‘ಸಾಮೂಹಿಕ ವಿವಾಹದಿಂದ ದುಂದು ವೆಚ್ಚಕ್ಕೆ ಕಡಿವಾಣ’
ವಿಕ ಸುದ್ದಿಲೋಕ ಲಿಂಗಸುಗೂರು
‘‘ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು. ಅಲ್ಲದೆ, ಸೌಹಾರ್ದತೆ ಮತ್ತು ಸಹಕಾರದ ಸಂಕೇತ ಇದಾಗಿದೆ,’’ ಎಂದು ಕಾಂಗ್ರೆಸ್ ಯುವ ಮುಖಂಡ ಅಭಿಷೇಕ್ ಪಾಟೀಲ್ ಬಯ್ಯಾಪುರ ಹೇಳಿದರು.
ತಾಲೂಕಿನ ಹುನಕುಂಟಿ ಗ್ರಾಮದಲ್ಲಿಬಸವೇಶ್ವರ ದೇವಾಲಯದ ಲೋಕಾರ್ಪಣೆ ನಿಮಿತ್ತ ಬುಧವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿಮಾತನಾಡಿದರು. ‘‘ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಾಮೂಹಿಕ ವಿವಾಹ ಸಹಕಾರಿಯಾಗಿದೆ. ನೂತನ ಜೀವನಕ್ಕೆ ಕಾಲಿಡುತ್ತಿರುವ ದಂಪತಿಗಳು ಪರಸ್ಪರ ಗೌರವ, ನಂಬಿಕೆಯಿಂದ ನೆಮ್ಮದಿಯ ಜೀವನ ಸಾಗಿಸಬೇಕು,’’ ಎಂದರು.
ಅಂಕಲಿಮಠದ ಫಕೀರೇಶ್ವರ ಸ್ವಾಮೀಜಿ, ಹುನಕುಂಟಿ ಶರಣಯ್ಯ ತಾತ, ಮಾದಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಡಿ.ಎಸ್ .ಹೂಲಗೇರಿ, ಮುಖಂಡರಾದ ಗುಂಡಪ್ಪ ಕಾಚಾಪುರ, ಸಂಜೀವಪ್ಪ ಚಲುವಾದಿ, ಉಮೇಶ, ಪರಸಪ್ಪ ಹುನಕುಂಟಿ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ವಿಜಯರಾವ್ ದೇಶಪಾಂಡೆ, ಕಾರ್ಯದರ್ಶಿ ಗುಂಡನಗೌಡ ಇತರರಿದ್ದರು.
---
30ಆರ್ ಸಿಎಚ್ ಎಲ್ ಎನ್ ಜಿ1: ಲಿಂಗಸುಗೂರು ತಾಲೂಕಿನ ಹುನಕುಂಟಿ ಗ್ರಾಮದಲ್ಲಿನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿಕಾಂಗ್ರೆಸ್ ಯುವ ಮುಖಂಡ ಅಭಿಷೇಕ್ ಪಾಟೀಲ್ ಮಾತನಾಡಿದರು.

