ಸುಳ್ಯ ನಿವಾಸಿಯ ಏಕಾಂಗಿ ಸಾಹಸ
ವಿಕ ಸುದ್ದಿಲೋಕ ಸುಳ್ಯ
ಜಯನಗರ ಶಾಲೆಯ ಬಳಿಯಿಂದ ಕುತ್ತಾಜೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿಉಂಟಾಗಿರುವ ಹೊಂಡ-ಗುಂಡಿಗಳ ಸಮಸ್ಯೆಯಿಂದ ಬೇಸತ್ತ ಸ್ಥಳೀಯ ನಿವಾಸಿ ನವೀನ್ ಮಜಾದೋ ಅವರು ಸೋಮವಾರ ಸ್ವತಃ ಮಣ್ಣು ತಂದು ರಸ್ತೆ ಗುಂಡಿಗಳಿಗೆ ಹಾಕಿ ವಾಹನ ಸವಾರರಿಗೆ ತಾತ್ಕಾಲಿಕ ಅನುಕೂಲ ಕಲ್ಪಿಸಿದ್ದಾರೆ. ಅವರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ರಸ್ತೆಯಲ್ಲಿಹಲವು ದಿನಗಳಿಂದ ಅಲ್ಲಲ್ಲಿದೊಡ್ಡ ಪ್ರಮಾಣದ ಹೊಂಡಗಳು ನಿರ್ಮಾಣಗೊಂಡಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರ ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಮಳೆ ಬಂದ ಸಂದರ್ಭ ಹೊಂಡಗಳು ನೀರಿನಿಂದ ತುಂಬಿ ಅಪಾಯ ಮತ್ತಷ್ಟು ಹೆಚ್ಚಾಗುತ್ತಿತ್ತು. ಶಾಲಾ ಮಕ್ಕಳು, ವಯೋವೃದ್ದರು ಹಾಗೂ ದ್ವಿಚಕ್ರ ವಾಹನ ಸವಾರರು ವಿಶೇಷವಾಗಿ ಸಂಕಷ್ಟಕ್ಕೆ ಒಳಗಾಗುತ್ತಿದ್ದರು. ರಸ್ತೆಯ ದುಸ್ಥಿತಿಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿಹಲವು ಬಾರಿ ವಿಡಿಯೊ ಹಾಗೂ ಫೊಟೋಗಳು ಹರಿದಾಡಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲಎಂಬ ಆರೋಪವೂ ಕೇಳಿಬಂದಿದೆ.
ಸ್ಥಳೀಯರು ಕೂಡಲೇ ಸಂಬಂಧಪಟ್ಟ ಇಲಾಖೆ ರಸ್ತೆ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡು ಸಾರ್ವಜನಿಕರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಫೋಟೋ
12ಎಸ್ ಯುಎಲ್ -ರಸ್ತೆ ಗುಂಡಿಗಳಿಗೆ ಸ್ವತಃ ಮಣ್ಣು ತುಂಬಿಸಿ ದುರಸ್ತಿ ಮಾಡಿದ ಸ್ಥಳೀಯ ನಿವಾಸಿ ನವೀನ್ ಮಚಾದೋ.

