ಮಂಗಳೂರು: ರೋಟರಾರ ಯಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಆಶ್ರಯದಲ್ಲಿ20ನೇ ವಾರ್ಷಿಕ ಜಿಲ್ಲಾಮಟ್ಟದ ಅಂತರ್ ಕ್ಲಬ್ ರೋಟರಾರ ಯಕ್ಟ್ ರಸಪ್ರಶ್ನೆ ಸ್ಪರ್ಧಾಕೂಟ ಮೇ 3ರಂದು ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿಬೆಳಗ್ಗೆ 11ಕ್ಕೆ ನಡೆಯಲಿದೆ.
ದಿ. ಶಾಂತರಾಮ್ ವಾಮಂಜೂರ್ ಅವರ ಸ್ಮರಣಾರ್ಥ ರಸಪ್ರಶ್ನಾ ಕೂಟವನ್ನು ಪ್ರತೀ ವರ್ಷ ಆಯೋಜಿಸಲಾಗುತ್ತಿದೆ. ಸ್ಪರ್ಧಾಕೂಟವು ಕೇವಲ ರೋಟರಾರ ಯಕ್ಟ್ ಸಂಸ್ಥೆಯ ವಿಷಯದಲ್ಲಿನಡೆಯಲಿದೆ. ರೋಟರಾರ ಯಕ್ಟ್ ಸಂಸ್ಥೆಯ ಸದಸ್ಯರು ಉಚಿತವಾಗಿ ಭಾಗವಹಿಸಬಹುದು.
ರೋಟರಾರ ಯಕ್ಟ್ ಕ್ಲಬ್ ಅಧ್ಯಕ್ಷ ಅಕ್ಷಯ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ರೈ, ಮೈಸೂರು ನಗರ ಮೂಲದ ಜಿಲ್ಲಾರೋಟರಾರ ಯಕ್ಟ್ ಪ್ರತಿನಿಧಿ ಪ್ರಜ್ವಲ್ ಹಾಗೂ ಖ್ಯಾತ ತುಳು ಚಲನಚಿತ್ರ ನಟ ಭೋಜರಾಜ್ ವಾಮಂಜೂರು ಭಾಗವಹಿಸಲಿದ್ದಾರೆ. ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ, ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ರೋಟರಾರ ಯಕ್ಟ್ ಸಂಸ್ಥೆಯ ಸಭಾಪತಿ ಹಾಗೂ ಸ್ಪರ್ಧಾ ನಿರೂಪಕ ಡಾ. ದೇವದಾಸ್ ರೈ ಪ್ರಕಟಣೆಯಲ್ಲಿತಿಳಿಸಿದ್ದಾರೆ.

