ಆರ್ ಸಿಎಚ್ 25 ಎಂಎಸ್ಕೆ 01 ಅಧಿಕಾರಿಗಳ ನಿರ್ಲಕ್ಷತ್ರ್ಯ ಶಿಥಿಲಾವಸ್ಥೆW

Contributed byazizvk51@gmail.com|Vijaya Karnataka

ಮಸ್ಕಿ ಬಾಲಕಿಯರ ಸರಕಾರಿ ಪ್ರೌಢ ಶಾಲೆಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಡುಗೆ ಕೋಣೆ ಮತ್ತು ಶೌಚಾಲಯ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳಾಗಿವೆ. ಆದರೂ ಕಟ್ಟಡಗಳು ಉದ್ಘಾಟನೆಗೊಳ್ಳದೆ ಶಿಥಿಲಾವಸ್ಥೆ ತಲುಪಿವೆ. ಕಿರಿದಾದ ಬಾಗಿಲಿನಿಂದಾಗಿ ಅಡುಗೆ ಕೋಣೆ ಬಳಕೆಯಾಗುತ್ತಿಲ್ಲ. ಅಧಿಕಾರಿಗಳು ಕೂಡಲೇ ಗಮನಹರಿಸಿ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕಿದೆ.

status of the mid day meal project at maski school arch 25 dilapidation and negligence of officials

25 ಲಕ್ಷ ರೂ.ವೆಚ್ಚದಲ್ಲಿಅಡುಗೆ ಕೋಣೆ, ಶೌಚಾಲಯ ನಿರ್ಮಾಣ/ ಎರಡು ವರ್ಷದಿಂದ ನನೆಗುದಿಗೆ

ಉದ್ಘಾಟನೆಗೆ ಕಾಯುತ್ತಿರುವ ಅಡುಗೆ ಕೋಣೆ

ವಿಕ ಸುದ್ದಿಲೋಕ ಮಸ್ಕಿ

ಇಲ್ಲಿಯ ಬಾಲಕಿಯರ ಸರಕಾರಿ ಪ್ರೌಢ ಶಾಲೆ ಮೈದಾನ ಬಳಿ ಬಿಸಿಯೂಟ ಅಡುಗೆ ಕೋಣೆ ಕಾಮಗಾರಿ ಪೂರ್ಣಗೊಂಡು 2 ವರ್ಷವಾದರೂ ಅಡುಗೆ ಕೋಣೆ ಉದ್ಘಾಟನೆಗೊಳ್ಳದೇ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ವಿದ್ಯಾರ್ಥಿಗಳ ಅನುಕೂಲಕ್ಕೆ ಶಾಲೆ ಮೈದಾನ ಬಳಿಯ ಜಾಗದಲ್ಲಿಅಡುಗೆ ಕೋಣೆ, ಶೌಚಾಲಯ ನಿರ್ಮಾಣಕ್ಕೆ ಅಂದಾಜು 25 ಲಕ್ಷ ರೂ. ಅನುದಾನ ಬಿಡುಗಡೆಯಾಗಿತ್ತು. 2 ಕಟ್ಟಡಗಳ ಕಾಮಗಾರಿ ಹಲವು ವರ್ಷಗಳ ಬಳಿಕ ಪೂರ್ಣಗೊಂಡಿದ್ದರೂ ಕಟ್ಟಡಗಳ ಉದ್ಘಾಟನೆಗೆ ಇನ್ನೂ ಮಹೂರ್ತ ಫಿಕ್ಸ್ ಆಗಿಲ್ಲ. ಅಡುಗೆ ಕೋಣೆ ನಿರ್ವಹಣೆ ಇಲ್ಲದ ಕಾರಣ ಹಾಳಾಗುವ ಹಂತಕ್ಕೆ ತಲುಪಿದೆ. ಶಾಲೆ ಆರಂಭಕ್ಕೂ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕಟ್ಟಡ ಉದ್ಘಾಟನೆಗೆ ಮಹೂರ್ತ ಫಿಕ್ಸ್ ಮಾಡಬೇಕಿದೆ. 2019-20 ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮುಖ್ಯಮಂತ್ರಿ ವಿವೇಚನಾ ನಿಧಿ (ಸಿಎಂಡಿಜಿ) ಯೋಜನೆಯಲ್ಲಿಬಿಸಿಯೂಟ ಅಡುಗೆ ಕೋಣೆ, ಶೌಚಾಲಯ ನಿರ್ಮಾಣಕ್ಕೆ 25 ಲಕ್ಷ ರೂ. ಬಿಡುಗಡೆ ಯಾಗಿತ್ತು. ಕಟ್ಟಡಗಳು ಪೂರ್ಣಗೊಂಡು ವರ್ಷಗಳು ಕಳೆದರೂ ಕಟ್ಟಡಗಳಿಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಅಡುಗೆ ಕೋಣೆಗೆ ಕಿರಿದಾದ ಬಾಗಿಲು ಅಳವಡಿಸಿರುವ ಕಾರಣ ಅನ್ನ, ಸಾರು ಬೇಯಿಸುವ ಪಾತ್ರೆ ಒಯ್ಯಲು ಸಾಧ್ಯವಾಗದ ಕಾರಣ ಅಡುಗೆ ದಾರರು ಹಳೆ ಅಡುಗೆ ಕೋಣೆ ಯಲ್ಲಿಬಿಸಿಯೂಟ ಸಿದ್ಧಪಡಿಸುವ ಅನಿವಾರ್ಯತೆ ಎದುರಾಗಿದೆ. ಅಂದಾಜು 12 ಲಕ್ಷ ವೆಚ್ಚದ ಅಡುಗೆ ಕೋಣೆ ನಿರುಪಯುಕ್ತವಾಗಿದೆ. ಈ ಬಗ್ಗೆ ಶಾಸಕ ಬಸನಗೌಡ ತುರುವಿಹಾಳ ಗಮನ ಹರಿಸಿ ಕಟ್ಟಡದ ಉದ್ಘಾಟನೆಗೆ ಮಹೂರ್ತ ಕಲ್ಪಿಸಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.

----------

ಕೋಟ್

ಎರಡು ಕಟ್ಟಡ ಕಾಮಗಾರಿ ಪೂರ್ಣಗೊಳಿಸಿದ ಕಾರಣ ಕಟ್ಟಡಗಳನ್ನು ಇತ್ತೀಚೆಗೆ ಸುಪರ್ದಿಗೆ ಪಡೆಯಲಾಗಿದೆ. ಕಟ್ಟಡ ಉದ್ಘಾಟನೆ ಇನ್ನೂ ನೆರವೇರಿಸಿಲ್ಲ. - ಟಿ.ಬಸಪ್ಪ, ಮುಖ್ಯ ಶಿಕ್ಷಕ, ಬಾಲಕಿಯರ ಸರಕಾರಿ ಪ್ರೌಢ ಶಾಲೆ, ಮಸ್ಕಿ

ಆರ್ ಸಿಎಚ್ 25 ಎಂಎಸ್ಕೆ ಪೋಟೋ 01 ಮಸ್ಕಿಯ ಬಾಲಕಿಯರ ಸರಕಾರಿ ಪ್ರೌಢ ಶಾಲೆ ಬಳಿಯ ಅಡುಗೆ ಕೋಣೆ ಶಿಥಿಲಗೊಂಡಿದೆ.