ತರಬೇತಿ ಕಾರ್ಯಾಗಾರ 18ರಿಂದ

Contributed bypunyavathi.hp@timesgroup.com|Vijaya Karnataka

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮೇ 18 ರಿಂದ 20ರವರೆಗೆ ಬೆಂಗಳೂರಿನಲ್ಲಿ ಸುಧಾರಿತ ದತ್ತಾಂಶ ವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ಕುರಿತು ಮೂರು ದಿನಗಳ ತರಬೇತಿ ಕಾರ್ಯಾಗಾರ ನಡೆಸಲಿದೆ. ವಿದ್ಯಾರ್ಥಿಗಳು, ಸಂಶೋಧಕರು, ಉಪನ್ಯಾಸಕರು ಮತ್ತು ವಿಜ್ಞಾನಾಸಕ್ತರು ಭಾಗವಹಿಸಬಹುದು. ಮೇ 16ರೊಳಗೆ ಗೂಗಲ್ ಫಾರ್ಮ್ ಮೂಲಕ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ನೀಡಲಾದ ದೂರವಾಣಿ ಸಂಖ್ಯೆ ಅಥವಾ ವೆಬ್‌ಸೈಟ್ ಸಂಪರ್ಕಿಸಬಹುದು.

training workshop on advanced data science and artificial intelligence from may 18

ವಿಕ ಸುದ್ದಿಲೋಕ ಬೆಂಗಳೂರು

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು (ಕೆಎಸ್ ಟಿಎ) ವಿಜ್ಞಾನ ಮತ್ತು ತಂತ್ರಜ್ಞಾನ ಆಸಕ್ತರಿಗಾಗಿ ‘ಸುಧಾರಿತ ದತ್ತಾಂಶ ವಿಜ್ಞಾನ , ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ’ ವಿಷಯದ ಕುರಿತು ಮೇ 18 ರಿಂದ 20ರವರೆಗೆ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ.

ವಿದ್ಯಾರಣ್ಯಪುರದ ಪ್ರೊ. ಯು.ಆರ್ . ರಾವ್ ವಿಜ್ಞಾನ ಭವನದಲ್ಲಿಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರದಲ್ಲಿನಾನಾ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಉಪನ್ಯಾಸ ನೀಡಲಿದ್ದಾರೆ. ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು, ಪ್ರಾಧ್ಯಾಪಕರು ಹಾಗೂ ವಿಜ್ಞಾನಾಸಕ್ತರು ಈ ಕಾರ್ಯಾಗಾರದಲ್ಲಿಭಾಗವಹಿಸಲು ಅವಕಾಶವಿದೆ.

ಆಸಕ್ತರು ಮೇ 16ರೊಳಗಾಗಿ ಗೂಗಲ್ ಫಾಮ್ ರ್ ಘ್ಕಿhಠಿಠಿps://್ಛಟ್ಟಞs.ಜ್ಝಛಿ/ಈy್ಛ9ಓ್ಛಕಿ8ಖh್ಞ್ಕಔಈಏಏ6 ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕರನ್ನು 9620767819 ಮೂಲಕ ಸಂಪರ್ಕಿಸಬಹುದು ಅಥವಾ ಅಕಾಡೆಮಿಯ ಅಧಿಕೃತ ವೆಬ್ ಸೈಟ್ ಘ್ಕಿhಠಿಠಿps://ksಠಿa್ಚadಛಿಞy.ಜ್ಞಿ ವೀಕ್ಷಿಸಬಹುದು ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಆರ್ . ಪ್ರಕಟಣೆಯಲ್ಲಿತಿಳಿಸಿದ್ದಾರೆ.