ವನಿತಾ ಅಶೋಕ್ 25

Contributed bynetravati.krishnamurthy@timesgroup.com|Vijaya Karnataka

ಸಮತೋಲನ ಆಹಾರ ಸೇವನೆಗೆ ಸರಳ ವಿಧಾನವಿದೆ. ತಟ್ಟೆಯ ಅರ್ಧ ಭಾಗದಲ್ಲಿ ತರಕಾರಿ ಅಥವಾ ಹಣ್ಣುಗಳು ಇರಲಿ. ಒಂದು ಭಾಗದಲ್ಲಿ ಪ್ರೊಟೀನ್, ಉಳಿದ ಭಾಗದಲ್ಲಿ ಕಾರ್ಬೋಹೈಡ್ರೇಟ್ ಇರಲಿ. ಆರೋಗ್ಯಕರ ಕೊಬ್ಬು ಸೇರಿಸಿ. ಊಟದ ನಂತರ ಮೂರು ನಾಲ್ಕು ಗಂಟೆಗಳವರೆಗೆ ಹೊಟ್ಟೆ ತುಂಬಿದ ಅನುಭವ ಇದ್ದರೆ ಆಹಾರ ಸಮತೋಲನದಲ್ಲಿದೆ. ವಾರದ ಒಟ್ಟಾರೆ ಆಹಾರ ಪದ್ಧತಿ ಮುಖ್ಯ.

secrets to understanding nutrition in the market

ವನಿತಾ ಅಶೋಕ್

-----------

ಸಮತೋಲನ ಆಹಾರ ಸೇವನೆ ತಿಳಿಯುವ ಸರಳ ವಿಧಾನ

---

ಡಯಟ್ ನಲ್ಲಿಎದುರಾಗುವ ಸಾಮಾನ್ಯ ಪ್ರಶ್ನೆ ಎಂದರೆ ಕ್ಯಾಲೊರಿ ಎಣಿಕೆ ಮಾಡದೇ ಅಥವಾ ಆಹಾರವನ್ನು ತೂಕ ಮಾಡದೇ ಸರಿಯಾದ ಪ್ರಮಾಣದ ಕಾರ್ಬೋಹೈಡ್ರೇಟ್ , ಪ್ರೊಟೀನ್ , ಫೈಬರ್ ಮತ್ತು ಕೊಬ್ಬಿನಂಶ ಇರುವ ಸಮತೋಲನ ಆಹಾರ ಸೇವಿಸುತ್ತಿದ್ದೇವೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳುವುದು ಹೇಗೆ?

ಖಂಡಿತವಾಗಿಯೂ ತಿಳಿದುಕೊಳ್ಳಬಹುದು.

-ತಟ್ಟೆಯ ಅರ್ಧ ಭಾಗದಲ್ಲಿತರಕಾರಿ ಅಥವಾ ಹಣ್ಣುಗಳು ಇರಲಿ. ಇದರಿಂದ ಫೈಬರ್ , ವಿಟಮಿನ್ ಮತ್ತು ಹೊಟ್ಟೆ ತುಂಬಿದ ಅನುಭವ ಸಿಗುತ್ತದೆ.

-ತಟ್ಟೆಯ ಒಂದು ಭಾಗದಲ್ಲಿಪ್ರೊಟೀನ್ ಇರಲಿ. ಉದಾಹರಣೆಗೆ ಮೊಟ್ಟೆ, ಪನೀರ್ , ಚಿಕನ್ , ಮೀನು, ಬೇಳೆ, ಟೋಫು ಅಥವಾ ಗ್ರೀಕ್ ಯೋಗಾರ್ಟ್ .

-ಉಳಿದ ಒಂದು ಭಾಗದಲ್ಲಿಕಾರ್ಬೋಹ್ರೈಡ್ರೇಟ್ ಇರಲಿ. ಉದಾಹರಣೆಗೆ ಅನ್ನ, ರೊಟ್ಟಿ, ಓಟ್ಸ್ , ಆಲೂಗಡ್ಡೆ, ಹಣ್ಣುಗಳು ಅಥವಾ ಸಿರಿಧಾನ್ಯಗಳು. ಜತೆಗೆ ಸ್ವಲ್ಪ ಆರೋಗ್ಯಕರ ಕೊಬ್ಬು ಸೇರಿಸಿ. ಉದಾಹರಣೆಗೆ ಕಡಲೆಕಾಯಿ, ಬೀಜಗಳು, ತುಪ್ಪ, ಆಲಿವ್ ಎಣ್ಣೆ ಅಥವಾ ಪೀನಟ್ ಬಟರ್ .

ಮತ್ತೊಂದು ಸರಳ ಪರೀಕ್ಷೆ ಎಂದರೆ ಆಹಾರ ಸೇವಿಸಿದ ನಂತರ ಮೂರರಿಂದ ನಾಲ್ಕು ಗಂಟೆಗಳವರೆಗೆ ಹೊಟ್ಟೆ ತುಂಬಿದ ಅನುಭವ ಇದ್ದರೆ ಶಕ್ತಿ ಸ್ಥಿರವಾಗಿದ್ದರೆ ಮತ್ತು ತಕ್ಷಣವೇ ಮತ್ತೆ ತಿಂಡಿ ಸೇವಿಸಬೇಕು ಎನಿಸದಿದ್ದರೆ, ನಿಮ್ಮ ಆಹಾರ ಸಮತೋಲನದಲ್ಲಿದೆ ಎಂದು ಹೇಳಬಹುದು. ಪ್ರಮುಖ ಸಂಗತಿ ಎಂದರೆ ತರಕಾರಿ, ಹಣ್ಣು, ಬೇಳೆ, ಧಾನ್ಯ ಮತ್ತು ಪ್ರೊಟೀನ್ ಗಳಿಂದ ತಟ್ಟೆಯನ್ನು ತುಂಬಿದಷ್ಟೂ ಪೋಷಕಾಂಶಗಳ ಸಮತೋಲನ ಉತ್ತಮವಾಗಿರುತ್ತದೆ. ಬಿಸ್ಕತ್ ಮತ್ತು ಚಿಫ್ಸ್ ಮಾತ್ರ ಇರುವ ತಟ್ಟೆ ದೇಹಕ್ಕೆ ಹೆಚ್ಚು ಉಪಕಾರಿಯಲ್ಲ. ಪ್ರತಿ ಊಟವೂ ಪರಿಪೂರ್ಣವಾಗಿರಬೇಕೆಂದಿಲ್ಲ. ವಾರದ ಒಟ್ಟಾರೆ ಆಹಾರ ಪದ್ಧತಿ ಹೇಗಿರುತ್ತದೆ ಎಂಬುದು ಮುಖ್ಯವಾಗಿರುತ್ತದೆ. ನಿಖರತೆಗಿಂತ ನಿಯಮಿತ ಹೆಚ್ಚು ಮಹತ್ವದ್ದು.