ಪ್ರತಿ ಮನೆಗೂ ನಂಬರ್ ಪ್ಲೇಟ್

Contributed byganeshbyd143@gmail.com|Vijaya Karnataka

ಬ್ಯಾಡಗಿ ಪಟ್ಟಣದ ಪ್ರತಿ ಮನೆ ಮತ್ತು ಆಸ್ತಿಗಳಿಗೆ ನಂಬರ್‌ ಪ್ಲೇಟ್‌ ಅಳವಡಿಕೆ ಕಡ್ಡಾಯವಾಗಿದೆ. ಆಸ್ತಿ ಮಾಲೀಕರು ತಮ್ಮ ಮಾಹಿತಿಯನ್ನು ಪುರಸಭೆಗೆ ನೀಡಬೇಕು. ಅಖಿಲ ಕರ್ನಾಟಕ ಗ್ರಾಮ ಪಂಚಾಯತಿ ಹಿತರಕ್ಷಣಾ ಸಮಿತಿಯ ಸಿಬ್ಬಂದಿಗೆ 100 ರೂ. ಶುಲ್ಕ ಪಾವತಿಸಿ ನಂಬರ್‌ ಪ್ಲೇಟ್‌ ಅಳವಡಿಸಿಕೊಳ್ಳಬೇಕು. ಪುರಸಭೆಯೊಂದಿಗೆ ಸಹಕರಿಸಲು ಆಡಳಿತಾಧಿಕಾರಿ ಮತ್ತು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

mandatory number plate installation at every house read for details

ಬ್ಯಾಡಗಿ: ಪಟ್ಟಣ ವ್ಯಾಪ್ತಿಯ ಪ್ರತಿ ಮನೆ, ಆಸ್ತಿಗಳಿಗೆ ಕಡ್ಡಾಯವಾಗಿ ನಂಬರ್ ಪ್ಲೇಟ್ ಅಳವಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಆಸ್ತಿ ಮಾಲೀಕರಿಗೆ ಈ ಮೂಲಕ ಮಾಹಿತಿ ನೀಡಲಾಗಿದ್ದು, ಮಾಲೀಕರು ತಮ್ಮ ಆಸ್ತಿಯ ಮಾಹಿತಿಯನ್ನು ನೀಡುವುದು ಕಡ್ಡಾಯವಾಗಿದೆ. ನಂಬರ್ ಪ್ಲೇಟ್ ಅಳವಡಿಕೆಗಾಗಿ ಪುರಸಭೆಯಿಂದ ಅಧಿಕೃತವಾಗಿ ಆಯ್ಕೆ ಮಾಡಲಾದ ಅಖಿಲ ಕರ್ನಾಟಕ ಗ್ರಾಮ ಪಂಚಾಯತಿ ಹಿತರಕ್ಷಣಾ ಸಮಿತಿಯ ಸಿಬ್ಬಂದಿಗೆ ಆಸ್ತಿ ಮಾಲೀಕರು ತಮ್ಮ ಮಾಹಿತಿಯೊಂದಿಗೆ 100 ರೂ. ಶುಲ್ಕ ನೀಡಿ, ಆಸ್ತಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಪುರಸಭೆಯೊಂದಿಗೆ ಸಹಕರಿಸಬೇಕಾಗಿ ಬ್ಯಾಡಗಿ ಪುರಸಭೆ ಆಡಳಿತಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ ಹಾಗೂ ಜಂಟಿ ಪ್ರಕಟಣೆಯಲ್ಲಿವಿನಂತಿಸಿದ್ದಾರೆ.