ಇಂಟ್ರೋ...
ಪಶ್ಚಿಮ ಏಷ್ಯಾ ದೇಶಗಳಲ್ಲಿಸಂಘರ್ಷ ನಡೆಯುತ್ತಲೇ ಇದೆ. ಇದರಿಂದಾಗಿ ಭಾರತದ ವೃತ್ತಿಪರರು, ಟೆಕ್ಕಿಗಳು, ವಿದ್ಯಾರ್ಥಿಗಳು ವಿದೇಶಗಳಲ್ಲಿಕೆಲಸ, ಅಧ್ಯಯನ ಮಾಡಲು ಭಯಪಡುವಂತಾಗಿದೆ. ಅದರಲ್ಲೂ, ವೃತ್ತಿಪರರು ಈಗ ಭಾರತದಲ್ಲಿದ್ದುಕೊಂಡೇ ಬೇರೆ ದೇಶಗಳ ಕಂಪನಿಗಳಿಗೆ ಕೆಲಸ (ವರ್ಕ್ ಫ್ರಂ ಹೋಮ್ ) ಮಾಡಲು ಶುರು ಮಾಡಿದ್ದಾರೆ. ಹತ್ತಾರು ದೇಶಗಳೂ ಭಾರತೀಯರಿಗೆ ವರ್ಕ್ ಫ್ರಂ ಹೋಮ್ ಸೌಲಭ್ಯ ನೀಡುತ್ತಿವೆ.
ಫಾರಿನ್ ‘ವರ್ಕ್ ಫ್ರಂ ಹೋಮ್ ’
ಜಾಬ್ ಪಡೆಯೋದು ಹೇಗೆ?
- ಬಿ.ಸೋಮಶೇಖರ್
ಘ್ಕಿsಟಞashಛಿka್ಟ.ಚಿಃಠಿಜಿಞಛಿsಟ್ಛಜ್ಞಿdಜಿa.್ಚಟಞ
ಬೇರೆ ದೇಶಗಳಲ್ಲಿಕೆಲಸ ಮಾಡಬೇಕು ಎಂದರೆ ಪಾಸ್ ಪೋರ್ಟ್ , ವೀಸಾ ಸಿದ್ಧಪಡಿಸಿಕೊಳ್ಳಬೇಕು. ಒಳ್ಳೆಯ ಸಂಬಳದ ಕಂಪನಿ ಹುಡುಕಬೇಕು. ಸುಲಭವಾಗಿ ವೀಸಾ ಕೂಡ ಸಿಗುವುದಿಲ್ಲ. ಮೇಲಾಗಿ, ಹುಟ್ಟಿದ ಊರನ್ನು, ಸಂಬಂಧಿಕರನ್ನು ಬಿಟ್ಟು ಅಲ್ಲಿಗೆ ಹೋಗಬೇಕು. ಅದರಲ್ಲೂ, ಯುದ್ಧ, ಸಂಘರ್ಷಗಳ ಭೀತಿ ಬೇರೆ ಇತ್ತೀಚೆಗೆ ಹೆಚ್ಚಾಗಿದೆ. ಅಮೆರಿಕವು ಎಚ್ -1ಬಿ ವೀಸಾ ಶುಲ್ಕವನ್ನೂ ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿಫಾರಿನ್ ಜಾಬ್ ಎಂಬುದು ಮರೀಚಿಕೆಯೇ ಎಂದು ತುಂಬ ಜನ ಭಾವಿಸಿರುತ್ತಾರೆ. ಆದರೆ, ಫಾರಿನ್ ಕಂಪನಿಗಳಿಗೆ ನಮ್ಮ ಮನೆಯಲ್ಲಿಯೇ ಕುಳಿತು (ವರ್ಕ್ ಫ್ರಂ ಹೋಮ್ ) ಕೆಲಸ ಮಾಡಲು ಹತ್ತಾರು ಅವಕಾಶಗಳಿವೆ.
ಎಐ, ಮೆಷಿನ್ ಲರ್ನಿಂಗ್ , ಸೈಬರ್ ಸೆಕ್ಯುರಿಟಿ, ಕ್ಲೌಡ್ ಗವರ್ನನ್ಸ್ , ಯುಐ ಡಿಸೈನ್ ಸೇರಿ ಹಲವು ದೇಶಗಳ ನೂರಾರು ಕಂಪನಿಗಳು ಭಾರತೀಯರನ್ನು ನೇಮಿಸಿಕೊಳ್ಳುತ್ತಿವೆ. ಭಾರತೀಯರು ತಮ್ಮ ದೇಶದಲ್ಲೇ ಇದ್ದುಕೊಂಡು, ನಮಗಾಗಿ ಕೆಲಸ ಮಾಡಲಿ ಎಂದು ಬಯಸುತ್ತಿವೆ.
ಲಕ್ಷಾಂತರ ರೂಪಾಯಿ ಸಂಬಳ
ಅಮೆರಿಕದಲ್ಲಿಎಐ ಸೊಲ್ಯೂಷನ್ಸ್ ಆರ್ಕಿಟೆಕ್ಟ್, ಪ್ರಾಂಪ್ಟ್ ಎಂಜಿನಿಯರ್ ಗಳಿಗೆ ವರ್ಷಕ್ಕೆ 40-90 ಲಕ್ಷ ರೂ. ಪ್ಯಾಕೇಜ್ ನೀಡಲಾಗುತ್ತದೆ. ಅಮೆರಿಕದಲ್ಲಿಯೇ ಹೊಸ ಡಿಜಿಟಲ್ ಆ್ಯಕ್ಟ್ ಬಂದಿದೆ. ಯುರೋಪ್ ನಲ್ಲೂಸೈಬರ್ ಸೆಕ್ಯುರಿಟಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದೆ. ಇದರಿಂದಾಗಿ ಭಾರತದ ಕ್ಲೌಡ್ ಎಂಜಿನಿಯರ್ , ಎಥಿಕಲ್ ಹ್ಯಾಕರ್ , ಕಂಪ್ಲಾಯನ್ಸ್ ಆಫೀಸರ್ ಹುದ್ದೆಗಳಿಗೆ ಬೇಡಿಕೆ ಉಂಟಾಗಿದೆ. ಸುಮಾರು 70 ಲಕ್ಷ ರೂ.ವರೆಗೆ ಆಫರ್ ನೀಡುತ್ತವೆ ಎಂಬುದು ಗಮನಾರ್ಹ.
ಯುಎಕ್ಸ್ ರೈಟರ್ , ಮೋಷನ್ ಡಿಸೈನರ್ ಹುದ್ದೆಗಳಿಗೂ ವಿವಿಧ ದೇಶಗಳ ಏಜೆನ್ಸಿಗಳು ವರ್ಷಕ್ಕೆ 45 ಲಕ್ಷ ರೂ.ವರೆಗೆ ಪ್ಯಾಕೇಜ್ ನೀಡುತ್ತಿವೆ. ಇವುಗಳ ಜತೆಗೆ ಡಿಜಿಟಲ್ ಮಾರ್ಕೆಟಿಂಗ್ , ಕಂಟೆಂಟ್ ರೈಟಿಂಗ್ , ಡೇಟಾ ಸೈಂಟಿಸ್ಟ್ ಸೇರಿ ಹಲವು ಅವಕಾಶಗಳು ಭಾರತೀಯರನ್ನು ಕೈಬೀಸಿ ಕರೆಯುತ್ತಿವೆ. ಭಾರತದ ಕಾಲಮಾನವನ್ನು ಗಮನದಲ್ಲಿಇಟ್ಟುಕೊಂಡರೆ, ಯುಎಇ, ಸಿಂಗಾಪುರದ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಜತೆಗಿರಲಿ ಪ್ರಮಾಣಪತ್ರ
ಟೆಕ್ ವಿಭಾಗದಲ್ಲಿಉದ್ಯೋಗ ಪಡೆಯಲು ಬಯಸುವವರು ಗಿಟ್ ಹಬ್ ಪ್ರಮಾಣಪತ್ರ ಪಡೆದಿರಬೇಕು. ಭಾರತದಲ್ಲಿಯೇ ಇದನ್ನು ಪಡೆಯಲು 8-9 ಸಾವಿರ ರೂ. ಖರ್ಚಾಗುತ್ತದೆ. ಈ ಪ್ರಮಾಣಪತ್ರ ಇದ್ದರೆ ಕಂಪನಿಗಳು ಸುಲಭವಾಗಿ ವರ್ಕ್ ಫ್ರಂ ಹೋಮ್ ಅವಕಾಶ ನೀಡುತ್ತವೆ. ಉಳಿದಂತೆ ಎಂಜಿನಿಯರಿಂಗ್ , ಎಐ, ಮಾರ್ಕೆಟಿಂಗ್ ಗೆ ಸಂಬಂಧಿಸಿದ ಕೋರ್ಸ್ ಮುಗಿಸಿವರು ಸುಲಭವಾಗಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಾಗಿದೆ.
ನಕಾರಾತ್ಮಕ ಸಂಗತಿಗಳೂ ಇವೆ
ಬೇರೆ ದೇಶಗಳ ಕಂಪನಿಗಳಿಗೆ ಕೆಲಸ ಮಾಡುವುದರಿಂದ ಸಕಾರಾತ್ಮಕ ಸಂಗತಿಗಳ ಜತೆಗೆ ನಕಾರಾತ್ಮಕ ಅಂಶಗಳೂ ಇವೆ. ಅಮೆರಿಕ ಸೇರಿ ಹಲವು ದೇಶಗಳ ಕಂಪನಿಗಳಿಗೆ ಅಥವಾ ಕ್ಲೈಂಟ್ ಗಳಿಗೆ ತಡರಾತ್ರಿವರೆಗೆ ಕೆಲಸ ಮಾಡಬೇಕಾಗುತ್ತದೆ. ತಡರಾತ್ರಿ ನಡೆಯುವ ಸುದೀರ್ಘ ಮೀಟಿಂಗ್ ಗಳು ನೆಮ್ಮದಿ ಹಾಳು ಮಾಡುತ್ತವೆ. ಕಚೇರಿಯಲ್ಲಿಕೆಲಸ ಮಾಡಿದ, ಸಹೋದ್ಯೋಗಿಗಳ ಜತೆ ಆಪ್ತವಾಗಿ ಬೆರೆಯುವ ಅವಕಾಶ ಇಲ್ಲದಂತಾಗುತ್ತದೆ. ಮನೆಯಲ್ಲೇ ಕೆಲಸ ಮಾಡುವುದು ಆರಂಭದಲ್ಲಿಖುಷಿ ಕೊಟ್ಟರೂ ಬಳಿಕ ಬೇಸರ ತರಿಸುತ್ತದೆ. ಆರೋಗ್ಯ ವಿಮೆ, ಟಮ್ ರ್ ಇನ್ಶೂರೆನ್ಸ್ ನಂತಹ ಸೌಲಭ್ಯಗಳೂ ದೊರೆಯುವುದಿಲ್ಲ.
ಪಾಯಿಂಟ್ಸ್ ...
ಗಮನಿಸಬೇಕಾದ ಸಂಗತಿಗಳು
* ವಿದೇಶಿ ಕಂಪನಿಗೆ ನೀವು ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದರೆ, ಆದಾಯ ತೆರಿಗೆ ಕಾಯಿದೆಯ 44 ಎಡಿಎ ನಿಯಮದ ಸದ್ಬಳಕೆ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಸಂಬಳದ ಶೇ.50ರಷ್ಟು ಮೊತ್ತಕ್ಕೆ ಮಾತ್ರ ತೆರಿಗೆ (75 ಲಕ್ಷ ರೂ.ವರೆಗೆ) ಪಾವತಿಸಬಹುದು.
* ನೀವು ಯಾವುದಾದರೂ ಕಂಪನಿಗೆ ಕೆಲಸ ಮಾಡುವಾಗ ನೇರವಾಗಿ ಬ್ಯಾಂಕ್ ಖಾತೆ ನೀಡದಿರಿ. ಇದರಿಂದ ಡಾಲರ್ ನಿಂದ ರೂಪಾಯಿಗೆ ವರ್ಗಾಯಿಸಲು ಶೇ.3-5ರಷ್ಟು ಶುಲ್ಕ ವಿಧಿಸಲಾಗುತ್ತದೆ. ಇದಕ್ಕಾಗಿ ಘ್ಕಿWಜಿsಛಿ ಅಥವಾ ಘ್ಕಿPayಟ್ಞಛಿಛ್ಟಿ ಪ್ಲಾಟ್ ಫಾಮ್ ರ್ ಗಳನ್ನು ಬಳಸಿಕೊಳ್ಳಿ.
* ಬೇರೆ ದೇಶಗಳ ಕಂಪನಿಗಳಿಗೆ ಕೆಲಸ ಮಾಡುವಾಗ, ಅಲ್ಲಿನ ಸಮಯಕ್ಕೂ, ಭಾರತದ ಸಮಯಕ್ಕೂ ವ್ಯತ್ಯಾಸವಾಗುತ್ತದೆ. ಮಧ್ಯಾಹ್ನ 2ರಿಂದ ರಾತ್ರಿ 11 ಗಂಟೆಯೊಳಗೆ ಕೆಲಸ ಮುಗಿಯುವಂತಿದ್ದರೆ ಒಳ್ಳೆಯದು. ಅಮೆರಿಕದ ಕಂಪನಿಗಳಿಗೆ ಕೆಲಸ ಮಾಡಬೇಕಾದರೆ ರಾತ್ರಿಯೇ ಹೆಚ್ಚು ಕೆಲಸ ಮಾಡಬೇಕಾಗುತ್ತದೆ.
ಬಾಕ್ಸ್ ...
ಫಾರಿನ್ ಜಾಬ್ ಪಡೆಯೋದು ಹೇಗೆ?
ಮನೆಯಲ್ಲಿಯೇ ಕುಳಿತು ‘ಫಾರಿನ್ ಜಾಬ್ ’ ಹುಡುಕಬಹುದು. ಹೆಚ್ಚು ಬೆಳವಣಿಗೆ ಇರುವ ಟೆಕ್ ಸ್ಟಾರ್ಟಪ್ ಗಳಲ್ಲಿಕೆಲಸ ಮಾಡಲು ಇಚ್ಛಿಸುವವರು ಘ್ಕಿOಠಿಠಿಜಿs - Wಛ್ಝ್ಝಿ್ಛಟ್ಠ್ಞd ವೇದಿಕೆಗಳ ಮೂಲಕ ಕೆಲಸ ಹುಡುಕಬಹುದು. ಜಾಗತಿಕ ವರ್ಕ್ ಫ್ರಂ ಹೋಮ್ ಕೆಲಸಗಳಿಗೆ ಹೆಸರುವಾಸಿಯಾಗಿರುವ ್ಕಛಿಞಟಠಿಛಿ Oಓ ಹಾಗೂ Wಛಿ Wಟ್ಟk ್ಕಛಿಞಟಠಿಛ್ಝಿy ವೇದಿಕೆಗಳನ್ನು ಬಳಸಿಕೊಳ್ಳಬಹುದು. ಹಾಗೆಯೇ, ಲಿಂಕ್ ್ಡಇನ್ ತಾಣದಲ್ಲಿಲೊಕೇಷನ್ ವಿಭಾಗದಲ್ಲಿಅಮೆರಿಕ ಅಥವಾ ಯುರೋಪ್ ಎಂಬ ಆಯ್ಕೆ ಮಾಡಿಕೊಳ್ಳಬೇಕು. ಜಾಬ್ ಟೈಪ್ ವಿಭಾಗದಲ್ಲಿರಿಮೋಟ್ ಎಂಬ ಆಯ್ಕೆ ಮಾಡಿಕೊಂಡರೆ ಹತ್ತಾರು ಅವಕಾಸಗಳು ದೊರೆಯುವ ಸಾಧ್ಯತೆ ಇದೆ. ಆದರೆ, ಇಲ್ಲೂಮಧ್ಯವರ್ತಿಗಳ ಹಾವಳಿ ಇರುತ್ತದೆ. ಕೆಲಸ ಕೊಡಿಸುವುದಾಗಿ ವಂಚಿಸುವವರು ಇರುತ್ತಾರೆ. ಇಂತಹವರನ್ನು ನಂಬಬಾರದು, ಹಣ ಕೊಡಬಾರದು.

