ವಿಕ ಸುದ್ದಿಲೋಕ ಗದಗ
ಬಳಗಾನೂರಿನ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠದಲ್ಲಿಉಚಿತ ಆರೋಗ್ಯ ಮೇಳ ಮತ್ತು ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠ, ಬಳಗಾನೂರು ಗ್ರಾಪಂ ಹಾಗೂ ವಿವಿಧ ಆರೋಗ್ಯ ಸಂಸ್ಥೆಗಳ ಸಹಯೋಗದಲ್ಲಿಈ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸಾನ್ನಿಧ್ಯ ವಹಿಸಿದ್ದ ಶ್ರೀ ಶಾಂತವೀರ ಶರಣರು ಮಾತನಾಡಿ, ‘‘ಗ್ರಾಮೀಣ ಭಾಗದ ಜನರಲ್ಲಿಆರೋಗ್ಯ ಜಾಗೃತಿ ಹೆಚ್ಚುವ ಅಗತ್ಯವಿದೆ. ಉಚಿತ ಆರೋಗ್ಯ ಶಿಬಿರಗಳ ಮೂಲಕ ಉತ್ತಮ ವೈದ್ಯಕೀಯ ಸೇವೆ ದೊರೆಯುತ್ತಿರುವುದು ಶ್ಲಾಘನೀಯ,’’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಕುಲಪತಿ ಹಾಗೂ ಕುಲಸಚಿವ ಪ್ರೊ. ಡಾ. ಸುರೇಶ್ ವಿ. ನಾಡಗೌಡರ ಮಾತನಾಡಿ, ‘‘ಗ್ರಾಮೀಣ ಜನರ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ಅಭಿವೃದ್ಧಿಗೆ ವಿಶ್ವವಿದ್ಯಾಲಯ ಬದ್ಧವಾಗಿದೆ. ಆರೋಗ್ಯ ಮೇಳಗಳು ಜನರಲ್ಲಿಆರೋಗ್ಯ ಕಾಳಜಿ ಹೆಚ್ಚಿಸಲು ಸಹಕಾರಿಯಾಗುತ್ತವೆ,’’ಎಂದರು.
ಶಿಬಿರದಲ್ಲಿಸ್ತನ ಕ್ಯಾನ್ಸರ್ ಪರೀಕ್ಷೆ, ಗರ್ಭಕಂಠದ ಕ್ಯಾನ್ಸರ್ ತಪಾಸಣೆ, ಪ್ಯಾಪ್ ಸ್ಮೀಯರ್ ಪರೀಕ್ಷೆ, ರಕ್ತದೊತ್ತಡ ಹಾಗೂ ಶುಗರ್ ಪರೀಕ್ಷೆ, ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.
ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ಡಾ. ಉಮೇಶ ಹಳ್ಳಿಕೇರಿ, ಜಯಪ್ರಿಯ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವೆಂಕಟರಮಣ ಕಟ್ಟಿ, ಪಿಡಿಒ ಮಂಜುಳಾ ಬಾರಕೇರ, ಆಯುಷ್ ಆರೋಗ್ಯ ಅಧಿಕಾರಿ ಡಾ. ಬಿ.ಎಂ. ಲೋಕಾಪುರಿ, ಸಮುದಾಯ ಆರೋಗ್ಯಾಧಿಕಾರಿ ಸಂಜಯಕುಮಾರ, ಶರಣು ಎಸ್ . ಪುರಾಣಿಕಮಠ, ಶಶಿಕಾಂತ ಗುಳರೆಡ್ಡಿ, ರಾಜೇಶ್ವರಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗ್ರಾಮದ ಮಹಿಳೆಯರು ಹಾಗೂ ಸಾರ್ವಜನಿಕರು ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡರು. ಸಂಯೋಜಕರಾದ ಅಮಿತ್ ವಿಕ್ರಂ, ಅಧ್ಯಕ್ಷೆ ನಿವೇದಿತ ಹಾಗೂ ವಿಜಯಕುಮಾರ್ ಭಾಗವಹಿಸಿದ್ದರು.
11ಜಿಡಿಜಿ19-
ಬಳಗಾನೂರಿನ ಚಿಕ್ಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠದಲ್ಲಿಉಚಿತ ಆರೋಗ್ಯ ಮೇಳ ಮತ್ತು ಕಣ್ಣಿನ ತಪಾಸಣಾ ಶಿಬಿರ ಜರುಗಿತು.

