ಚುರುಮುರಿ

Contributed bybabitha.salian@timesgroup.com|Vijaya Karnataka

ಟೋಕಿಯೊದಲ್ಲಿ ನಡೆದ ಕ್ರಚಿರೋಲ್ ಅನಿಮೇ ಅವಾರ್ಡ್ಸ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಹಾಲಿವುಡ್ ನಟ ವಿನ್ಸ್‌ಟನ್ ಡ್ಯೂಕ್ ಜೊತೆ ವೇದಿಕೆ ಹಂಚಿಕೊಂಡರು. ಅವರು ರಶ್ಮಿಕಾ ಜೊತೆ ವೇದಿಕೆ ನೀಡುವಂತೆ ಮನವಿ ಮಾಡಿದ್ದರು. ಇನ್ನು, ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಕಿಂಗ್' ಸಿನಿಮಾದಲ್ಲಿ ನಟ ರಣವೀರ್ ಸಿಂಗ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿದೇಶದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದ ಕೆಲವು ದೃಶ್ಯಗಳಲ್ಲಿ ಅವರು ನಟಿಸಿದ್ದಾರೆ.

rashmika mandanna and winston duke share the stage

ರಶ್ಮಿಕಾನೇ ಬೇಕೆಂದ

ಹಾಲಿವುಡ್ ನಟ

ಟೋಕಿಯೊದಲ್ಲಿನಡೆದ 10ನೇ ವಾರ್ಷಿಕ ಕ್ರಚಿರೋಲ್ ಅನಿಮೇ ಅವಾರ್ಡ್ಸ್ ಕಾರ್ಯಕ್ರಮದಲ್ಲಿನಟಿ ರಶ್ಮಿಕಾ ಮಂದಣ್ಣ ಜತೆಗೆ ವೇದಿಕೆ ಹಂಚಿಕೊಂಡಿರುವ ಹಾಲಿವುಡ್ ನಟ ವಿನ್ಸ$್ಟನ್ ಡ್ಯೂಕ್ ಈ ಕುರಿತ ಫೋಟೊ ಶೇರ್ ಮಾಡಿ ‘ಐ ಹ್ಯಾಡ್ ಅ ಬ್ಲಾಸ್ಟ್ ’ ಎಂದು ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮದಲ್ಲಿಪಾಲ್ಗೊಂಡಿದ್ದ ಅವರು ಆಯೋಜಕರಲ್ಲಿರಶ್ಮಿಕಾ ಜತೆಗೇ ತಮಗೆ ವೇದಿಕೆ ಕೊಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ.

ಕಿಂಗ್ ನಲ್ಲಿರಣವೀರ್ ಸಿಂಗ್

ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಕಿಂಗ್ ’ ಸಿನಿಮಾದಲ್ಲಿಒಂದು ವಿಶೇಷ ಪಾತ್ರದಲ್ಲಿನಟ ರಣವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ವಿದೇಶದಲ್ಲಿಚಿತ್ರೀಕರಣವಾಗಿರುವ ಈ ಚಿತ್ರದ ಕೆಲವು ದೃಶ್ಯಗಳಲ್ಲಿಅವರು ನಟಿಸಿದ್ದಾರೆ ಎನ್ನಲು ‘ಕಿಂಗ್ ’ ಶೂಟಿಂಗ್ ಸೆಟ್ ನಿಂದ ಅವರು ಹಂಚಿಕೊಂಡಿರುವ ಫೋಟೊಗಳೇ ಸಾಕ್ಷಿ ಎಂದು ಹೇಳಲಾಗಿದೆ.