ವಿಟ್ಲಸರಕಾರಿ ಐಟಿಐ ಪ್ರವೇಶಕ್ಕೆ ಅರ್ಜಿ ಆಹ್ವಾನ

Contributed byganeshaprasadapandelu@gmail.com|Vijaya Karnataka

ವಿಟ್ಲ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್ 2026 ರ ಶೈಕ್ಷಣಿಕ ಸಾಲಿಗೆ ಪ್ರವೇಶ ಆರಂಭವಾಗಿದೆ. ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ 10ನೇ ತರಗತಿ ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎಲೆಕ್ಟ್ರಿಷಿಯನ್, ಫಿಟ್ಟರ್, ಕೋಪಾ ಸೇರಿದಂತೆ ಹಲವು ಕೋರ್ಸ್‌ಗಳು ಲಭ್ಯವಿದೆ. ಮೇ 8 ರವರೆಗೆ ಅರ್ಜಿ ಸಲ್ಲಿಸಬಹುದು. ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ.

application invitation for vittla government iti admission 2026

ವಿಕ ಸುದ್ದಿಲೋಕ ವಿಟ್ಲ

ವಿಟ್ಲದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿಆಗಸ್ಟ್ -2026 ನೇ ಶೈಕ್ಷಣಿಕ ಸಾಲಿಗಾಗಿ ಕೆಳಕಂಡ ವಿವಿಧ ವೃತ್ತಿಗಳಿಗೆ ಪ್ರವೇಶ ಪಡೆಯಲು 10ನೇ ತರಗತಿ ಪಾಸಾದ ಅರ್ಹ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಎರಡು ವರ್ಷದ ಎಲೆಕ್ಟ್ರಿಷಿಯನ್ , ಎಲೆಕ್ಟ್ರಾನಿಕ್ ಮೆಕ್ಯಾನಿಕ್ , ಫಿಟ್ಟರ್ , ರೆಫ್ರಿಜರೇಶನ್ ಆ್ಯಂಡ್ ಏರ್ ಕಂಡೀಷನಿಂಗ್ ಟೆಕ್ನಿಷಿಯನ್ , ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ , ಸಿ.ಎನ್ .ಸಿ ಮೆಷಿನಿಂಗ್ ಟೆಕ್ನಿಷಿಯನ್ ಹಾಗೂ ವರ್ಚುವಲ್ ಅನಾಲಿಸಸ್ ಆ್ಯಂಡ್ ಡಿಸೈನರ್ (ಫಿನಿಟ್ ಎಲಿಮೆಂಟ್ ಮೆಥಡ್ )ವೃತ್ತಿಗಳು ಹಾಗೂ ಒಂದು ವರ್ಷದ ಕಂಪ್ಯೂಟರ್ ಆಪರೇಟರ್ ಆ್ಯಂಡ್ ಪ್ರೋಗ್ರಾಮಿಂಗ್ , ಅಸಿಸ್ಟೆಂಟ್ (ಕೋಪಾ), ಇಂಡಸ್ಟ್ರಿಯಲ್ ರೋಬೋ ಟಿಕ್ಸ್ ಆ್ಯಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಷಿಯನ್ , ಮ್ಯಾನುಫ್ಯಾಕ್ಚರಿಂಗ್ ಪ್ರೋಸೆಸ್ ಕಂಟ್ರೋಲ್ ಆ್ಯಂಡ್ ಅಟೋಮೇಶನ್ ಟೆಕ್ನಿಷಿಯನ್ ಹಾಗೂ ಎಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್ ವೃತ್ತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ.

ಅಭ್ಯರ್ಥಿಗಳು ಇಲಾಖಾ ವೆಬ್ ಸೈಟ್ ಘ್ಕಿಡಿಡಿಡಿ.್ಚಜಿಠಿಛಿ.ka್ಟ್ಞaಠಿaka.ಜಟvಠಿ.ಜ್ಞಿ ರ ಮೂಲಕ ಅಥವಾ ಹತ್ತಿರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಬಂದು ಉಚಿತವಾಗಿ ಮೇ 8 ರವರೆಗೆ ಆನ್ ಲೈನ್ ಅರ್ಜಿ ಸಲ್ಲಿಸಬಹುದಾಗಿದೆ. ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಪ್ರವೇಶ. ಹೆಚ್ಚಿನ ಮಾಹಿತಿಗೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿಟ್ಲಕಚೇರಿ ಸಂಪರ್ಕಿಸಲು ಕೋರಲಾಗಿದೆ.