ಕಧಿರ್ತವ್ಯ ನಿಧಿರ್ವಧಿಹಣೆ ವೇಳೆ ತಾಳ್ಮೆ ಅಧಿವಧಿಶ್ಯ
- ವಾರ್ತಾ ಇಲಾಖೆ ವಾಹನ ಚಾಲಕ ಮಂಜುನಾಥ್ ಗೆ ಬೀಳ್ಕೊಡುಗೆ
ವಿಕ ಸುದ್ದಿಲೋಕ ಮೈಸೂರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ27 ವರ್ಷ ಸುದೀರ್ಘ ಸೇವೆಯನ್ನು ಮೈಸೂರು ಜಿಲ್ಲೆಯಲ್ಲಿಸಲ್ಲಿಸಿ ಗುರುವಾರ ನಿವೃತ್ತಿ ಹೊಂದಿದ ವಾಹನ ಚಾಲಕ ಮಂಜುನಾಥ್ ಪಿ. ಅವರನ್ನು ಬೀಳ್ಕೊಡಲಾಯಿತು.
ಉಪ ನಿರ್ದೇಶಕ ವಿನೋದ್ ಚಂದ್ರ ಮಾತನಾಡಿ, ‘‘ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿವಾರ್ತಾ ಇಲಾಖೆಯ ಪಾತ್ರ ಪ್ರಮುಖವಾದದ್ದು. ಪತ್ರಕರ್ತರ ವಾಹನದ ಚಾಲಕರಾಗಿ ಸೇವೆ ಸಲ್ಲಿಸುವಾಗ ತಾಳ್ಮೆ , ಸಂಯಮದಿಂದ ಕರ್ತವ್ಯ ನಿರ್ವಹಿಸಿದ್ದಾರೆ. ಸವಾಲಿನ ಸಂದರ್ಭಗಳಲ್ಲಿಯೂ ಇವರು ತೋರುತ್ತಿದ್ದ ಸಂಯಮ ಮತ್ತು ಕಾರ್ಯದಕ್ಷತೆ ಎಲ್ಲರಿಗೂ ಮಾದರಿ. ಸುದೀರ್ಘ 27 ವರ್ಷಗಳ ಕಾಲ ಮೈಸೂರು ಜಿಲ್ಲೆಯಲ್ಲಿಕರ್ತವ್ಯ ನಿರ್ವಹಿಸಿ ಇವರ ಅಪಾರ ಅನುಭವವು ಇಲಾಖೆಯ ಕಿರಿಯ ಸಿಬ್ಬಂದಿಗೆ ದಾರಿದೀಪವಾಗಿದೆ,’’ ಎಂದರು.
ಮಂಡ್ಯ ಜಿಲ್ಲೆಯ ಹಿರಿಯ ಸಹಾಯಕ ನಿರ್ದೇಶಕ ಹರೀಶ್ ಟಿ.ಕೆ. ಮಾತನಾಡಿ, ‘‘ಮಂಜುನಾಥ್ ಸೂಕ್ಷ್ಮ ಮನಸ್ಸಿನವರಾಗಿದ್ದು, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ’’ ಎಂದಧಿರು.
ಮೈಸೂರು ಜಿಲ್ಲೆಯ ಸಹಾಯಕ ನಿರ್ದೇಶಕಿ ಎಸ್ .ಎಚ್ .ನಿರ್ಮಲ ಮಾತನಾಡಿ, ‘‘ಮಂಜುನಾಥ್ ತಮ್ಮ ವೃತ್ತಿಯನ್ನು ಅಪಾರವಾಗಿ ಗೌರವಿಸುವ ವ್ಯಕ್ತಿ. ಅವರು ಎಷ್ಟೇ ಕೆಲಸದ ಒತ್ತಡದಲ್ಲಿದ್ದರೂ ಕಾರ್ಯಕ್ರಮಗಳ ಸಂದರ್ಭದಲ್ಲಿತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ವೃತ್ತಿಗೆ ಆದ್ಯತೆ ನೀಡುತ್ತಿಧಿದ್ದರು. ಇವರ ಈ ಕರ್ತವ್ಯ ನಿಷ್ಠೆ ಅಧಿಪಾಧಿರ,’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತಿ ಹೊಂದುತ್ತಿರುವ ಮಂಜುನಾಥ್ ಪಿ. ಮಾತನಾಡಿದರು. ಅವರ ಪತ್ನಿ ರತಿಶ್ರೀ ಗೌಡ, ವಾರ್ತಾ ಸಹಾಯಕ ರಮೇಶ್ ಕೆ.ಎನ್ ., ಗ್ರಂಥಪಾಲಕಿ ಗಾಯತ್ರಿ, ದ್ವಿತೀಯ ದರ್ಜೆ ಸಹಾಯಕ ಪ್ರತಾಪ್ ಎಂ.ಡಿ., ಮಗಳಾದ ಮಂಜು ಶ್ರೀ ಗೌಡ ಹಾಗೂ ಇನ್ನಿತರ ಸಿಬ್ಬಂದಿ ಉಪಸ್ಥಿತರಿದ್ದರು.
(ಫೋಟೋ ಇದೆ)

