ಮಧ್ಯಮ ವಸತಿ ಯೋಜನೆಯಲ್ಲೂಸ್ಮಾರ್ಟ್ ಲಿವಿಂಗ್

Contributed bybabitha.salian@timesgroup.com|Vijaya Karnataka

ಸ್ಮಾರ್ಟ್ ಲಾಕ್, ಆ್ಯಪ್ ನಿಯಂತ್ರಿತ ಲೈಟಿಂಗ್‌ಗಳು ಈಗ ಮಧ್ಯಮ ವರ್ಗದ ಮನೆಗಳಿಗೂ ಲಭ್ಯವಾಗುತ್ತಿವೆ. ತಂತ್ರಜ್ಞಾನದ ಸುಲಭ ಲಭ್ಯತೆ, ಸುರಕ್ಷತೆ, ವಿದ್ಯುತ್ ಉಳಿತಾಯ, ಬದಲಾಗುತ್ತಿರುವ ಜೀವನಶೈಲಿ, ಬಿಲ್ಡರ್‌ಗಳ ಸ್ಪರ್ಧೆ ಇದಕ್ಕೆ ಕಾರಣವಾಗಿವೆ. ಬೆಂಗಳೂರಿನಂತಹ ನಗರಗಳಲ್ಲಿ ಸ್ಮಾರ್ಟ್ ಲಿವಿಂಗ್ ವೇಗವಾಗಿ ಹರಡುತ್ತಿದೆ. ಇದು ಜನರ ಬದುಕನ್ನು ಸರಳಗೊಳಿಸಿ, ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಸಹಕಾರಿಯಾಗಿದೆ. ಭವಿಷ್ಯದಲ್ಲಿ ಧ್ವನಿ ನಿಯಂತ್ರಿತ, ಕೃತಕ ಬುದ್ಧಿಮತ್ತೆ ಮನೆಗಳು ಸಾಮಾನ್ಯವಾಗಲಿವೆ.

middle housing projects welcome to the smart living trend

ರಿಯಾಲ್ಟಿ ಟ್ರೆಂಡ್ (ಸ್ಲಗ್ )

ಮಧ್ಯಮ ವಸತಿ ಯೋಜನೆಯಲ್ಲೂಸ್ಮಾರ್ಟ್ ಲಿವಿಂಗ್

ಇಂಟ್ರೊ

ಸ್ಮಾರ್ಟ್ ಡೋರ್ ಲಾಕ್ ಮತ್ತು ಆ್ಯಪ್ ಮೂಲಕ ನಿಯಂತ್ರಿಸುವ ಲೈಟಿಂಗ್ ವ್ಯವಸ್ಥೆಗಳು ಈವರೆಗೆ ಕೇವಲ ಪ್ರೀಮಿಯಂ ಮತ್ತು ಐಷಾರಾಮಿ ಅಪಾರ್ಟ್ ಮೆಂಟ್ ಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಈಗ ಬೆಲೆಗಳು ಏರಿಕೆಯಾಗುತ್ತಿದ್ದರೂ ಡೆವಲಪರ್ ಗಳು ಈ ತಂತ್ರಜ್ಞಾನವನ್ನು ದೇಶದಾದ್ಯಂತ ಮಧ್ಯಮ ವರ್ಗದ ವಸತಿ ಯೋಜನೆಗಳಲ್ಲಿಯೂ ಪರಿಚಯಿಸುತ್ತಿದ್ದಾರೆ.

------------------------------------

ಒಂದು ಕಾಲದಲ್ಲಿಕೇವಲ ಶ್ರೀಮಂತರ ಮನೆಗಳಿಗೆ ಅಥವಾ ವಿಜ್ಞಾನದ ಕಲ್ಪನೆಗಳಿಗೆ ಸೀಮಿತವಾಗಿದ್ದ ಸ್ಮಾರ್ಟ್ ಹೋಮ… ಪರಿಕಲ್ಪನೆಯು ಈಗ ಸಾಮಾನ್ಯ ಜನರ ಜೀವನದ ಭಾಗವಾಗುತ್ತಿದೆ. ಇದನ್ನು ಸ್ಮಾರ್ಟ್ ಲಿವಿಂಗ್ ಎಂದು ಕರೆಯಲಾಗುತ್ತಿದ್ದು, ಇದರಿಂದ ಜನರ ದೈನಂದಿನ ಕೆಲಸಗಳು ಸುಲಭ, ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗುತ್ತಿದೆ. ಸ್ಮಾರ್ಟ್ ಲಿವಿಂಗ್ ಎಂದರೆ ಕೇವಲ ದುಬಾರಿ ಗ್ಯಾಜೆಟ್ ಗಳ ಬಳಕೆ ಎಂದರ್ಥವಲ್ಲ. ಇದು ಅಂತರ್ಜಾಲದ ಮೂಲಕ ಸಂಪರ್ಕ ಹೊಂದಿದ ಸಾಧನಗಳನ್ನು ಬಳಸಿ ಮನೆಯ ವ್ಯವಸ್ಥೆಗಳನ್ನು ಸ್ಮಾರ್ಟ್ ಫೋನ್ ಅಥವಾ ಧ್ವನಿಯ ಮೂಲಕ ನಿಯಂತ್ರಿಸುವ ವಿಧಾನವಾಗಿದೆ. ಈಗ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿದೊಡ್ಡ ಬದಲಾವಣೆ ಕಂಡುಬರುತ್ತಿದೆ. ಈ ಕ್ಷೇತ್ರದಲ್ಲಿಬೆಲೆಗಳು ಏರಿಕೆಯಾಗುತ್ತಿದ್ದರೂ ಬಿಲ್ಡರ್ ಗಳು ಈಗ ಮಧ್ಯಮ ವರ್ಗದ ಮನೆಗಳಲ್ಲೂಸ್ಮಾರ್ಟ್ ತಂತ್ರಜ್ಞಾನಗಳನ್ನು ಅಳವಡಿಸುತ್ತಿದ್ದಾರೆ. ಈ ಬದಲಾವಣೆಗೆ ಕೆಲವು ಮುಖ್ಯ ಕಾರಣಗಳನ್ನು ವಿಶ್ಲೇಷಿಸಲಾಗಿದೆ. ಅವು ಯಾವುವೆಂದರೆ:

ತಂತ್ರಜ್ಞಾನದ ಸುಲಭ ಲಭ್ಯತೆ: ಮೊಬೈಲ್ ಫೋನ್ ಗಳು ಆರಂಭದಲ್ಲಿಹೇಗೆ ದುಬಾರಿಯಾಗಿದ್ದವೋ ಹಾಗೆಯೇ ಸ್ಮಾರ್ಟ್ ಹೋಮ್ ತಂತ್ರಜ್ಞಾನ ಕೂಡ ಮೊದಲು ದುಬಾರಿಯಾಗಿತ್ತು. ಈಗ ಇದರ ಬೆಲೆ ಕಡಿಮೆಯಾಗುತ್ತಿರುವುದರಿಂದ ಸಾಮಾನ್ಯ ಮನೆಗಳಿಗೂ ಇವುಗಳನ್ನು ಅಳವಡಿಸುವುದು ಸುಲಭವಾಗಿದೆ.

ಸುರಕ್ಷತೆ ಮತ್ತು ಸೌಕರ್ಯ: ಈಗ ಮನೆ ಖರೀದಿದಾರರು ಕೇವಲ ಐಷಾರಾಮಿ ಜೀವನಕ್ಕಾಗಿ ಮಾತ್ರವಲ್ಲದೆ, ತಮ್ಮ ಸುರಕ್ಷತೆ ಮತ್ತು ಸಮಯ ಉಳಿತಾಯಕ್ಕಾಗಿ ಸ್ಮಾರ್ಟ್ ಸಾಧನಗಳನ್ನು ಬಯಸುತ್ತಿದ್ದಾರೆ. ಡಿಜಿಟಲ್ ಲಾಕ್ , ಸಿಸಿಟಿವಿ ಕ್ಯಾಮೆರಾ ಮತ್ತು ವಿಡಿಯೊ ಡೋರ್ ಫೋನ್ ಗಳು ಈಗ ಕೇವಲ ಸೌಕರ್ಯವಲ್ಲ, ಪ್ರಮುಖ ಅತ್ಯಗತ್ಯಗಳಾಗಿವೆ.

ವಿದ್ಯುತ್ ಉಳಿತಾಯ: ಸ್ಮಾರ್ಟ್ ಲೈಟಿಂಗ್ ಮತ್ತು ಎನರ್ಜಿ ಮಾನಿಟರಿಂಗ್ ಸಿಸ್ಟಮ್ ಗಳು ವಿದ್ಯುತ್ ವ್ಯರ್ಥವಾಗುವುದನ್ನು ತಡೆಯುತ್ತವೆ. ಇದರಲ್ಲಿಮೊಬೈಲ್ ಮೂಲಕವೇ ಲೈಟ್ ಮತ್ತು ಫ್ಯಾನ್ ಆರಿಸುವ ಸೌಲಭ್ಯ ಇರುವುದರಿಂದ ವಿದ್ಯುತ್ ಬಿಲ್ ಕೂಡ ಕಡಿಮೆಯಾಗುತ್ತದೆ.

ಬದಲಾಗುತ್ತಿರುವ ಜೀವನಶೈಲಿ: ನಗರ ಪ್ರದೇಶಗಳಲ್ಲಿಕೆಲಸದ ಒತ್ತಡ ಮತ್ತು ಸಣ್ಣ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂತಹವರಿಗೆ ಮನೆಯ ಸುರಕ್ಷತೆಯನ್ನು ದೂರದಿಂದಲೇ ಗಮನಿಸಲು ಸ್ಮಾರ್ಟ್ ತಂತ್ರಜ್ಞಾನ ಬಹಳ ಸಹಕಾರಿಯಾಗಿದೆ.

ಮಾರುಕಟ್ಟೆಯಲ್ಲಿಬಿಲ್ಡರ್ ಸ್ಪರ್ಧೆ: ರಿಯಾಲ್ಟಿ ಮಾರುಕಟ್ಟೆಯಲ್ಲಿತೀವ್ರ ಪೈಪೋಟಿ ಇರುವುದರಿಂದ ಗ್ರಾಹಕರನ್ನು ಆಕರ್ಷಿಸಲು ಬಿಲ್ಡರ್ ಗಳು ಸ್ಮಾರ್ಟ್ ರೆಡಿ ಮನೆಗಳನ್ನು ನೀಡುತ್ತಿದ್ದಾರೆ. ಮಧ್ಯಮ ವರ್ಗದ ಗ್ರಾಹಕರು ಕೂಡ ಈಗ ಬಜೆಟ್ ಮತ್ತು ಸೌಲಭ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಿದ್ದು, ಭವಿಷ್ಯಕ್ಕೆ ಪೂರಕವಾದ ಮನೆಗಳನ್ನು ಖರೀದಿಸಲು ಆದ್ಯತೆ ನೀಡುತ್ತಿದ್ದಾರೆ.

ಬದಲಾಗುತ್ತಿವೆ ಭಾರತೀಯ ಮನೆಗಳು: ಭಾರತದಲ್ಲಿವಿಶೇಷವಾಗಿ ಬೆಂಗಳೂರಿನಂತಹ ನಗರಗಳಲ್ಲಿಸ್ಮಾರ್ಟ್ ಲಿವಿಂಗ್ ವೇಗವಾಗಿ ಹರಡುತ್ತಿದೆ. ಕೈಗೆಟಕುವ ದರದಲ್ಲಿಸಿಗುತ್ತಿರುವ ಸ್ಮಾರ್ಟ್ ಸಾಧನಗಳು ಮತ್ತು ಅಗ್ಗದ ಇಂಟರ್ನೆಟ್ ಸೇವೆಗಳು ಇದಕ್ಕೆ ಮುಖ್ಯ ಕಾರಣ. ಈಗ ಮಧ್ಯಮ ವರ್ಗದ ಕುಟುಂಬಗಳು ಕೂಡ ಸ್ಮಾರ್ಟ್ ಬಲ್ಬ… ಮತ್ತು ಸ್ಮಾರ್ಟ್ ಟಿವಿಗಳನ್ನು ಬಳಸುತ್ತಿರುವುದು ಈ ಬದಲಾವಣೆಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿಸ್ಮಾರ್ಟ್ ಲಿವಿಂಗ್ ಎನ್ನುವುದು ಕೇವಲ ಟ್ರೆಂಡ್ ಅಲ್ಲ, ಅದು ಜನರ ಭವಿಷ್ಯ ಜೀವನದ ಪ್ರತಿಬಿಂಬ. ಈ ತಂತ್ರಜ್ಞಾನ ಜನರ ಬದುಕನ್ನು ಬಹಳ ಸರಳಗೊಳಿಸಿ ಅವರು ತಮ್ಮ ಕುಟುಂಬದೊಂದಿಗೆ ಕಳೆಯಲು ಹೆಚ್ಚಿನ ಸಮಯ ನೀಡುತ್ತಿದೆ.

ಬಾಕ್ಸ್

ಸ್ಮಾರ್ಟ್ ಹಬ್

-ಈಗ ಮನೆಯಲ್ಲಿಸ್ಮಾರ್ಟ್ ಹೋಮ್ ಫೀಚರ್ ಗಳು ಇದ್ದರೆ ಒಳ್ಳೆಯದು ಎಂಬ ಹಂತದಿಂದ ಹಿಡಿದು ಖಂಡಿತಾ ಇರಲೇಬೇಕು ಎಂಬ ಹಂತಕ್ಕೆ ತಲುಪಿವೆ. ಮುಂದಿನ ದಿನಗಳಲ್ಲಿಧ್ವನಿ ನಿಯಂತ್ರಿತ ಸಾಧನಗಳು ಮತ್ತು ಕೃತಕ ಬುದ್ಧಿಮತ್ತೆ ಆಧರಿತ ಮನೆಗಳು ಸಾಮಾನ್ಯವಾಗಲಿವೆ.

-ತಂತ್ರಜ್ಞಾನ ಬೆಳೆದಂತೆಲ್ಲಾ ಜನರ ಜೀವನಶೈಲಿಯೂ ಬದಲಾಗುತ್ತಿದೆ. ಸ್ಮಾರ್ಟ್ ಲಿವಿಂಗ್ ಕೇವಲ ಸೌಕರ್ಯಕ್ಕಾಗಿ ಮಾತ್ರವಲ್ಲದೆ, ಸಮಯದ ಉಳಿತಾಯ ಮತ್ತು ಸುರಕ್ಷತೆಯ ದೃಷ್ಟಿಯಿಂದಲೂ ಅನಿವಾರ್ಯವಾಗುತ್ತಿದೆ. ಈ ನಿಟ್ಟಿನಲ್ಲಿಮುಂಬರುವ ದಿನಗಳಲ್ಲಿಪ್ರತಿ ಮನೆಯೂ ಒಂದು ಸ್ಮಾರ್ಟ್ ಹಬ… ಆಗುವುದರಲ್ಲಿಸಂಶಯವಿಲ್ಲ.