ಕ್ವಾರ್ಟರ್ ಫೈನಲ್ಸ್ ಗೆ ಕೃಷ್ , ಮನಿಶ್

Contributed bymanjunath.gowda@timesgroup.com|Vijaya Karnataka

ಕರ್ನಾಟಕ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಕೃಷ್ ತ್ಯಾಗಿ ಮತ್ತು ಮನಿಶ್ ಸುರೇಶ್‌ಕುಮಾರ್ ಕ್ವಾರ್ಟರ್‌ಫೈನಲ್ಸ್‌ಗೆ ತಲುಪಿದ್ದಾರೆ. ಕೃಷ್ ತ್ಯಾಗಿ ಜಪಾನ್‌ನ ಯುತಾ ಕವಾಹಶಿ ಅವರನ್ನು ನೇರ ಸೆಟ್‌ಗಳಲ್ಲಿ ಸೋಲಿಸಿದರು. ಮನಿಶ್ ಸುರೇಶ್‌ಕುಮಾರ್ ಎದುರಾಳಿ ಗಾಯಗೊಂಡ ಕಾರಣ ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ಡಬಲ್ಸ್‌ನಲ್ಲಿಯೂ ಭಾರತೀಯ ಜೋಡಿಗಳು ಕ್ವಾರ್ಟರ್‌ಫೈನಲ್ಸ್‌ಗೆ ಮುನ್ನಡೆದವು. ಭಾರತದ ಹೋರಾಟ ಜೀವಂತವಾಗಿದೆ.

krish and manish advance to quarterfinals karnataka open tennis tournament 2023

ವಿಕ ಸುದ್ದಿಲೋಕ ಬೆಂಗಳೂರು

ಕೃಷ್ ತ್ಯಾಗಿ ಮತ್ತು ಮನಿಶ್ ಸುರೇಶ್ ಕುಮಾರ್ ಇಲ್ಲಿನಡೆಯುತ್ತಿರುವ ಕರ್ನಾಟಕ ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿಮೊದಲ ಬಾರಿಗೆ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದು, ಭಾರತದ ಹೋರಾಟವನ್ನು ಜೀವಂತವಾಗಿಟ್ಟಿದ್ದಾರೆ.

ಎಸ್ .ಎಂ. ಕೃಷ್ಣ ಟೆನಿಸ್ ಕ್ರೀಡಾಂಗಣದಲ್ಲಿಬುಧವಾರ ನಡೆದ ಸಿಂಗಲ್ಸ್ ವಿಭಾಗದ ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಬೆಂಗಳೂರಿನ 19 ವರ್ಷದ ತ್ಯಾಗಿ 6-4, 6-4 ನೇರ ಸೆಟ್ ಗಳಿಂದ ಜಪಾನ್ ನ ಯುತಾ ಕವಾಹಶಿ ವಿರುದ್ಧ ಗೆದ್ದು ಮುಂದಿನ ಸುತ್ತಿಗೆ ಮುನ್ನಡೆದರು. ವಿಶ್ವದ 1322ನೇ ರಾರ ಯಂಕ್ ನ ಕೃಷ್ , 637ನೇ ರಾರ ಯಂಕ್ ಹೊಂದಿದ್ದ ಜಪಾನ್ ಆಟಗಾರನ ವಿರುದ್ಧ ದುರ್ಬಲ ಆಟಗಾರನಾಗಿ ಕಣಕ್ಕಿಳಿದರು. ಆದರೆ ಪಂದ್ಯದಲ್ಲಿಭಾರತೀಯ ಆಟಗಾರ ಆಕರ್ಷಕ ಸವ್ ರ್ ಮತ್ತು ಫೋರ್ ಹ್ಯಾಂಡ್ ಹೊಡೆತಗಳ ಮೂಲಕ ಗಮನ ಸೆಳೆದರು.

ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಮನೀಶ್ 4-6, 2-3ರಲ್ಲಿಹಿನ್ನಡೆಯಲ್ಲಿದ್ದಾಗ ಬ್ರಿಟನ್ ನ ಅಲಾಸ್ಟೈರ್ ಗ್ರೇ ಗಾಯದ ಸಮಸ್ಯೆಯಿಂದಾಗಿ ಹಿಂದೆ ಸರಿದ ಕಾರಣ ಭಾರತೀಯ ಆಟಗಾರ ಸುಲಭವಾಗಿ ಮುಂದಿನ ಸುತ್ತಿಗೆ ತೇರ್ಗಡೆ ಹೊಂದಿದರು. ಈ ಮಧ್ಯೆ, ಡಬಲ್ಸ್ ವಿಭಾಗದಲ್ಲಿಡಿ. ಪ್ರಜ್ವಲ್ ದೇವ್ ಮತ್ತು ನಿತಿನ್ ಕುಮಾರ್ ಸಿನ್ಹಾ ಜೋಡಿ, ಆದಿಲ್ ಕಲ್ಯಾಣಪುರ್ ಮತ್ತು ಮುಕುಂದ್ ಸಸಿಕುಮಾರ್ ಜೋಡಿ ತಮ್ಮ ಎದುರಾಳಿಗಳನ್ನು ಸೋಲಿಸಿ ಕ್ವಾರ್ಟರ್ ಫೈನಲ್ಸ್ ಗೆ ಮುನ್ನಡೆದವು.