ವಿಕ ಸುದ್ದಿಲೋಕ ತೊಕ್ಕೊಟ್ಟು
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿರೋಯಲ್ ಎಜುಕೇಶನಲ್ ಟ್ರಸ್ಟ್ ಅಧೀನದಲ್ಲಿರುವ ವಿದ್ಯಾನಗರದ ಅಂಬರ್ ವ್ಯಾಲಿ ಆಂಗ್ಲಮಾಧ್ಯಮ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿದೆ.
ಒಟ್ಟು 31 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 10 ಮಂದಿ ವಿಶಿಷ್ಟ ಶ್ರೇಣಿ, 14ಮಂದಿ ಪ್ರಥಮ ದರ್ಜೆಯಲ್ಲಿಉತ್ತೀರ್ಣರಾಗಿದ್ದಾರೆ. ಅವಳಿ ವಿದ್ಯಾರ್ಥಿಗಳಾದ ಆಸ್ಫಿಯ 598 (ಶೇ.95.68) ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ, ಆರ್ಫಿಯ 585(93.6 ಶೇ.) ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಆಯಿಶ ಮುಹೀನ 580(ಶೇ.92.8) ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಅಶ್ಫಿಯಾ ಹಾಗೂ ಆರ್ಫಿಯ ಅವಳಿಗಳಾಗಿದ್ದು ಅಪ್ಪ ಹೈದರ್ ಕೈರಂಗಳ ಹಾಗೂ ಅಮ್ಮ ಫಾತಿಮಾ ಹೈದರ್ ಇಬ್ಬರೂ ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾಗಿದ್ದಾರೆ.
ಫೋಟೋ 30ಉಳ್ಳಾಲ್ ಆಸ್ಫಿಯ , ಆರ್ಫಿಯ (ಒಂದು ಫೋಟೊ ಸಾಕು)

