕ್ಕಳಿಗೆ ಮೊಬೈಲ್ ಗೀಳು ಹೆಚ್ಚಾಗಿದೆ. ಇದರಿಂದ ಅವರ ವ್ಯಕ್ತಿತ್ವ ವಿಕಸನಕ್ಕೆ ಹೊಡೆತ ಬೀಳುತ್ತದೆ. ಅದರಿಂದ ಹೊರತರಲು ಮಕ್ಕಳಿಗೆ ಇಂಥ ಶಿಬಿರಗಳು ಸಹಕಾರಿಯಾಗಲಿದೆ. ಪೋಷಕರು ತಮ್ಮ ಮಕ್ಕಳ ಜೀವನ ರೂಪಿಸುವಲ್ಲಿಮಹತ್ವದ ಪಾತ್ರ ವಹಿಸಬೇಕು ಎಂದರು.
ಟ್ರಸ್ವ್ ಸದಸ್ಯ ಎಂ.ಡಿ.ಮಠಪತಿ, ಸಂಸ್ಕೃತ ಪಂಡಿತ ಶಿವರುದ್ರಯ್ಯ ಮಠಪತಿ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ, ಸಹ ಕಾರ್ಯದರ್ಶಿ ಮನೋಹರ ಬಡಶೇಷಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಮಲ್ಲಯ್ಯಸ್ವಾಮಿ ಗಂಗಾಧರಮಠ, ಗುರುಪಾದಪ್ಪ ಕಾಂತಾ, ಬಸವರಾಜ ಅನ್ವರರ್ಕ, ಬಸವರಾಜ, ಮನೋಹರ ಬಡಶೇಷಿ, ನಾಗರಾಜ ಖುಬಾ, ಮಲ್ಲಯಸ್ವಾಮಿ ಬೀದಿಮನಿ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಅನುರಾಧಾ ಕುಮಾರಸ್ವಾಮಿ, ಅನಿತಾ ನವಣಿ, ಸುಷ್ಮಾ ಮಾಗಿ, ಗೀತಾ ಸಿರಗಾಪುರ, ಗೀತಾ ಹುಡುಗಿ ಸೇರಿದಂತೆ ನೂರಾರು ಮಕ್ಕಳು ಇದ್ದರು.
*ಕೋಟ್ *
ಮಕ್ಕಳಿಗೆ ಸಂಸ್ಕಾರವಂತರನ್ನಾಗಿ ಮಾಡುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಸ್ಕೃತ ಜತೆಗೆ ಪೂಜೆ ಪುನಸ್ಕಾರ ಹಾಗೂ ಮಂತ್ರಗಳನ್ನು ಇಲ್ಲಿಹೇಳಿಕೊಡಲಾಗುವುದು. ಟ್ರಸ್ವ್ ದಿಂದ ಇನ್ನಷ್ಟು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
-ಡಾ.ಲಿಂಗರಾಜ ಸಿರಗಾಪುರ, ಅಧ್ಯಕ್ಷ, ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ವ್

