ವರ್ತುಲ ರಸ್ತೆ ನಿರ್ಮಾಣಕ್ಕೆ ಒತ್ತಾಯ
ವಿಕ ಸುದ್ದಿಲೋಕ ರಾಯಚೂರು
‘‘ನಗರದಲ್ಲಿನ ಸಂಚಾರದ ದಟ್ಟಣೆ ಸಮಸ್ಯೆ ನಿವಾರಿಸಲು ಹೊರವಲಯದಲ್ಲಿವರ್ತುಲ ರಸ್ತೆ ನಿರ್ಮಿಸಬೇಕು,’’ ಎಂದು ಆಗ್ರಹಿಸಿಸಮಾಜ ಸೇವಕ ಡಾ.ಬಾಬುರಾವ್ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.
‘‘ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚಿದೆ. ವಿಶೇಷವಾಗಿ ಶಕ್ತಿನಗರದಿಂದ ನಗರದ ನವೋದಯ ಮೆಡಿಕಲ್ ಕಾಲೇಜ್ ವರೆಗಿನ ಎನ್ ಎಚ್ ಇ 167 ರಸ್ತೆಯ ಸ್ಥಿತಿ ತೀರಾ ಗಂಭೀರವಾಗಿದೆ. ಮೂರ್ನಾಲ್ಕು ವರ್ಷಗಳಲ್ಲಿ800ಕ್ಕೂ ಹೆಚ್ಚು ಬಲಿ ಪಡೆದಿದೆ. ನಗರ ಹೊರವಲಯದಲ್ಲಿನಾಲ್ಕು ದಿಕ್ಕುಗಳನ್ನು ಸಂಪರ್ಕಿಸುವ ಸುಸಜ್ಜಿತ ವರ್ತುಲ ರಸ್ತೆ ನಿರ್ಮಾಣ ಮಾಡುವುದೊಂದೇ ಇದಕ್ಕೆ ಪರಿಹಾರವಾಗಿದೆ. ಆದ್ದರಿಂದ, ಇದನ್ನು ಗಂಭೀರವಾಗಿ ಪರಿಗಣಿಸಿ ಆದಷ್ಟು ಬೇಗ ರಿಂಗ್ ರೋಡ್ ನಿರ್ಮಿಸಿ, ನಗರದ ಬಹು ದಿನಗಳ ಕನಸನ್ನು ನನಸು ಮಾಡಬೇಕು,’’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಶ್ರೀನಿವಾಸ ಸೋಮಿಶೆಟ್ಟಿ, ಬಸವರಾಜ, ಖಲೀಂ ಅಹ್ಮದ್ , ಎಂ.ಎ.ಖಾಜಾ, ಮಲ್ಲಿಕಾರ್ಜುನ ಸ್ವಾಮಿ, ಬಾಲು, ಅಮರೇಶ ಇದ್ದರು.
---
30ಎಂಎಸ್ 03
ರಾಯಚೂರು ಹೊರವಲಯದಲ್ಲಿವರ್ತುಲ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಸಮಾಜ ಸೇವಕ ಡಾ.ಬಾಬುರಾವ್ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಗುರುವಾರ ಮನವಿ ಸಲ್ಲಿಸಿದರು.

