ಖ್ಯಾತ ನಟಿ ಪೂಜಾ ಹೆಗ್ಡೆ ತಮ್ಮ ತವರು ಕರಾವಳಿಗೆ ಭೇಟಿ ನೀಡಿದ್ದಾರೆ. ಅವರು ಅಲ್ಲಿನ ಪ್ರಸಿದ್ಧ ದೇವಾಲಯಗಳಲ್ಲಿ ದೇವರ ದರ್ಶನ ಪಡೆದಿದ್ದಾರೆ. ಕುಟುಂಬದವರೊಂದಿಗೆ ಸಮಯ ಕಳೆಯುತ್ತಾ, ಮನೆಯ ದೈವಗಳ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಬಾಲಿವುಡ್ ಸಿನಿಮಾಗಳ ಚಿತ್ರೀಕರಣ ಮುಗಿಸಿರುವ ಪೂಜಾ ಹೆಗ್ಡೆ, ಬಿಡುಗಡೆಗೆ ಕಾಯುತ್ತಿದ್ದಾರೆ.
ತವರಿನಲ್ಲಿಪೂಜಾ ಹೆಗ್ಡೆ
ಸೌತ್ ಸಿನಿಮಾದ ಸೂಪರ್ ಹಿಟ್ ಸಿನಿಮಾಗಳ ಬೇಡಿಕೆಯ ನಟಿ ಪೂಜಾ ಹಗ್ಡೆ ಮೂಲತಃ ಕನ್ನಡದ ಕರಾವಳಿ ತೀರದವರು. ಸದ್ಯ ಬಾಲಿವುಡ್ ನ ಹೇ ಜವಾನಿ ತೋ ಇಷ್ ್ಕ ಹೋನಾ ಹೈ, ಜನನಾಯಗನ್ , ಕಾಂಚನಾ-4 ಸಿನಿಮಾಗಳ ಶೂಟ್ ಮುಗಿಸಿ ರಿಲೀಸ್ ಗೆ ಕಾಯುವ ಸಮಯದಲ್ಲಿತವರಿಗೆ ಭೇಟಿ ನೀಡಿದ್ದಾರೆ. ಕರಾವಳಿಯ ಪ್ರಸಿದ್ಧ ದೇಗುಲಗಳಲ್ಲಿದೇವರ ದರ್ಶನ ಪಡೆದು, ಫ್ಯಾಮಿಲಿ ಜತೆ ಕಾಲ ಕಳೆಯುವ ಜತೆಗೆ ಮನೆಯ ದೈವಗಳ ವಿಶೇಷ ಪೂಜಾ ಕಾರ್ಯಗಳಲ್ಲಿಭಾಗಿಯಾಗಿದ್ದಾರೆ.