ಮುಂಜಾನೆಯ ಅಭ್ಯಾಸ ಹಾರ್ಮೋನ್ ಮೇಲಿನ ಪ್ರಭಾವ
ಬೆಳW್ಗæ ಎದ್ದಾಕ್ಷಣ ತಣ್ಣೀರು Ó್ನಾನ ಮಾಡಿ, ಬಿಸಿ ಕಾಫಿ ಕುಡಿಯುವುದರೊಂದಿಗೆ ನಿತ್ಯದ ಬೆಳಗು ಆಹ್ಲಾದಕರವಾಗಿ ಶುರುವಾಗುತ್ತದೆ. ಆದರೆ ಬೆಳಗ್ಗೆ ಎದ್ದಾಕ್ಷಣ ಮಾಡುವ ಕೆಲವು ಸಂಗತಿಗಳು ದೇಹದ ಹಾರ್ಮೋನ್ ಗಳ ಮೇಲೆ ಪ್ರಭಾವ ಬೀರುತ್ತದೆ.
ತಣ್ಣೀರಿನ ಸ್ನಾನದ ಮ್ಯಾಜಿಕ್
ತಣ್ಣೀರು ಮೈಮೇಲೆ ಬಿದ್ದಾಗ ದೇಹದಲ್ಲಿಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ನಿಮ್ಮ ಏಕಾಗ್ರತೆ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೆ, ಇದು ನಿಮ್ಮ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೂರ್ಯನ ಬೆಳಕು
ಬೆಳಗ್ಗೆ ಕಿಟಕಿ ತೆರೆದು ಬಿಸಿಲನ್ನು ನೋಡುವುದು ಕೇವಲ ಬೆಳಕಿಗಾಗಿ ಅಲ್ಲ. ಸೂರ್ಯನ ಕಿರಣಗಳು ಕಣ್ಣಿಗೆ ಬಿದ್ದಾಗ ಮಿದುಳು ಮೆಲಟೋನಿನ್ ಉತ್ಪಾದನೆಯನ್ನು ನಿಲ್ಲಿಸಿ, ಕಾರ್ಟಿಸೋಲ್ ಉತ್ಪಾದನೆಯನ್ನು ಆರಂಭಿಸುತ್ತದೆ.
ಹಾಸಿಗೆ ಸರಿಪಡಿಸುವುದು
ಬೆಳಗ್ಗೆ ಎದ್ದ ತಕ್ಷಣ ಹಾಸಿಗೆಯನ್ನು ಅಚ್ಚುಕಟ್ಟಾಗಿ ಮಾಡುವುದು ಒಂದು ಸಣ್ಣ ಕೆಲಸದಂತೆ ಕಂಡರೂ, ಇದು ಮಿದುಳಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಅಸ್ತವ್ಯಸ್ತವಾಗಿರುವ ಹಾಸಿಗೆ ಮಿದುಳಿಗೆ ಇನ್ನೂ ಕೆಲಸ ಬಾಕಿ ಇದೆ ಎಂಬ ನಕಾರಾತ್ಮಕ ಸಂದೇಶ ನೀಡುತ್ತಿರುತ್ತದೆ. ಅದನ್ನು ಸರಿಪಡಿಸಿದರೆ ಮನಸ್ಸಿಗೆ ತೃಪ್ತಿ ಮತ್ತು ಶಾಂತಿ ಸಿಗುತ್ತದೆ.
ಕಾಫಿ ಸೇವನೆ
ಬೆಳಗ್ಗೆ ಕಾಫಿ ಕುಡಿದರೆ ಬೇರೆ ಕೆಲಸಗಳನ್ನು ಮಾಡಲು ಉñ್ಸಾಹ, ಶಕ್ತಿ ಬರುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಕಾಫಿಯಲ್ಲಿರುವ ಕೆಫಿನ್ ನಿಜವಾಗಿಯೂ ಶಕ್ತಿ ನೀಡುವುದಿಲ್ಲ. ಬದಲಿಗೆ ನಮ್ಮ ಮಿದುಳಿನಲ್ಲಿನಿದ್ರೆ ಬರಿಸುವ ರಾಸಾಯನಿಕವನ್ನು ಇದು ತಾತ್ಕಾಲಿಕವಾಗಿ ತಡೆಯುತ್ತದೆ.

