ಉಪನ್ಯಾಸ-4

Contributed bystevan.rego@timesgroup.com|Vijaya Karnataka

ಯಾವುದೇ ವಸ್ತು ಖರೀದಿಸುವಾಗ ಐಎಸ್ಐ ಗುರುತು ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಬಹುದು. ಚಿನ್ನ ಖರೀದಿಸುವಾಗ ಹಾಲ್ಮಾರ್ಕ್ ಖಾತ್ರಿಪಡಿಸಿಕೊಳ್ಳಿ. ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಸಂಪನ್ಮೂಲ ವ್ಯಕ್ತಿ ಶ್ರೀಕರ್ ಬಿ. ಅವರು ಈ ಸಲಹೆ ನೀಡಿದ್ದಾರೆ. ಬಿಐಎಸ್ ಕೇರ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ನಕಲಿ ಐಎಸ್ಐ ಮಾರ್ಕ್ ಬಗ್ಗೆ ಎಚ್ಚರವಿರಲಿ.

understanding the importance of isi mark for consumers

ಉಪನ್ಯಾಸ-4

ಐಎಸ್ ಐ ಗುರುತಿರುವ ವಸ್ತುಗಳನ್ನೇ ಖರೀದಿಸಿ: ಶ್ರೀಕರ

ಯಾವುದೇ ಉತ್ಪನ್ನಗಳನ್ನು ಖರೀದಿಸುವಾಗ ಐಎಸ್ ಐ ಗುರುತು ಉಂಟೇ ಎಂದು ಮೊದಲು ನೋಡಿಕೊಳ್ಳಿ. ಗುಣಮಟ್ಟ ಚೆನ್ನಾಗಿಲ್ಲದಿದ್ದರೆ ದೂರು ಕೊಡಬಹುದು, ಹಣ ಸಿಗದು (ಗ್ರಾಹಕ ನ್ಯಾಯಾಲಯದ ಮೊರೆ ಹೋಗಬೇಕು) ಬದಲಿ ಉತ್ಪನ್ನ ಅಥವಾ ರಿಪೇರಿ ಮಾಡಿಕೊಡಲು ಸಾಧ್ಯ. ಚಿನ್ನ ಖರೀದಿ ವೇಳೆ ಹಾಲ್ ಮಾರ್ಕ್ ಖಾತರಿಪಡಿಸಬೇಕು. ಈ ನಿಟ್ಟಿನಲ್ಲಿಬಿಐಎಸ್ ಕೇರ್ ಆ್ಯಪ್ ಡೌನ್ ಮಾಡಿಕೊಳ್ಳಿ ಎಂದು ಭಾರತೀಯ ಮಾನಕ ಬ್ಯೂರೋ (ಬಿಐಎಸ್ ) ಸಂಪನ್ಮೂಲ ವ್ಯಕ್ತಿ ಶ್ರೀಕರ್ ಬಿ. ಹೇಳಿದರು.

ಭಾರತೀಯ ಮಾನಕ ಬ್ಯೂರೋದಡಿಯಲ್ಲಿ14 ವಿಭಾಗದಲ್ಲಿಐಎಸ್ ಐ ಮಾರ್ಕ್ ನೀಡುವ ಕ್ರಮವಿದೆ. ಇದರಲ್ಲಿಫುಡ್ ಆ್ಯಂಡ್ ಅಗ್ರಿಕಲ್ಚರ್ ಒಂದು ವಿಭಾಗವಾಗಿದ್ದು, ಕೃಷಿಕರು ತಮ್ಮ ಕೃಷಿಗೆ ಖರೀದಿ ಮಾಡುವ ವಸ್ತುಗಳಲ್ಲಿಐಎಸ್ ಐ ಮಾರ್ಕ್ ನೋಡಿಕೊಂಡು ಖರೀದಿ ಮಾಡಿದರೆ ಒಳ್ಳೆಯದು. ಈಗಾಗಲೇ 20 ಸಾವಿರ ವಸ್ತುಗಳಿಗೆ ದೇಶದಲ್ಲಿಐಎಸ್ ಐ ಮಾರ್ಕ್ ನೀಡಲಾಗಿದೆ. ಕೆಲವು ಮಂದಿ ನಕಲಿ ಐಎಸ್ ಐ ಮಾರ್ಕ್ಗಳನ್ನು ಬಳಸಿಕೊಂಡು ಮೋಸ ಮಾಡುತ್ತಾರೆ. ಈ ಕುರಿತು ಆ್ಯಪ್ ನಲ್ಲಿಗ್ರಾಹಕರು ನೇರವಾಗಿ ದೂರು ನೀಡಿದರೆ ಕ್ರಮ ಜರುಗಿಸುವ ಕಾರ ್ಯವನ್ನು ಮಾಡಲಾಗುತ್ತದೆ ಎಂದು ಅವರು ರೈತರಿಗೆ ಮಾಹಿತಿ ಹಂಚಿಕೊಂಡರು.

ಎಲ್ಲಕ್ಕೂ ಐಎಸ್ ಐ ಮಾರ್ಕ್ ನೀಡಲು ಸಾಧ್ಯವಿಲ್ಲ. ಉದಾಹರಣೆಗೆ ಉಪ್ಪಿನಕಾಯಿ, ಜ್ಯೂಸ್ ಇತ್ಯಾದಿಯನ್ನು ಯಾರು ಕೂಡ ಮಾಡಿ ಮಾರಾಟ ಮಾಡಬಹುದು. ಆದರೆ ಕೆಲವು ವಸ್ತುಗಳಿಗೆ ಮಾತ್ರ ಐಎಸ್ ಐ ಮುದ್ರೆ ನೀಡಲಾಗುತ್ತದೆ. ಇದರಿಂದ ವಸ್ತುವಿನ ಗುಣಮಟ್ಟವನ್ನು ಅಳತೆ ಮಾಡಬಹುದು. ಚಿನ್ನದಲ್ಲಿಹಾಲ್ ರ್ ಮಾರ್ಕ್ ಇದ್ದರೆ ಮಾತ್ರ ಅದು ಅಪ್ಪಟ ಚಿನ್ನ ಎನ್ನಬಹುದು. ಉಳಿದಂತೆ ಜುವೆಲ್ಲರಿ ಮಾಲೀಕರು ಹೆಚ್ಚು ರಿಯಾಯಿತಿ ನೀಡಿ ಚಿನ್ನದ ನೀಡಿದರೂ ಹಾಲ್ ಮಾರ್ಕ್ ಖಾತರಿ ಮಾಡಿಕೊಳ್ಳುವುದು ಅಗತ್ಯ ಎಂದರು.

ಚಿತ್ರ: 13ಎಂ- ಶ್ರೀಕರ