ಲೀಡ್
ಆಡಳಿತಾಧಿಕಾರಿಗಳಿಗೆ ಡಬಲ್ ಕೆಲಸ
ಮಾತೃ ಇಲಾಖೆ ಕೆಲಸಗಳೊಂದಿಗೆ ಗ್ರಾಪಂ ಕೆಲಸದ ಒತ್ತಡ | 2 ದಿನಕ್ಕೊಮ್ಮೆ ಗ್ರಾಪಂಗೆ ಭೇಟ ಕಡ್ಡಾಯ
((ಸಾರ್ವಜನಿಕ ಕೆಲಸಗಳು ಮಂದಗತಿ ದೂರು))
ಸೂಲಿಬೆಲೆ ಎಂ.ಪ್ರಶಾಂತ್ ಬೆಂಗಳೂರು ಗ್ರಾಮಾಂತರ
ಅಧಿಕಾರ ಅವಧಿ ಪೂರ್ಣಗೊಂಡಿರುವ ಗ್ರಾಪಂಗಳಿಗೆ ನೇಮಕವಾಗಿರುವ ಆಡಳಿತಾಧಿಕಾರಿಗಳು ಮಾತೃ ಇಲಾಖೆ ಕೆಲಸಗಳ ಜತೆಗೆ ಗ್ರಾಪಂ ಕೆಲಸಗಳಿಂದ ಒತ್ತಡಕ್ಕೆ ಸಿಲುಕುವಂತಾಗಿದೆ. ಇದರ ನಡುವೆ ಗ್ರಾಪಂಗಳಲ್ಲಿಸಾರ್ವಜನಿಕ ಕೆಲಸಗಳು ಮಂದಗತಿಯಲ್ಲಿಸಾಗಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿಗ್ರಾಪಂ ಅಧಿಕಾರ ಅವಧಿ ಮುಗಿದಿರುವ ಗ್ರಾಪಂಗಳಿಗೆ ನಾನಾ ಇಲಾಖೆಯ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ಈ ಅಧಿಕಾರಿಗಳು ತಮ್ಮ ಮಾತೃ ಇಲಾಖೆ ಕೆಲಸಗಳ ಜತೆಗೆ ತಮಗೆ ವಹಿಸಿರುವ ಗ್ರಾಪಂ ಕರ್ತವ್ಯಗಳನ್ನು ನಿರ್ವಹಣೆ ಮಾಡಬೇಕಿದೆ. ಎರಡೂ ಕೆಲಸಗಳಿಂದಾಗಿ ಗ್ರಾಪಂಗಳಿಗೆ ಆಡಳಿತಾಧಿಕಾರಿಗಳ ಸಕಾಲಕ್ಕೆ ಬರಲು ಸಾಧ್ಯವಾಗದಿರುವುದರಿಂದ ಸಾರ್ವಜನಿಕ ಕೆಲಸಗಳು ನಿಧಾನಗತಿಯಲ್ಲಿಸಾಗಿವೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಜಿಪಂಗೆ ದೂರು:
ಅಧಿಕಾರ ಅವಧಿ ಮುಗಿದಿರುವ ಗ್ರಾಪಂಗಳಿಗೆ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಡಳಿತಾಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ಸಮಯಕ್ಕೆ ಸರಿಯಾಗಿ ಭೇಟಿ ನೀಡದ ಕಾರಣ, ಸಾರ್ವಜನಿಕರ ಕುಂದು ಕೊರತೆ, ಕುಡಿಯುವ ನೀರು, ಇನ್ನಿತರೆ ಸಮಸ್ಯೆಗಳ ಕುರಿತು ಜಿಪಂಗೆ ದೂರುವಾಣಿ ಕರೆಗಳ ಮೂಲಕ ದೂರು ಸಲ್ಲಿಕೆಯಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಜಿಪಂ, ಆಡಳಿತಾಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
2 ದಿನಕ್ಕೊಮ್ಮೆ ಭೇಟಿ ಕಡ್ಡಾಯ:
ಆಡಳಿತಾಧಿಕಾರಿಗಳು ಸಕಾಲಕ್ಕೆ ಗ್ರಾಪಂಗಳಲ್ಲಿಸಿಗುತ್ತಿಲ್ಲಮತ್ತು ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲಎಂದು ಜಿಪಂಗೆ ಸಲ್ಲಿಕೆಯಾಗುತ್ತಿರುವ ದೂರಗಳ ಹಿನ್ನೆಲೆಯಲ್ಲಿಆಡಳಿತಾಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಿರುವ ಜಿಪಂ, 2 ದಿನಕ್ಕೊಮ್ಮೆ ಆಡಳಿತಾಧಿಕಾರಿಗಳು ಕಡ್ಡಾಯವಾಗಿ ಗ್ರಾಪಂಗೆ ಭೇಟಿ ನೀಡಬೇಕು. ಸಾರ್ವಜನಿಕರಿಗೆ ಸ್ಪಂದಿಸುವ ಜತೆಗೆ ಕುಡಿಯುವ ನೀರಿನ ಸಮಸ್ಯೆ, ಕಚೇರಿಯ ದೈನಂದಿನ ಕೆಲಸಗಳನ್ನು ನಿರ್ವಹಿಸಲು ಸೂಚನೆ ನೀಡಲಾಗಿದೆ.
ಆಡಳಿತಾಧಿಕಾರಿ ಏನೆಲ್ಲಮಾಡಬೇಕು?:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 8(4)ರನ್ವಯ ಆಡಳಿತಾಧಿಕಾರಿಯನ್ನು ಕ್ರಮಬದ್ದವಾಗಿ ನೇಮಕ ಮಾಡಲಾಗಿದೆ. ಈ ನಿಯಮದನ್ವಯ ಆಡಳಿತಾಧಿಕಾರಿ ಎಲ್ಲಅಧಿಕಾರ ಚಲಾಯಿಸಬಹುದು. ಕರ್ತವ್ಯಗಳನ್ನು ನಿರ್ವಹಿಸಬಹುದು. ಗ್ರಾಪಂ ಹಣಕಾಸಿನ ವ್ಯವಹಾರಗಳನ್ನು ಆಡಳಿತಾಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಂಟಿಯಾಗಿ ನಿರ್ವಹಿಸಬೇಕು. ವಾರ್ಡ್ ಮತ್ತು ಗ್ರಾಮಸಭೆಗಳನ್ನು ಕಾಲ ಕಾಲಕ್ಕೆ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
ಬಾಕ್ಸ್
ಅಧ್ಯಕ್ಷರ ಅಧಿಕಾರ
ಅಧಿನಿಯಮ 62ರಂತೆ ಅಧ್ಯಕ್ಷರ ಪ್ರಕಾರ್ಯಗಳು ಮತ್ತು ಅಧಿಕಾರವನ್ನು ಚಲಾಯಿಸಬಹುದು. ನೌಕರರಿಗೆ ಮಾಸಿಕ ವೇತನ, ಗ್ರಾಪಂ ಅಭಿವೃದ್ಧಿ ಕಾಮಗಾರಿಗಳ ಸಮರ್ಪಕ ಮತ್ತು ಸಕಾಲಕ್ಕೆ ಅನುಷ್ಠಾನ, ಗ್ರಾಪಂ ಕಡತಗಳ ನಿರ್ವಹಣೆ, ತೆರಿಗೆ ವಸೂಲಾತಿ ಪರಿಷ್ಕರಣೆ, ನೀರಿನ ಸಮಸ್ಯೆಯಿದ್ದಲ್ಲಿತುರ್ತು ಸಭೆ ಕರೆದು ಅಗತ್ಯ ತಿರ್ಮಾನ, ಗ್ರಾಪಂ ಸ್ವಂತ ಕೊಳವೆ ಬಾವಿ ಹಾಗೂ ಖಾಸಗಿ ಕೊಳವೆ ಬಾವಿಗಳ ಮುಖಾಂತರ ನೀರು ಪೂರೈಕೆಗೆ ಆಡಳಿತಾಧಿಕಾರಿಗಳು ಕ್ರಮವಹಿಸಬೇಕು.
ಆಡಳಿತಾಧಿಕಾರಿಗಳಿಗೆ ತಮ್ಮ ಅವಧಿಯಲ್ಲಿಗ್ರಾಪಂನ ಯಾವುದೇ ಹುದ್ದೆಗಳಿಗೆ ಯಾವುದೇ ನೌಕರನನ್ನು ನೇಮಕ ಮಾಡಿಕೊಳ್ಳುವ ಅಧಿಕಾರ ಇಲ್ಲ.
ಕೋಟ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಪಂ ಆಡಳಿತಾಧಿಕಾರಿಗಳಿಗೆ ಗ್ರಾಪಂಗಳಿಗೆ ಭೇಟಿ ಹಾಗೂ ಕರ್ತವ್ಯ ನಿರ್ವಹಣೆ ಸಂಬಂಧ ಅಗತ್ಯ ಮಾರ್ಗಸೂಚಿಗಳನ್ನು ನೀಡಲಾಗಿದೆ. ಸಮರ್ಪಕ ಕಾರ ್ಯ ನಿರ್ವಹಣೆಗೆ ಸೂಚನೆ ನೀಡಲಾಗಿದೆ.
-ಡಾ.ವಾಸಂತಿ ಅಮರ್ | ಸಿಇಒ, ಜಿಪಂ, ಬೆಂಗಳೂರು ಗ್ರಾಮಾಂತರ
ಚಿತ್ರ-13 ಸೂಲಿಬೆಲೆ 1
ಎಐ ಚಿತ್ರ

