ಪ್ರತಿ ಅವಕಾಶಗಳೂ ಅಮೂಲ್ಯವಾದದ್ದು: ಮನೀಷ್ ಪಿ. ಶೆಟ್ಟಿ

Contributed byaishwaryabeejadi@gmail.com|Vijaya Karnataka

ತೆಕ್ಕಟ್ಟೆಯಲ್ಲಿ ನಡೆದ ರಜಾರಂಗು-2026 ಯಕ್ಷಗಾನ ಮುಖವರ್ಣಿಕೆ ಶಿಬಿರದಲ್ಲಿ ಸಾಧಕ ಬಾಲಕ ಮನೀಶ್‌ ಪಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದರಿಂದಲೇ ಯಶಸ್ಸು ಸಾಧ್ಯವಾಯಿತು ಎಂದು ಅವರು ತಿಳಿಸಿದರು. ರಂಗಭೂಮಿಯಲ್ಲಿ ಮುಖ್ಯ ನಟನಾಗಿ ಅಭಿನಯಿಸುವ ಅವಕಾಶ ತಮ್ಮ ಬದುಕಿನಲ್ಲಿ ಮಹತ್ವದ ತಿರುವು ನೀಡಿತು ಎಂದು ಅವರು ಸ್ಮರಿಸಿದರು. ಈ ಸಂದರ್ಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದರು.

every opportunity is invaluable manish p shetty

ವಿಕ ಸುದ್ದಿಲೋಕ ತೆಕ್ಕಟ್ಟೆ

ಅವಕಾಶ ಗಳು ಸಿಕ್ಕಾಗ ಕೈಗೆತ್ತಿಕೊಂಡು ಕಾರ್ಯಪ್ರವೃತ್ತರಾಗಬೇಕು. ಪ್ರತಿ ಅವಕಾಶಗಳೂ ಅಮೂಲ್ಯವಾದದ್ದು. ಬಂದ ಅವಕಾಶ ಕೈ ತಪ್ಪಿಸಿಕೊಂಡರೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಹೀಗೆ ಪ್ರತಿ ಅವಕಾಶವನ್ನೂ ಪಡೆದು ಸಂಭ್ರಮಿಸಿದ ಕಾರಣದಿಂದಲೇ ಇಂದು ಇಷ್ಟು ಎತ್ತರಕ್ಕೇರಲು ಸಾಧ್ಯವಾಯಿತು. ರಜಾರಂಗು ಶಿಬಿರದ ಆರಂಭದ ದಿನದಲ್ಲಿರಂಗಭೂಮಿಯಲ್ಲಿಮುಖ್ಯ ನಟನಾಗಿ ಅಭಿನಯಿಸುವ ಅವಕಾಶ ಮರೆಲಾರದು. ಈ ಅವಕಾಶದಿಂದಲೇ ಇನ್ನಷ್ಟು ಎತ್ತರಕ್ಕೆ ಏರಲು ಸಾಧ್ಯವಾಯಿತು ಎಂದು ಸಾಧಕ ಬಾಲಕ ಮನೀಶ್ ಪಿ. ಶೆಟ್ಟಿ ಹೇಳಿದರು.

ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ, ಧಮನಿ ಟ್ರಸ್ಟ್ ತೆಕ್ಕಟ್ಟೆ, ಶ್ರೀಪರ್ಣ ಯಕ್ಷ ಬಳಗ ತೆಕ್ಕಟ್ಟೆ, ಯಶಸ್ವಿ ಮಹಿಳಾ ಬಳಗ ತೆಕ್ಕಟ್ಟೆ ಅವರ ಸಂಯುಕ್ತ ಆಶ್ರಯದಲ್ಲಿತೆಕ್ಕಟ್ಟೆಯ ಆಚಾರ್ಯ ಸಹೋದರರ ತಾಣದಲ್ಲಿಜರುಗಿದ ರಜಾರಂಗು-2026 ಯಕ್ಷಗಾನ ಮುಖವರ್ಣಿಕೆ ಶಿಬಿರದಲ್ಲಿಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಯಕ್ಷಗಾನ ಮುಖವರ್ಣಿಕೆಯ ಸಂಪನ್ಮೂಲ ವ್ಯಕ್ತಿ ರಾಹುಲ್ ಕೋಟ, ಅನೂಪ್ ಉರಾಳ, ಶಿಬಿರದ ನಿರ್ದೇಶಕ ರೋಹಿತ್ ತೀರ್ಥಹಳ್ಳಿ, ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು.

ಪೋಟೋ//30ಎಬಿ-ಎಮ್ ಎಎನ್ // ಸಾಧಕ ಬಾಲಕ ಮನೀಶ್ ಪಿ. ಶೆಟ್ಟಿ ಸನ್ಮಾನಿಸಲಾಯಿತು.