ಟ್ರಾನ್ಸ್ ಫಾರ್ಮರ್ ನಡಿ ಕಸದ ರಾಶಿ
ವಿಜಯಪುರ: ಪಟ್ಟಣದ 20ನೇ ವಾರ್ಡ್ ನ ಇಂದಿರಾನಗರದ ಯಲುವಹಳ್ಳಿ ರಸ್ತೆಯಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಡಿ ಕಸ ಸುರಿಯುತ್ತಿದ್ದು, ಇದನ್ನು ತೆರವುಗೊಳಿಸಿ, ಬೇರೆಡೆ ವಿಲೇವಾರಿಗೆ ವ್ಯವಸ್ಥೆ ಮಾಡಬೇಕೆಂಬ ಒತ್ತಾಯ ಸ್ಥಳೀಯರಿಂದ ವ್ಯಕ್ತವಾಗಿದೆ.
ಕಸವನ್ನು ರಸ್ತೆಯಲ್ಲಿಸುರಿಯಲಾಗುತ್ತಿದೆ. ಕಸದ ರಾಶಿಯಿಂದಾಗಿ ರಸ್ತೆಯಲ್ಲಿಸಂಚರಿಸುವ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ. ತ್ಯಾಜ್ಯವನ್ನು ತಿನ್ನಲು ಬರುವ ಬೀದಿನಾಯಿಗಳು, ರಸ್ತೆಯಲ್ಲಿಸಂಚರಿಸುವ ವಾಹನ ಸವಾರರ ಮೇಲೆ ಎರಗುತ್ತಿವೆ. ಪಕ್ಕದಲ್ಲೆಅಂಗನವಾಡಿ ಕೇಂದ್ರವೂ ಇದ್ದು, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇಲ್ಲಿನ ಕಸದ ರಾಶಿಯನ್ನು ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ತೆರವುಗೊಳಿಸಲಾಗುತ್ತದೆ. ಇಲ್ಲಿ, ಕಸ ತೆರವುಗೊಳಿಸಲು ಬರುವ ಪೌರಕಾರ್ಮಿಕರಿಗೂ ಅಪಾಯ. ಕಸದಲ್ಲಿಬಿಸಾಡುವ ಪ್ಲಾಸ್ಟಿಕ್ ಕವರ್ ಚರಂಡಿಯಲ್ಲಿಸಿಲುಕಿಕೊಂಡು ಕೊಳಚೆ ನೀರು ಹರಿಯದಂತಾಗಿದೆ. ಹಾಗಾಗಿ, ಕಸವನ್ನು ಬೇರೆಡೆ ವಿಲೇವಾರಿಗೆ ವ್ಯವಸ್ಥೆ ಮಾಡಬೇಕು. ಇಲ್ಲವೇ, ಪುರಸಭೆಯ ಕಸ ಸಂಗ್ರಹಣಾ ವಾಹನಗಳಿಗೆ ಹಾಕುವಂತೆ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
25.ವಿಜಯಪುರ 03: ವಿಜಯಪುರ ಪಟ್ಟಣದ ಇಂದಿರಾನಗರದಲ್ಲಿವಿದ್ಯುತ್ ಟ್ರಾನ್ಸ್ ಫಾರ್ಮರ್ ಕೆಳಗೆ ಸುರಿದಿರುವ ಕಸ.ದಿರುವುದು.

