ನೂತನ ಪದ್ಧತಿಗೆ ನಾನಾ ತೊಡಕು

Contributed bymanjunathsalic@gmail.com|Vijaya Karnataka

ಸರ್ಕಾರಿ ನೌಕರರ ಹಾಜರಾತಿಗಾಗಿ ಜಾರಿಗೊಳಿಸಲಾದ ಕೆಎಎಎಂಎಸ್‌ ಸಾಫ್ಟ್‌ವೇರ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಕರ್ತವ್ಯಕ್ಕೆ ಹಾಜರಾದರೂ ಕೆಲವರ ಹಾಜರಾತಿ ಗೈರು ಎಂದು ದಾಖಲಾಗುತ್ತಿದೆ. ಹೆಸರು, ಆಧಾರ್‌ ಕಾರ್ಡ್‌ ವ್ಯತ್ಯಾಸ, ಕೆಜಿಐಡಿ ನಂಬರ್‌ ದೋಷಗಳು ಇದಕ್ಕೆ ಕಾರಣವಾಗಿವೆ. ಇದರಿಂದ ಹಳೆಯ ಬಯೋಮೆಟ್ರಿಕ್‌ ಪದ್ಧತಿಯೂ ಮುಂದುವರಿದಿದೆ. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

technical issues in kaams system inconveniences for employees

ನೂತನ ಪದ್ಧತಿಗೆ ನಾನಾ ತೊಡಕು

ಸರಕಾರಿ ನೌಕರರ ಹಾಜರಾತಿಗಾಗಿ ಜಾರಿಗೊಳಿಸಿದ ಸಾಫ್ಟ್ ವೇರ್ ನಲ್ಲಿಸಮಸ್ಯೆ

ಕರ್ತವ್ಯಕ್ಕೆ ಹಾಜರಾದರೂ ಗೈರೆಂದು ದಾಖಲು |

ಮಂಜುನಾಥ ಸಾಲಿ ರಾಯಚೂರು

ಸರಕಾರದ ನಾನಾ ಇಲಾಖೆಗಳಲ್ಲಿಜಾರಿಗೊಳಿಸಲಾಗಿರುವ ಸ್ಥಳ ಮತ್ತು ನೌಕರರ ಮುಖಚಹರೆ ಆಧರಿತ ಕೆಎಎಎಂಎಸ್ (ಕರ್ನಾಟಕ ಅಡ್ವಾನ್ಸ್ ಅಟೆಂಡೆನ್ಸ್ ಮ್ಯಾನೇಜ್ ಮೆಂಟ್ ಸಿಸ್ಟಂ) ಪದ್ಧತಿಗೆ ತಾಂತ್ರಿಕ ತೊಡಕು ಎದುರಾಗಿವೆ. ಪರಿಣಾಮ, ಹಳೇ ಬಯೋಮೆಟ್ರಿಕ್ ಸೇರಿ ಹೊಸ ಪದ್ಧತಿ ಮೂಲಕವೂ ಹಾಜರಿ ಹಾಕುವುದನ್ನು ನಾನಾ ಇಲಾಖೆಗಳು ಮುಂದುವರಿಸುವಂತಾಗಿದೆ.

2026ರ ಮೇ 1ರಿಂದ ರಾಜ್ಯದ ನಾನಾ ಇಲಾಖೆಗಳ ಎಲ್ಲನೌಕರರಿಗೆ ಅನ್ವಯವಾಗುವಂತೆ ಹೊಸ ಪದ್ಧತಿಯಡಿ ಹಾಜರಾತಿ ಹಾಕುವುದನ್ನು ಜಾರಿಗೊಳಿಸಲಾಗಿದೆ. ಅಂತೆಯೇ ಹೊಸ ಸಾಫ್ಟ್ ವೇರ್ ನಂತೆ ನೌಕರರು ತಾವು ಕರ್ತವ್ಯ ನಿರ್ವಹಿಸುವ ಇಲಾಖೆಯ ಕಚೇರಿಗೆ ಆಗಮಿಸಿ ಹಾಜರಾತಿ ಹಾಕುತ್ತಿದ್ದಾರೆ. ಆದರೆ, ಕೆಎಎಎಂಎಸ್ ಸಿಸ್ಟಮ್ ಮೂಲಕ ಬಹುತೇಕ ನೌಕರರು ಹಾಜರಾತಿ ಹಾಕುತ್ತಿದ್ದರೂ ತಾಂತ್ರಿಕ ಕಾರಣಕ್ಕೆ ನಾನಾ ಸಮಸ್ಯೆಗಳು ಉದ್ಭವಿಸುತ್ತಿವೆ. ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್ ಲೋಡ್ ಮಾಡಿಕೊಂಡ ಕೆಎಎಎಂಎಸ್ ಆ್ಯಪ್ ನಡಿ ನೌಕರರು ಕೆಲಸ ಮಾಡುವ ತಮ್ಮ ಇಲಾಖೆಯ ಸ್ಥಳಕ್ಕೆ ಬಂದು ಹಾಜರಾತಿ ಹಾಕಿದರೂ ಕೆಲವರದು ಗೈರು ಎಂದು ತೋರಿಸುತ್ತಿದೆ. ಈ ತೊಡಕುಗಳ ಬಗ್ಗೆ ನೂತನ ಸಾಫ್ಟ್ ವೇರ್ ನಿರ್ವಹಣೆ ಮಾಡುವ ತಾಂತ್ರಿಕ ವರ್ಗದವರ ಗಮನಕ್ಕೆ ತಂದು ಸರಿಪಡಿಸುವ ಕೆಲಸ ನಡೆಯುತ್ತಿದೆ.

ಏಕೆ ಸಮಸ್ಯೆ: ನೇಮಕಾತಿ ಆಗಿದ್ದಾಗ ಇದ್ದ ನೌಕರರ ಹೆಸರು ಮತ್ತು ಈಗಿನ ಆಧಾರ್ ಕಾರ್ಡ್ ನಲ್ಲಿರುವ ಹೆಸರಲ್ಲಿನರುವ ವ್ಯತ್ಯಾಸ, ಕೆಜಿಐಡಿ ನಂಬರ್ ನಲ್ಲಿನ ದೋಷ ಸೇರಿ ನಾನಾ ತಾಂತ್ರಿಕ ಕಾರಣಕ್ಕೆ ಆಯಾ ಸ್ಥಳಕ್ಕೆ ಹೋಗಿ ಹಾಜರಿ ಹಾಕಿದರೂ ಗೈರು ಅಥವಾ ಒಒಡಿ ಎಂದು ತೋರಿಸುತ್ತಿರುವುದು ನೌಕರರನ್ನು ಗೊಂದಲಕ್ಕೆ ತಳ್ಳಿದೆ. ಇದರಿಂದ ಹಳೆಯ ಬಯೋಮೆಟ್ರಿಕ್ ಸೇರಿ ಹೊಸ ಪದ್ಧತಿಯಲ್ಲೂಜಿಪಂ ವ್ಯಾಪ್ತಿಯ ನಾನಾ ಇಲಾಖೆಗಳಲ್ಲಿಹಾಜರಿ ದಾಖಲು ಮಾಡುವ ಪದ್ಧತಿ ಮುಂದುವರೆದಿದೆ.

ಬಾಕ್ಸ್ ಐಟಂ------

ಸಿಗದ ಸ್ಪಂದನೆ, ತಪ್ಪದ ಬವಣೆ

ವರ್ಷದ ಹಿಂದೆಯೇ ಪ್ರಾಯೋಗಿಕವಾಗಿ ಹೊಸ ಸಾಫ್ಟ್ ವೇರ್ ನಡಿ ಹಾಜರಾತಿ ಹಾಕುವುದಕ್ಕೆ ಆರೋಗ್ಯ ಇಲಾಖೆಯಲ್ಲಿಚಾಲನೆ ನೀಡಲಾಗಿತ್ತು. ಆದರೂ, ತಾಂತ್ರಿಕ ಸಮಸ್ಯೆಗಳು ಬಗೆಹರಿದಿಲ್ಲಎನ್ನುತ್ತವೆ ಮೂಲಗಳು. ಹಾಜರಾತಿಯಲ್ಲಿನ ತಾಂತ್ರಿಕ ದೋಷ ನಿವಾರಿಸುವ ಜವಾಬ್ದಾರಿ ಹೊತ್ತವರು ಸರಿಯಾಗಿ ಸ್ಪಂದಿಸುತ್ತಿಲ್ಲಎಂಬ ದೂರು ಕೇಳಿಬಂದಿವೆ. ಈ ಹಿನ್ನೆಲೆ ಹಾಜರಾತಿ ಪುಸ್ತಕದಲ್ಲಿಹಳೆ ಪದ್ಧತಿಯಂತೆ ಪ್ರತಿದಿನ ಕರ್ತವ್ಯಕ್ಕೆ ಹಾಜರಾದವರು ಸಹಿ ಮಾಡುವುದು ಮುಂದುವರಿಸುವಂತಾಗಿದೆ.

----------------

ಕೋಟ್ ..

ಪ್ರಸಕ್ತ ವರ್ಷದ ಮೇ 1ರಿಂದ ರಾಜ್ಯದ ಎಲ್ಲಇಲಾಖೆಗಳಿಗೆ ಅನ್ವಯವಾಗುವಂತೆ ಹೊಸ ಪದ್ಧತಿಯಡಿ ಸರಕಾರಿ ನೌಕರರು ಹಾಜರಾತಿ ಹಾಕುವುದನ್ನು ಜಾರಿಗೊಳಿಸಲಾಗಿದೆ. ಹಾಗಾಗಿ, ಜಿಪಂ ವ್ಯಾಪ್ತಿಯ ಎಲ್ಲಇಲಾಖೆಗಳಲ್ಲಿನೂತನ ವ್ಯವಸ್ಥೆಯಡಿ ಹಾಜರಾತಿ ಹಾಕಲು ಸೂಚಿಸಲಾಗಿದೆ. ಆದರೆ, ತಾಂತ್ರಿಕ ತೊಂದರೆಯಿಂದಾಗಿ ಹಾಜರಾತಿಯಲ್ಲಿವ್ಯತ್ಯಾಸ ಬರುತ್ತಿದೆ. ಬಹುತೇಕ ಜೂನ್ ನೊಳಗೆ ಸಣ್ಣಪುಟ್ಟ ತಾಂತ್ರಿಕ ದೋಷ ನಿವಾರಣೆಯಾಗಬಹುದು.

-ಹಾಲಸಿದ್ದಪ್ಪ ಪೂಜೇರಿ, ಉಪ ಕಾರ್ಯದರ್ಶಿ, ಜಿಪಂ, ರಾಯಚೂರು

ಕೋಟ್ ......2

ನಮ್ಮ ಇಲಾಖೆ ವ್ಯಾಪ್ತಿಯಲ್ಲಿರುವ ನೌಕರರು ಹೊಸ ಸಿಸ್ಟಂನಂತೆ ಹಾಜರಾತಿ ಹಾಕುತ್ತಿದ್ದಾರೆ. ಆಧಾರ್ ಕಾರ್ಡ್ ಸೇರಿ ನಾನಾ ದಾಖಲಾತಿಗಳಲ್ಲಿಸಣ್ಣಪುಟ್ಟ ದೋಷವಿದ್ದವರು ಹಾಜರಿ ಹಾಕುವಾಗ ಸಮಸ್ಯೆಗಳಾಗಿರಬಹುದು. ಆದರೂ, ಆರೋಗ್ಯ ಇಲಾಖೆಯ ಶೇ.75ರಷ್ಟು ಸಿಬ್ಬಂದಿ ಇದುವರೆಗೆ ಕೆಎಎಎಂಎಸ್ ಮೂಲಕ ಹಾಜರಿ ಹಾಕಲು ನೋಂದಣಿ ಮಾಡಿಸಿದ್ದಾರೆ.

-ಡಾ.ಸುರೇಂದ್ರಬಾಬು, ಡಿಎಚ್ ಒ, ರಾಯಚೂರು