ಎಂಎಲ್ಸಿಗೆ ರವಿಕುಮಾರ್ ಗೆ ಬುದ್ಧಿ ಭ್ರಮಣೆ
ವಿಕ ಸುದ್ದಿಲೋಕ ರಾಯಚೂರು
‘‘ತಳವಾರರಿಗೆ ಎಸ್ .ಟಿ ಪ್ರಮಾಣ ಪತ್ರ ನೀಡಬೇಕು ಎಂದು ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಎನ್ .ರವಿಕುಮಾರ್ ಅವರಿಗೆ ಬುದ್ಧಿ ಭ್ರಮಣೆಯಾಗಿದೆ,’’ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್ .ರಘುವೀರ್ ನಾಯಕ ಹೇಳಿದರು.
ನಗರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ತಳವಾರರಿಗೆ ಎಸ್ .ಟಿ ಪ್ರಮಾಣ ಪತ್ರ ನೀಡಬೇಕು ಎಂದು ಅವರು ಹೇಳುತ್ತಿದ್ದಾರೆ. ಆದರೆ, ಎಲ್ಲಜಾತಿಗಳಲ್ಲೂತಳವಾರ ಸಮುದಾಯದವರು ಇದ್ದಾರೆ. ಹಾಗಾಗಿ, ಯಾವ ಸಮುದಾಯದ ತಳವಾರರು ಎಂದು ಸ್ಪಷ್ಟಪಡಿಸಬೇಕು. ಕೇಂದ್ರ ಸರಕಾರದ ಗೆಜೆಟ್ ನ್ನು ಒಮ್ಮೆ ಸರಿಯಾಗಿ ಓದಿ ಅರ್ಥೈಸಿಕೊಳ್ಳಬೇಕು. ನಾಯಕ ಸಮುದಾಯದ ತಳವಾರರಿಗೆ ಮಾತ್ರ ಎಸ್ ಟಿ ಪಟ್ಟಿಗೆ ಸೇರಿದ್ದಾರೆ. ಇತರ ಸಮುದಾಯದ ತಳವಾರರು ಅಲ್ಲಎಂಬುದು ಮೊದಲು ಅರಿಯಬೇಕು,’’ ಎಂದರು.
‘‘ತಮ್ಮ ಹೇಳಿಕೆ ಮೂಲಕ ಎನ್ .ರವಿಕುಮಾರ್ ಅವರು ಸಮುದಾಯಗಳ ಮಧ್ಯೆ ಸಂಘರ್ಷ ಸೃಷ್ಟಿಸುತ್ತಿದ್ದು, ತಪ್ಪು ಹೇಳಿಕೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ಬೆಳಗಾವಿ ಅಧಿವೇಶನ ಸಂದರ್ಭ ಎಂಎಲ್ ಸಿ ತಿಪ್ಪಣ್ಣ ಕುಮಕನೂರು ಮತ್ತು ಇತರ ಸಮುದಾಯದ ಮುಖಂಡರ ಒತ್ತಾಯದ ಮೇರೆಗೆ ಸಿಎಂ ನೇತೃತ್ವದಲ್ಲಿಅಧಿಕಾರಿಗಳು ಮತ್ತು ಮಂತ್ರಿಗಳ ಸಮ್ಮುಖದಲ್ಲಿನಡೆದ ಸಭೆಯಲ್ಲಿಯಾವ ತಳವಾರರು ಎಸ್ .ಟಿ ಗೆ ಸೇರಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ,’’ ಎಂದು ಹೇಳಿದರು.
ಆಗ್ರಹ:
‘‘ತಪ್ಪು ಹೇಳಿಕೆ ಹೇಳಿಕೆ ನೀಡುತ್ತಿರುವ ಎನ್ .ರವಿಕುಮಾರ್ ಅವರನ್ನು ಬಿಜೆಪಿಯವರು ಕೂಡಲೇ ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ಕೆಳಗಿಸಬೇಕು. ಇಂತಹ ತಪ್ಪು ಹೇಳಿಕೆ ನೀಡುವ ಮೂಲಕ ಸಮುದಾಯಗಳ ಮಧ್ಯೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಕೇಂದ್ರ ಸರಕಾರ ಎಸ್ .ಟಿ. ಪಟ್ಟಿಯಲ್ಲಿಸೇರಿಸುವ ಸಮಯದಲ್ಲಿನಾಯಕ ಸಮುದಾಯದ ಉಪ ಪಂಗಡಗಳಾಗಿರುವುದರಿಂದಲೇ ತಳವಾರ ಮತ್ತು ಪರಿವಾರ ಪದಗಳನ್ನು ಕ್ರಮ ಸಂಖ್ಯೆ 38ರಲ್ಲಿಸೇರಿಸಿದ್ದಾರೆ ಎಂಬುದನ್ನು ಅರ್ಥೈಸಿಕೊಳ್ಳುವಲ್ಲಿವಿಫಲರಾದ ಎನ್ .ರವಿಕುಮಾರ್ ಕೂಡಲೇ ಇಂತಹ ಹೇಳಿಕೆ ನೀಡುವುದು ನಿಲ್ಲಿÜಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎನ್ .ರವಿಕುಮಾರ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು,’’ ಎಂದು ಎಚ್ಚರಿಕೆ ನೀಡಿದರು.
ಮಲ್ಲಿಕಾರ್ಜುನ ನಾಯಕ, ರಾಮು ನಾಯಕ, ರಮೇಶ ನಾಯಕ, ಮಹೇಶ ನಾಯಕ, ಮಲ್ಲೇಶ ನಾಯಕ, ರಾಮಕೃಷ್ಣ ನಾಯಕ ಇತರರಿದ್ದರು.
---
30ಎಂಎಸ್ 02
ರಘುವೀರ ನಾಯಕ

